Advertisement

Work from home: ಪತ್ನಿಯ ಫೋನ್‌ ಕದ್ದಾಲಿಸಿ 16.58 ಕೋ.ರೂ. ಗಳಿಸಿದ!

12:43 AM Feb 24, 2024 | Team Udayavani |

ವಾಷಿಂಗ್ಟನ್‌: ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದ (ವರ್ಕ್‌ ಫ್ರಂ ಹೋಂ) ಪತ್ನಿಯ ಫೋನ್‌ ಕರೆಗಳನ್ನು ಕದ್ದಾಲಿಕೆ ಮಾಡುವ ಮೂಲಕ ಆಕೆ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಯ ದತ್ತಾಂಶಗಳನ್ನು ತಿಳಿದು, ಅವುಗಳ ಆಧಾರದಲ್ಲಿ ಅಕ್ರಮವಾಗಿ ವ್ಯವಹಾರ ನಡೆಸಿ 16.58 ಕೋಟಿ ರೂ. ಲಾಭ ಗಳಿಸಿ ದ್ದ ಪತಿಗೆ ಪತ್ನಿ ವಿಚ್ಛೇದನ ನೀಡಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ.

Advertisement

ಟೆಕ್ಸಾಸ್‌ ನಿವಾಸಿ ಟೈಲರ್‌ ಲೌಡನ್‌ ಅವರ ಪತ್ನಿ ಬ್ರಿಟಿಷ್‌ ಪೆಟ್ರೋಲಿಯಂ (ಬಿಪಿ) ಸಂಸ್ಥೆಯಲ್ಲಿ ವಿಲೀನ ಮತ್ತು ಸ್ವಾಧೀನ ವಿಭಾಗದಲ್ಲಿ ನಿರ್ವಹಣ ಅಧಿಕಾರಿಯಾಗಿ ಕಾರ್ಯನಿರ್ವ ಹಿಸುತ್ತಿ ದ್ದರು. ಬಿಪಿ ಸಂಸ್ಥೆಯು ಅಮೆರಿಕ ಐಎನ್‌ಸಿಯ ಟ್ರಾವೆಲ್ಸ್‌ ಸಂಸ್ಥೆಗಳನ್ನು ಖರೀದಿಸಲು ಯೋಜಿಸಿದ್ದು, ಅದರ ಮೇಲ್ವಿಚಾರಣೆಯನ್ನೂ ನೋಡಿಕೊ ಳ್ಳುತ್ತಿದ್ದರು. ಆಕೆ ಮನೆಯಿಂದ ಕಾರ್ಯ ನಿರ್ವಹಿಸುವಾಗ ಟೈಲರ್‌ ಪತ್ನಿಯ ಫೋನ್‌ ಕರೆಗಳನ್ನು ಕದ್ದಾಲಿಸಿ ಈ ಬಗ್ಗೆ ತಿಳಿದುಕೊಂಡು, ಟ್ರಾವೆಲ್‌ ಸಂಸ್ಥೆಗಳ ಷೇರನ್ನು ಖರೀದಿಸಿದ್ದಾರೆ. ಈ ಮೂಲಕ 16.58 ಕೋಟಿ ರೂ. ಗಳ ಲಾಭ ಪಡೆದಿದ್ದಾರೆ. ಇತ್ತ ಸಂಸ್ಥೆಯು ಮಾಹಿತಿ ಸೋರಿಕೆಯಾಗಿದೆ ಎಂದು ಟೈಲರ್‌ ಅವರ ಪತ್ನಿಯನ್ನು ವಜಾಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next