Advertisement

ಗ್ರಾಮ ವಾಸ್ತವ್ಯ ಯಶಸ್ಸಿಗೆ ಶ್ರಮಿಸಿ

03:35 PM Feb 21, 2021 | Team Udayavani |

ಚಿಂತಾಮಣಿ: ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪ್ರತಿಯೊಂದು ಇಲಾಖೆಯ ಅಧಿಕಾರಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಸಾಧ್ಯ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ತಿಳಿಸಿದರು.

Advertisement

ತಾಲೂಕಿನ ಆನೂರು ಗ್ರಾಮದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ಸೌಲಭ್ಯಗಳು ಫಲಾನುಭವಿ ಬಾಗಿಲಿಗೆ ತಲುಪಲು ಸರ್ಕಾರ ಜಾರಿ ಮಾಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ತಕ್ಷಣದಲ್ಲೇ ಪರಿಹರಿಸಲು ಸಾಧ್ಯವಾಗುತ್ತಿದೆ. ಇದರಿಂದ ಸರ್ಕಾರಿ ಸೌಲಭ್ಯಗಳು ಸಕ್ರಿಯವಾಗಿ ಅರ್ಹ ಫಲಾನುಭವಿಗಳ ಕೈಸೇರುವುದರ ಜತೆಗೆ ಸರ್ಕಾರಿ ಸೌಲಭ್ಯಗಳನ್ನು ಪಡೆದು ಫ‌ಲಾನುಭವಿಗಳು ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಅಲ್ಲದೇ, ಸರ್ಕಾರ ರೂಪಿಸಿರುವ ಈ ಕಾರ್ಯಕ್ರಮ ಗ್ರಾಮೀಣ ಜನರ ಅಭಿ ವೃದ್ಧಿಗೆ ಸಹಕಾರಿ ಆಗಿರುವುದು ಶ್ಲಾಘನೀಯವೆಂದರು.

ಇನ್ನು ಪ್ರತಿ ತಿಂಗಳು ನಡೆಯುವ ಗ್ರಾಮವಾಸ್ತವ್ಯ ಬಗ್ಗೆ ಮುಂಚಿತವಾಗಿಯೇ ಪ್ರಚಾರ ಕೈಗೊಳ್ಳಬೇಕು ಎಂದ ಅವರು, ಮುಂದಿನ ಗ್ರಾಮವಾಸ್ತವ್ಯ ಸಂತೆಕಲ್ಲ ಹಳ್ಳಿಯಲ್ಲಿ ನಡೆಯುವುದಾಗಿ ತಿಳಿಸಿದರು.

ಆನೂರಲ್ಲಿ ತಹಶೀಲ್ದಾರ್‌ ಗ್ರಾಮ ವಾಸ್ತವ್ಯ :

ಚಿಂತಾಮಣಿ: ವಿವಿಧ ಇಲಾಖೆ ಅಧಿಕಾರಿಗಳ ಜತೆಗೂಡಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ತಹಶೀಲ್ದಾರ್‌ ಹನುಮಂತರಾಯಪ್ಪ ಆನೂರು ಗ್ರಾಮದಲ್ಲಿ ಚಾಲನೆ ನೀಡಿದರು.

Advertisement

ಗಾಂಧೀಜಿಯವರ ಕನಸನ್ನು ನನಸು ಮಾಡಲು ಗ್ರಾಮಾಭಿವೃದ್ಧಿಗೆ ಆದ್ಯತೆ ನೀಡುವ ಸಲುವಾಗಿ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಆಯಾ ತಾಲೂಕುಗಳಲ್ಲಿ ಆಯ್ಕೆ ಮಾಡಿಕೊಂಡಿರುವ ಗ್ರಾಮಗಳಲ್ಲಿ ನಡೆಯಿತು. ಕಂದಾಯ ಅಧಿಕಾರಿಗಳು, ಕೃಷಿ, ರೇಷ್ಮೆ, ಸಮಾಜಕಲ್ಯಾಣ, ಹಿಂದುಳಿದ ವರ್ಗ, ಸಿಡಿಪಿಒ, ಪಶು ವೈದ್ಯಕೀಯ, ತಾಪಂ, ಶಿಕ್ಷಣ, ಪೊಲೀಸ್‌, ದಿವ್ಯಾಂಗ, ಅಬಕಾರಿ, ಸಾರಿಗೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಸಾರ್ವಜನಿಕರ ಕುಂದುಕೊರತೆ ಆಳಿಸಿ ಸಾಧ್ಯವಾದ ದೂರುಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾ ಯಿತು. ಗ್ರಾಪಂ ಅಧ್ಯಕ್ಷ ಸತೀಶ್‌ ಕುಮಾರ್‌, ಶ್ರೀನಿವಾಸರೆಡ್ಡಿ, ಮುನೇಗೌಡ, ರಜಿನಿ, ಆರ್‌ಐ ಅಮರೇಶ್‌,ಗ್ರಾಮ ಲೆಕ್ಕಿಗರಾದ ನಾಗರಾಜ್‌, ಶಶಿಕಲಾ, ಪಾರ್ವತಿ ಮುಖಂಡರಾದ ಶ್ರೀನಿವಾಸ್‌, ಮುನಿರೆಡ್ಡಿ, ಗಂಗಾಧರ, ನಾಗರಾಜ್‌, ಕೃಷ್ಣಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next