Advertisement

ಕಾಫಿ ಹೌಸ್‌ನಲ್ಲಿ ಮಹಿಳೆಯರಿಗೆ ನೌಕರಿ

12:30 AM Mar 08, 2019 | |

ಕಣ್ಣೂರು: 1958ಲ್ಲಿ ಕಮ್ಯೂನಿಸ್ಟ್‌  ನಾಯಕ ಎ.ಕೆ. ಗೋಪಾಲನ್‌ ಸ್ಥಾಪಿಸಿದ್ದ ಸಹಕಾರ ಸಂಸ್ಥೆ “ದ ಇಂಡಿಯನ್‌ ಕಾಫಿ ಹೌಸ್‌’ ಈಗ ಇತಿಹಾಸ ನಿರ್ಮಿಸಲು ಮುಂದಾಗಿದೆ. 

Advertisement

ಈ ಸಂಸ್ಥೆ ಆರಂಭವಾದಾಗಲಿನಿಂದ ಈ ವರೆಗೂ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿರಲಿಲ್ಲ. ಈಗ ತನ್ನ 61 ವರ್ಷಗಳ ಸಂಪ್ರದಾಯ ವನ್ನು ಮುರಿದು ಆರು ಮಂದಿ ಮಹಿಳೆಯರನ್ನು ತನ್ನ ವಿವಿಧ ಮಳಿಗೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದೆ. ಪ್ರಪಂಚ ಬದಲಾಗುತ್ತಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಉನ್ನತ ಹುದ್ದೆಗಳಿಗೆ ಏರುತ್ತಿದ್ದಾರೆ. ಕಾಫಿ ಮಳಿಗೆಗಳಲ್ಲೂ ಅವರಿಗೆ ಅವಕಾಶ ತೆರೆಯಲು ಇದು ಉತ್ತಮ ಸಮಯ ಎಂದು ಕಣ್ಣೂರಿನ ಭಾರತೀಯ ಕಾಫಿ ಕೆಲಸಗಾರರ ಸಹಕಾರ ಸಂಘದ ಅಧ್ಯಕ್ಷ ಪಿ.ವಿ. ಬಾಲಕೃಷ್ಣನ್‌ ಹೇಳಿದ್ದಾರೆ. “ನನ್ನ ಸಂಘ ಮಲಬಾರ್‌ ಪ್ರದೇಶದಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next