Advertisement

ಬೀದರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಿ

05:43 PM Jul 05, 2022 | Team Udayavani |

ಬೀದರ: ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಕಿವಿಗೊಡದೆ ಒಗ್ಗಟ್ಟಾಗಿ ಬೀದರ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಕರೆ ನೀಡಿದರು.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ನಗರ ಮಂಡಲ ವಿಶೇಷ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿ ಕಾರದ ಗದ್ದುಗೆ ಹಿಡಿದಿದೆ. ಆದರೆ, ಕಳೆದ 20 ವರ್ಷಗಳಿಂದ ಬೀದರ ಕ್ಷೇತ್ರದಲ್ಲಿ ಕಮಲ ಅರಳಿಲ್ಲ. ಜನಸಂಘದ ಅವ ಧಿಯಲ್ಲಿ ಬೀದರ ಕ್ಷೇತ್ರ ಜತೆಗೆ ನಗರಸಭೆಯೂ ಬಿಜೆಪಿ ಅ ಧಿನದಲ್ಲಿತ್ತು. ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಸಂಕಲ್ಪ ಮಾಡಬೇಕಿದೆ ಎಂದರು.

ಬಿಜೆಪಿ ಅಭಿವೃದ್ಧಿ ಧ್ಯೇಯದೊಂದಿಗೆ ರಾಜಕೀಯ ಮಾಡುತ್ತದೆ. ಬೇರೆ ಪಕ್ಷದಂತೆ ಕುಟುಂಬ ರಾಜಕೀಯಕ್ಕೆ ಆಸ್ಪದ ಕೊಡದೇ ಭ್ರಷ್ಟಾಚಾರ ರಹಿತ, ಆಂತರಿಕ ಭದ್ರತೆಗೆ ಆದ್ಯತೆ ನೀಡುವುದರೊಂದಿಗೆ ಇಡೀ ವಿಶ್ವದಲ್ಲಿಯೇ ಬಿಜೆಪಿ ನಂಬರ ಒನ್‌ ಪಕ್ಷವಾಗಿ ಬೆಳೆದಿದೆ. ಮನೆ-ಮನೆಗೆ ತೆರಳಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು. ಮತದಾರರ ಭಾವನೆಗಳನ್ನು ಅರಿಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕರ್ತರೆ ಪಕ್ಷಕ್ಕೆ ಶಕ್ತಿ: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, 4 ರಾಜ್ಯಗಳಲ್ಲಿ ಗೆದ್ದ ಮೇಲೆ ಬಿಜೆಪಿ ಮತ್ತಷ್ಟು ಶಕ್ತಿಯುತವಾಗಿದೆ. ಕಾರ್ಯಕರ್ತರೇ ಪಕ್ಷಕ್ಕೆ ಶಕ್ತಿ. ಇದು ಚುನಾವಣೆಯ ವರ್ಷವಾಗಿದ್ದರಿಂದ ಪಕ್ಷದ ಹಿರಿಯರ ನಿರ್ಣಯದಂತೆ ಕೆಲಸ ಮಾಡಿದರೆ ಬೀದರ ಕ್ಷೇತ್ರದಿಂದ ಕೂಡ ನಮ್ಮ ಗೆಲುವು ಸಾಧ್ಯವಿದೆ. ಬೂತ್‌ಗಳನ್ನು ಶಕ್ತಿಯುತವಾಗಬೇಕು. ನಮ್ಮ ಮತಗಳ ಅಂತರ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಈ ಕೆಲಸ ಮಾಡಿದರೆ ಗೆಲುವು ಶತಸಿದ್ದ ಎಂದು ತಿಳಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಕಾರ್ಯಕರ್ತರು ಜನ ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ನಮ್ಮ ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪುವ ನಿಟ್ಟಿನಲ್ಲಿ ಸೇತುವೆಯಾಗಿ ಕೆಲಸ ಮಾಡಿ ಜನರ ವಿಶ್ವಾಸ ಗಳಿಸಬೇಕು ಎಂದು ಹೇಳಿದರು.

Advertisement

ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ಮಾತನಾಡಿದರು. ಪಕ್ಷದ ಎಲ್ಲ ಹಿರಿಯರ ಸಹಕಾರ ಇದ್ದರೆ ಮುಂಬರುವ ಚುನಾವಣೆಗಾಗಿ ಪ್ರತಿ ಬೂತ್‌ಗೆ 10 ನಿಷ್ಠಾವಂತ ಕಾರ್ಯಕರ್ತರನ್ನು ಕಟ್ಟುವ ಮೂಲಕ ಸುಮಾರು 500ಕ್ಕೂ ಹೆಚ್ಚು ಬೂತ್‌ ಪದಾಧಿಕಾರಿಗಳ ಸಭೆ ಮಾಡುವ ಉದ್ದೇಶ ಹೊಂದಿದ್ದೇನೆ. ಮಹಾಶಕ್ತಿ ಕೇಂದ್ರಗಳನ್ನು ಮಾಡುವ ಮೂಲಕ ಪಕ್ಷಕ್ಕೆ ಇನ್ನಷ್ಟು ಶಕ್ತಿತುಂಬುವ ಕೆಲಸ ಮಾಡುತ್ತೇನೆ ಎಂದರು.

ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌, ವಿಭಾಗೀಯ ಪ್ರಮುಖರಾದ ಈಶ್ವರಸಿಂಗ ಠಾಕೂರ, ವಿದ್ಯಾಸಾಗರ ಶಾಬಾದಿ, ಬುಡಾ ಅಧ್ಯಕ್ಷ ಬಾಬು ವಾಲಿ, ರಾಜ್ಯ ಹಜ್‌ ಕಮಿಟಿ ಅಧ್ಯಕ್ಷ ರೌಫೋದ್ದೀನ್‌ ಕಚೇರಿವಾಲೆ, ಪ್ರಮುಖರಾದ ಜಯಕುಮಾರ ಕಾಂಗೆ, ಗುರುನಾಥ ಜ್ಯಾಂತಿಕರ್‌, ಪ್ರಕಾಶ ಟೊಣ್ಣೆ, ಬಾಬುರಾವ ಮದಕಟ್ಟಿ, ಎನ್‌ಆರ್‌ ವರ್ಮಾ, ರೇವಣಸಿದ್ದಪ್ಪ ಜಲಾದೆ, ರಾಜಕುಮಾರ ಚಿದ್ರಿ, ಅರಹಂತ ಸಾವಳೆ, ವಿಜಯಕುಮಾರ ಪಾಟೀಲ ಗಾದಗಿ, ಮಲ್ಲಿಕಾರ್ಜುನ ಕುಂಬಾರ, ಕಿರಣ ಪಾಟೀಲ, ಮಹೇಶ್ವರ ಸ್ವಾಮಿ, ಚಂದ್ರಕಲಾ ವಿಶ್ವಕರ್ಮ, ಪ್ರಸನ್ನಲಕ್ಷ್ಮೀ ದೇಶಪಾಂಡೆ, ಮಹೇಶ ಪಾಲಂ, ಗಣೇಶ ಭೋಸ್ಲೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next