Advertisement
ಮುಡಾಯೂರಿನಲ್ಲಿಮಾಲಾಡಿ ಗ್ರಾಮದ ಮುಡಾಯೂರಿನಲ್ಲಿ ಡಾ| ಎನ್.ಎಂ. ಜೋಸೆಫ್ ಅವರ ಮಾರ್ಗದರ್ಶನದಲ್ಲಿ ರವಿಶಂಕರ ಶೆಟ್ಟಿ, ಮೆಲ್ವಿನ್, ಸೇಸಪ್ಪ ಅವರ ಸಹಕಾರದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ನೆಸ್ಸೆಸ್‌ನ ಜಲಕ್ರಾಂತಿ ತಂಡ, ಬೆಳ್ತಂಗಡಿ ಸೈಂಟ್ ಥಾಮಸ್ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳ ತಂಡ 60 ಅಡಿ ಅಗಲದ ಹೊಳೆಗೆ 7 ಅಡಿ ಅಗಲದ 6 ಕಿಂಡಿ, 10 ಅಡಿ ಆಳದ ತಡೆಗೋಡೆ ರಚಿಸಿದರು. ಹೊಳೆಯಿಂದ ಮರಳು ತೆಗೆದು ಗೋಣಿ ಚೀಲದಲ್ಲಿ ತುಂಬಿಸಿ ಹಲಗೆ ಜತೆಗಿಟ್ಟು ಅಣೆಕಟ್ಟು ನಿರ್ಮಿಸಿ ರಜಾದಿನವನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು.
ಸುಮಾರು 25 ವರ್ಷಗಳಿಂದ ಕಟ್ಟ ನೀರಿನ ಹರಿವು ದೊರೆಯುವಂತೆ ಮಾಡಿದ್ದು ಈ ವಿದ್ಯಾರ್ಥಿಗಳ ಯಶೋಗಾಥೆ. ಸರಕಾರಿ ಲೆಕ್ಕದಲ್ಲಾದರೆ 30 ಸಾ. ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಅಣೆಕಟ್ಟ ವಿದ್ಯಾರ್ಥಿಗಳ ಶ್ರಮದಾನದಿಂದ ತಯಾರಾಗಿ ಈಗ ಸಮೃದ್ಧ ನೀರು ಸಂಗ್ರಹವಾಗಿದೆ. ನಮ್ಮ ಮನೆ ಬಾವಿಯಲ್ಲಿ ನೀರಿದೆ, ನಮಗೆ ಬೋರಿದೆ ಎನ್ನುತ್ತಿದ್ದವರು ಕೂಡಾ ಜಲಾಘಾತ ಅನುಭವಿಸಿ ಕೊಳವೆ ಬಾವಿ ಖಾಲಿಯಾಗಿ, ಬಾವಿ ಬರಿದಾಗಿ ನೀರಿನ ಕಷ್ಟ ಅನುಭವಿಸಿದ್ದರು. ಈಗ ಈ ಅಣೆಕಟ್ಟುಗಳಿಂದಾಗಿ ಬಾವಿ- ಕೊಳವೆ ಬಾವಿಗಳಲ್ಲಿ ನೀರಿನ ಒರತೆ ಇಣುಕಿ, ಖುಷಿಯಲ್ಲಿದ್ದಾರೆ. ಅಣೆಕಟ್ಟುಗಳಿಂದ ಆಗುವ ಲಾಭದ ಸ್ವಾನುಭವ ಕಥನ ವಿವರಿಸಲು ಸಜ್ಜಾಗಿದ್ದಾರೆ.
Related Articles
Advertisement
ಸಂಗ್ರಹವಾದ ನೀರಿನಲ್ಲಿ ಏಡಿ ಹಿಡಿಯುತ್ತಿದ್ದ ಹಿರಿಯರಾದ ಬಾಸಿಲ್ ಫೆರ್ನಾಂಡಿಸ್ ಅವರನ್ನು ಮಾತಿಗೆಳೆದಾಗ, ಅನೇಕ ವರ್ಷಗಳಿಂದ ಕಟ್ಟ ಹಾಕುವುದು ನಿಂತು ಹೋಗಿತ್ತು. ಎಲ್ಲರೂ ಅವರವರ ನೀರಿನ ಮೂಲಗಳನ್ನು ಆಶ್ರಯಿಸಿದ್ದರು. ಆದರೆ ಅವೆಲ್ಲ ಬರಿದಾಗುತ್ತವೆ. ಇಂತಹ ಕಟ್ಟಗಳಿಂದ ನೀರು ಸಂಗ್ರಹವಾಗಿ ಜಲಮರುಪೂರಣವಾದಂತಾಗಿದೆ. ನಾವು ವಿದ್ಯಾರ್ಥಿಗಳ ಜತೆಗೆ ಅಣೆಕಟ್ಟು ಮಾಡುತ್ತಿದ್ದಾಗ ಕೈಕಟ್ಟಿ ನಿಂತು ನೋಡಿದವರು ಈಗ ಸಂಗ್ರಹವಾದ ನೀರನ್ನು ಕೃಷಿಗೆ ಬಿಡುವ ಮೂಲಕ ಲಾಭ ಪಡೆಯುತ್ತಿದ್ದಾರೆ. ಹಿರಿಯರಿಗಿಂತ ವಿದ್ಯಾರ್ಥಿಗಳಿಗೆ ಇರುವ ಕಾಳಜಿಯನ್ನು ಕಾಲೇಜಿನ ಚಟುವಟಿಕೆ ಅಲ್ಲದಿದ್ದರೂ ಸೈಂಟ್ ಥಾಮಸ್ ಹಾಗೂ ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಪ್ರೇರಣೆ ಶ್ರಮದಾನದ ಮೂಲಕ ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಉಪನ್ಯಾಸಕರಿಂದ ಪ್ರೇರಣೆ
ಉಪನ್ಯಾಸಕ ಡಾ| ಎನ್.ಎಂ. ಜೋಸೆಫ್ ಅವರು ಜಲಸಾಕ್ಷರತೆ ಕುರಿತೇ ಸಂಶೋಧನ ಪ್ರಬಂಧ ಮಂಡಿಸಿ ಪಿಎಚ್‌ಡಿ ಪಡೆದಿದ್ದಾರೆ. ತಮ್ಮ ಮನೆಯಲ್ಲಿಯೇ ಲಕ್ಷಾಂತರ ರೂ. ವೆಚ್ಚದಲ್ಲಿ ಜಲ ಮರುಪೂರಣ ಮಾಡಿ ಮಾದರಿಯಾಗಿದ್ದಾರೆ. ಸೇಕ್ರೆಡ್ ಹಾರ್ಟ್ ಚರ್ಚ್ ವಠಾರದಲ್ಲಿ, ಕಕ್ಕೆಕಾಡು ಪರಿಸರದಲ್ಲಿ ಸ್ವಂತ ಖರ್ಚಿನಲ್ಲಿ ಇಂಗುಗುಂಡಿ ನಿರ್ಮಿಸಿ ನೀರಿಂಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಊರೂರು ತಿರುಗಿ ಚೆಕ್ ಡ್ಯಾಂ, ವೆಂಟೆಡ್ ಡ್ಯಾಂ ಕುರಿತು ಅಧ್ಯಯನ ಮಾಡಿ ಸ್ಥಳೀಯರ ಮನವೊಲಿಸಿ ನೀರು ಸಂಗ್ರಹಿಸಿ ಎಂದು ಮನವಿ ಮಾಡುತ್ತಿದ್ದಾರೆ. ಈ ಉಪನ್ಯಾಸಕರೇ ಎನ್ನೆಸೆಸ್ ಅಧಿಕಾರಿಯಾಗಿ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ. ವಿದ್ಯಾರ್ಥಿಗಳು ರಜಾದಿವಸ ಸ್ವಪ್ರೇರಣೆಯಿಂದ ಜಲಕ್ರಾಂತಿ ತಂಡ ರಚಿಸಿ ಅಲ್ಲಲ್ಲಿ ಶ್ರಮದಾನ ನಿರತರಾಗುತ್ತಿದ್ದಾರೆ. ನಮ್ಮ ಜಾಗದ ಬದಿ ಅಣೆಕಟ್ಟೆಯಿಂದ ಪರಿಸರದ ಎಲ್ಲ ಕೃಷಿಕರಿಗೆ ಕುಡಿಯುವ ನೀರಿನ ಆಶ್ರಯಕ್ಕೂ ಪ್ರಯೋಜನವಾಗಿದೆ. ಕೆರೆ-ಬಾವಿ ತುಂಬಿದ್ದು, ಎಪ್ರಿಲ್‌ವರೆಗೆ ತೋಟದ ನೀರಿಗಾಗಿ ಪಂಪ್ ಚಾಲೂ ಮಾಡಬೇಕಿಲ್ಲ.
– ಮೆಲ್ವಿನ್ ಫೆರ್ನಾಂಡಿಸ್ ಪಾರೆಂಕಿ ಗ್ರಾಮ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಅಣೆಕಟ್ಟು ರಚನೆಯಲ್ಲಿ ತೊಡಗಿದ್ದಾರೆ. ಇದು ಇನ್ನಷ್ಟು ಮಂದಿಗೆ ಪ್ರೇರಣೆಯಾಗಬೇಕು.
– ಡಾ| ಎನ್.ಎಂ. ಜೋಸೆಫ್
ಉಪನ್ಯಾಸಕರು ಲಕ್ಷ್ಮೀ ಮಚ್ಚಿನ