Advertisement

ಸಾರಿಗೆ ಬಸ್‌ ಸಂಚಾರ ಆರಂಭ: ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

02:37 PM May 06, 2020 | mahesh |

ಶ್ರೀನಿವಾಸಪುರ: ಲಾಕ್‌ಡೌನ್‌ ಸಡಿಲಗೊಂಡ ಪರಿಣಾಮ ಕೆ.ಎಸ್‌.ಅರ್‌.ಸಿ ಬಸ್‌ ಸಂಚಾರ ಮಂಗಳವಾರದಿಂದ ಆರಂಭವಾಗಿದ್ದು, ಸರ್ಕಾರಿ ಕಚೇರಿಗಳಲ್ಲಿನ ಕೆಲಸ ಮಾಡುವವರಿಗೆ ಅನುಕೂಲವಾಗಿದೆ. ಪಟ್ಟಣದ ಕೆಎಸ್‌ಅರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬೆಳಗ್ಗೆ 7ರಿಂದ 10 ಗಂಟೆಯ ತನಕ ತರಕಾರಿ ಮಾರಾಟ ಮಾಡಲು ತಾಲೂಕು ಆಡಳಿತ ಅನುಮತಿ ನೀಡಿತ್ತು. ಬಸ್‌ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ನಿಲ್ದಾಣದ ಹಿಂದೆ ಅನುವು ಮಾಡಿಕೊಡಲಾಗಿದೆ. ಲಾಕ್‌ಡೌನ್‌ ಸಡಿಲಗೊಂಡ ಪರಿಣಾಮ ಸರ್ಕಾರಿ ನೌಕರರು ಕಚೇರಿಗಳಿಗೆ ಬರಲು 5 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 7ಕ್ಕೆ, ಸಂಜೆ 5ಕ್ಕೆ ಈ ಬಸ್‌ಗಳು ಸಂಚರಿಸುತ್ತವೆ. ಸರ್ಕಾರಿ ನೌಕರಿಗೆ ಮಾತ್ರವಲ್ಲದೇ ಸಾರ್ವಜನಿ ಕರಿಗೂ ಪ್ರಯಾಣ ಕಲ್ಪಿಸಲಾಗಿದ್ದರೂ ಕಡ್ಡಾಯವಾಗಿ ಕೆಲವು ನಿಯಮಗಳನ್ನು ಪಾಲಿಸಬೇಕು.

Advertisement

ಪ್ರಯಾಣಿಕರು ಮೊದಲು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾಗಬೇಕು. ನಂತರ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳು ಪರಿಶೀಲನೆ ಮಾಡಿದ ನಂತರವೇ ಪ್ರಯಾಣಿಕ ಬಸ್‌ ಏರಲು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲೆಯವರಿಗಾಗಿ ಮಾತ್ರ ಈ ಬಸ್‌ಗಳಲ್ಲಿ ಸಂಚರಿಸಲು ಅವಕಾಶವಿದ್ದು, ಅವರು ಆಧಾರ ಐಡಿ ರಿಸಬೇಕಾಗುತ್ತದೆ. ಒಟ್ಟಾರೆ ಬಸ್‌ ನಿಲ್ದಾಣಕ್ಕೆ ಮತ್ತೆ ಕಳೆ ಬಂದಿದ್ದು, ಕೆಎಸ್‌ಅರ್‌ಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರು ಲಾಕ್‌ಡೌನ್‌ ಸಡಿಲಗೊಂಡ ಕಾರಣ ನಿಲ್ದಾಣದಲ್ಲಿ ಓಡಾಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next