Advertisement
-ಇದು ಮುಖ್ಯಮಂತ್ರಿ ಯಡಿಯೂರಪ್ಪ ಉಪ ಚುನಾವಣೆ ನಡೆಯುತ್ತಿ ರುವ ಕ್ಷೇತ್ರಗಳ ಉಸ್ತುವಾರಿ ಹೊತ್ತಿರುವ ಸಚಿವರಿಗೆ ನೀಡಿರುವ ಖಡಕ್ ಎಚ್ಚರಿಕೆ. ಕ್ಷೇತ್ರವಾರು ನಿಯೋಜಿಸಿ ರುವ ಉಸ್ತುವಾರಿಗಳು ಕ್ಷೇತ್ರದಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂಬ ಎಚ್ಚರಿಕೆಯನ್ನೂ ಬಿಎಸ್‌ವೈ ನೀಡಿದ್ದಾರೆ.
ಸಚಿವರು ಎಲ್ಲಿರುತ್ತೀರಿ, ಏನೆಲ್ಲ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಂಡಿದ್ದೀರಿ, ಯಾವ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದೀರಿ ಎಂಬುದು ಸಹಿತ ನಿಮ್ಮ ಚಟುವಟಿಕೆಗಳ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ.
Related Articles
ಅನರ್ಹರು ಅಧಿಕಾರ, ಪಕ್ಷ, ಶಾಸಕ ಸ್ಥಾನ ಬಿಟ್ಟು ಬಂದಿದ್ದಾರೆ. ಅವರು ಮತ್ತೆ ವಿಧಾನಸಭೆಗೆ ಆಯ್ಕೆಯಾಗುವಂತೆ ಮಾಡುವುದು ನಮ್ಮ ಬದ್ಧತೆ. ಹಾಗಾಗಿ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಸಚಿವರೆಲ್ಲ ಒಟ್ಟಾಗಿ ಕಾರ್ಯ ನಿರ್ವಹಿಸಬೇಕು. ಆ ಮೂಲಕ ಸರಕಾರವನ್ನು ಸುಸ್ಥಿರಗೊಳಿಸಲು ಗಮನ ಹರಿಸಬೇಕು ಎಂದಿದ್ದಾರೆ ಎನ್ನಲಾಗಿದೆ.
Advertisement
ಕೆಲವೆಡೆ ಸಮಸ್ಯೆ ಇರುವ ಬಗ್ಗೆ ಕೆಲವು ಸಚಿವರು ತಿಳಿಸಿದಾಗ, ಕಾರಣ ಹೇಳಬೇಡಿ. ಧನಾತ್ಮಕ ಫಲಿತಾಂಶ ಬೇಕು. ಯಾವುದೇ ಕಾರಣಕ್ಕೂ ಉಪಚುನಾವಣೆಯಲ್ಲಿ ಹಿನ್ನಡೆ ಯಾಗಲೇಬಾರದು ಎಂದಿದ್ದಾರೆ ಎನ್ನಲಾಗಿದೆ.
ಬೆಳಗಾವಿ ಶೆಟ್ಟರ್ ಹೆಗಲಿಗೆ !ಅಥಣಿ ಕ್ಷೇತ್ರಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕೆ.ಎಸ್. ಈಶ್ವರಪ್ಪ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಿದೆ. ಆದರೆ ಲಕ್ಷ್ಮಣ ಸವದಿಯವರ ಕಾರ್ಯ ನಿರ್ವಹಣೆ ಬಗ್ಗೆಯೂ ಮಾಹಿತಿ ಪಡೆಯು ತ್ತಿರುವ ಬಿಎಸ್‌ವೈ, ಬೆಳಗಾವಿ ವ್ಯಾಪ್ತಿಯ ಅಥಣಿ, ಕಾಗವಾಡ, ಗೋಕಾಕ್ ಕ್ಷೇತ್ರಗಳ ಸಮನ್ವಯದತ್ತಲೂ ಗಮನಹರಿಸುವಂತೆ ಶೆಟ್ಟರ್‌ಗೆ ಸೂಚಿಸಿದ್ದಾರೆ. ಡಿಸಿಎಂಗೆ ಕೆ.ಆರ್.ಪೇಟೆ
ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಹೊಸಕೋಟೆ ಬದಲಾಗಿ ಕೆ.ಆರ್.ಪೇಟೆಯ ಉಸ್ತುವಾರಿ ವಹಿಸಲಾಗಿದೆ. ಈ ಕ್ಷೇತ್ರದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರ ಜತೆಗೆ ಅಶ್ವತ್ಥನಾರಾಯಣ ಅವರಿಗೆ ಹೆಚ್ಚುವರಿಯಾಗಿ ಹೊಣೆ ನೀಡಲಾಗಿದೆ.