Advertisement
ಇಂಗ್ಲಂಡ್ ಮತ್ತು ವೇಲ್ಸ್‌ನಲ್ಲಿ ಕನಿಷ್ಠ ಕಾಲು ಭಾಗದಷ್ಟು ಕಚೇರಿಗಳು ಹಾಗೂ ಅವುಗಳ ಸುತ್ತಮುತ್ತಲ ಪರಿಸರದ ಮೇಲೆ ವರ್ಕ್ ಫ್ರಂ ಹೋಮ್ ಗಾಢವಾದ ಪರಿಣಾಮಗಳನ್ನೇ ಬೀರಿದೆ ಎನ್ನುವುದು ಈ ಅಧ್ಯಯನದಿಂದ ತಿಳಿದುಬಂದಿದೆ.
ಜಾಗತಿಕವಾಗಿ ಅನೇಕ ದೈತ್ಯ ಕಂಪೆನಿಗಳು ವರ್ಕ್ ಫ್ರಂ ಹೋಮ್ ಅನ್ನೇ ಶಾಶ್ವತವಾಗಿ ಜಾರಿಯಲ್ಲಿಡುವ ಕುರಿತು ಚಿಂತಿಸುತ್ತಿರುವುದರಿಂದ ಅದು ಸಮಾಜದ ಮೇಲೆ ಮಾಡಲಿರುವ ಪರಿಣಾಮಗಳನ್ನು ಆಳವಾದ ಅಧ್ಯಯನ ನಡೆಸುವ ಅಗತ್ಯವಿದೆ ಎನ್ನುತ್ತಾರೆ ತಜ್ಞರು. ರಿಯಲ್ ಎಸ್ಟೇಟ್ ಮೇಲೂ ಪರಿಣಾಮವಾಗಲಿದೆ. ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆ ಬಾಡಿಗೆ ಇಳಿಕೆಯಾಗಬಹುದು ಮತ್ತು ಮನೆಗಳ ಬೆಲೆಯೂ ಕಡಿಮೆಯಾಗಬಹುದು. ಅಂತೆಯೇ ವಿಮಾನ ಯಾನ, ಸ್ಥಳೀಯ ಸಾರಿಗೆ, ಕಾರುಗಳ ಬಳಕೆ ಇತ್ಯಾದಿಗಳ ಮೇಲೂ ಆಗುವ ಪರಿಣಾಮಗಳ ಅಧ್ಯಯನ ನಡೆಯುತ್ತಿದೆ.
Related Articles
ವರ್ಕ್ ಫ್ರಂ ಹೋಮ್‌ನಿಂದ ಲಾಭವೂ ಇದೆ ನಷ್ಟವೂ ಇದೆ ಎನ್ನುತ್ತಾರೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉಪನ್ಯಾಸಕರಾಗಿರುವ ಪೌಲ್ ಚೆಶಿರ್. ಕಚೇರಿಯಲ್ಲಿ ಎಲ್ಲರ ಜತೆ ಸೇರಿ ಕೆಲಸ ಮಾಡುವಾಗ ನೌಕರನ ಉತ್ಪಾದಕತೆ ಹೆಚ್ಚು ಇರುತ್ತದೆ. ಕಚೇರಿಯ ಸ್ಪರ್ಧಾತ್ಮಕ ಮನೋಭಾವ ಮನೆಯಲ್ಲಿ ಇರಲು ಸಾಧ್ಯವಿಲ್ಲ. ಅಲ್ಲದೆ ಸಾಂ ಕವಾಗಿ ಕೆಲಸ ಮಾಡುವುದರಿಂದ ಭಿನ್ನ ಫಲಿತಾಂಶ ಪಡೆಯಲು ಸಾಧ್ಯ. ನೌಕರನ ಏಕತಾನತೆಯೂ ಕಚೇರಿಯಲ್ಲಿ ಇಲ್ಲವಾಗುತ್ತದೆ. ಈ ಅಂಶಗಳನ್ನೂ ಪರಿಗಣಿಸಬೇಕು ಎನ್ನುತ್ತಾರೆ ಚೆಶಿರ್.
Advertisement
ನಾವು ಕೆಲಸ ಮಾಡುವ ಕಚೇರಿ, ಅಲ್ಲಿನ ಪರಿಸರ, ಆ ಸಮಯ ಇತ್ಯಾದಿಗಳ ಮೇಲೆ ನಮಗೊಂದು ರೀತಿಯ ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ಕಚೇರಿಯಲ್ಲಿ ನಾವು ಸಾಮಾಜಿಕ ಜೀವಿಗಳಾಗಿರುತ್ತೇವೆ. ಮನೆಯಲ್ಲಿ ಈ ವಾತಾವರಣವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅಲ್ಲದೆ ಕಚೇರಿಯ ಕೆಲಸದ ಶಿಸ್ತನ್ನು ಮನೆಯಲ್ಲಿ ಮೈಗೂಡಿಕೊಳ್ಳುವುದು ಕಷ್ಟ ಎನ್ನುವುದು ಗೋಲ್ಡ್‌ಸ್ಮಿತ್ ವಿವಿಯ ಸಮಾಜಶಾಸ್ತ್ರದ ಉಪನ್ಯಾಸಕ ಲೆಸ್ ಬ್ಯಾಕ್ ಅವರ ಅಭಿಪ್ರಾಯ.
ಟ್ವಿಟ್ಟರ್, ಫೇಸ್‌ಬುಕ್,ಗೂಗಲ್ ಸೇರಿ ಹವು ದೈತ್ಯ ಕಂಪೆನಿಗಳು ವರ್ಕ್ ಫ್ರಂ ಹೋಮ್‌ಗೆ ಹೆಚ್ಚು ಒತ್ತು ಕೊಡಲು ತೀರ್ಮಾನಿಸಿವೆ. ಬಾರ್ಸ್‌ಲೇಸ್ ಬ್ಯಾಂಕ್ 7,000ಕ್ಕೂ ಅಧಿಕ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡುವ ಇರಾದೆ ಹೊಂದಿದೆ. ಆದರೆ ಇದರಿಂದ ದೊಡ್ಡ, ಮಧ್ಯಮ ಮತ್ತು ಸಣ್ಣ ನಗರಗಳ ಮೇಲೆ ವಿಭಿನ್ನ ರೀತಿಯ ಪರಿಣಾಮಗಳಾಗಬಹುದು.
ಕಚೇರಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋದಂತೆ ಆ ನಗರಗಳ ಅಭಿವೃದ್ಧಿಯೂ ಕುಂಟತೊಡಗುತ್ತದೆ. ಇದು ಕೊರೋನೋತ್ತರ ಅಭಿವೃದ್ಧಿಯ ಕಾರ್ಯಸೂಚಿಯ ಮೇಲೂ ಪರಿಣಾಮಗಳನ್ನು ಉಂಟು ಮಾಡಬಹುದು ಎನ್ನುತ್ತಾರೆ ರಾಯಲ್ ಟೌನ್ ಪ್ಲಾನಿಂಗ್ ಇನ್‌ಸ್ಟಿಟ್ಯೂಟ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಔಡ್ ಬಿಕುಲೆಟ್.
ಸಂಬಂಧಗಳ ಮೇಲೂ ಪರಿಣಾಮವರ್ಕ್ ಫ್ರಂ ಹೋಮ್‌ನಿಂದಾಗಿ ನೌಕರರ ನಡುವಿನ ಸಂಬಂಧಗಳ ಮೇಲೂ ಪ್ರತಿಕೂಲ ಪರಿಣಾಮಗಳಾಗಬಹುದು. ಕಚೇರಿಯಲ್ಲಿರುವಾಗ ನೌಕರರ ಮಧ್ಯೆ ಆಪ್ತತೆ ಬೆಳೆಯುತ್ತದೆ. ಒಬ್ಬರ ಕಷ್ಟಕ್ಕೆ ನೆರವಾಗುವ ಮನೋಭಾವ ಇರುತ್ತದೆ. ಕೆಲವೊಮ್ಮೆ ಸಂಬಂಧಗಳು ಇನ್ನೂ ನಿಕಟವಾಗುವುದು ಇದೆ. ಎಷ್ಟೋ ಕಚೇರಿಗಳಲ್ಲಿ ನೌಕರರು ಒಂದೇ ಪರಿವಾರದ ಸದಸ್ಯರಂತೆ ಅನ್ಯೋನ್ಯ ಭಾವದಿಂದ ಇರುತ್ತಾರೆ. ಅಲ್ಲೊಂದು ಆತ್ಮೀಯತೆ ಬೆಳೆದಿರುತ್ತದೆ. ವರ್ಕ್ ಫ್ರಂ ಹೋಮ್ ಸಂಸ್ಕೃತಿಗೆ ಹೆಚ್ಚು ಒತ್ತುಕೊಟ್ಟರೆ ಈ ವಾತಾವರಣ ಇಲ್ಲದೇ ಹೋಗಬಹುದು. ನೌಕರರು ಪರಸ್ಪರ ಅಪರಿಚಿತರಾಗಿಯೇ ಉಳಿದು ಬಿಡಬಹುದು ಎನ್ನುವುದು ತಜ್ಞರು ವ್ಯಕ್ತಪಡಿಸುವ ಆತಂಕ.