Advertisement

ಬಡವರ ಪರ ಕೆಲಸ ಮಾಡಿ: ಜಿಲ್ಲಾಧಿಕಾರಿ

10:18 AM Feb 26, 2020 | sudhir |

ಮಂಗಳೂರು: ಅಧಿಕಾರಿಗಳು ಪ್ರಭಾವೀ ವ್ಯಕ್ತಿಗಳ ಪರ ಕೆಲಸ ಮಾಡದೇ ನೊಂದವರ, ಬಡವರ ಪರ ಕೆಲಸ ಮಾಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದರು.

Advertisement

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಸಭೆ ಮತ್ತು ಜಿಲ್ಲಾ ಮಟ್ಟದ ದಲಿತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಯ ಸೌಲಭ್ಯಗಳನ್ನು ಸಮುದಾಯದ ಜನರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಎಸ್‌ಸಿ/ ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪ್ರತವನ್ನು ನೀಡಿ ಅದರ ಮೂಲಕ ಅವರಿಗೆ ಮೀಸಲಾದ ಟೆಂಡರ್‌ಗಳನ್ನು ಬೇರೆಯವರು ಪಡೆಯುತ್ತಿದ್ದು, ಅವರ ವಿರುದ್ಧ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ಡಿಸಿ ಮನ್ನಾ; ಪ್ರತ್ಯೇಕ ಸಭೆ
ಡಿಸಿ ಮನ್ನಾ ಭೂಮಿ ಹಂಚಿಕೆ ಕುರಿತಂತೆ ವಿಷಯ ಪ್ರಸ್ತಾವಿಸಿದ ದಲಿತ ಮುಖಂಡ ರಮೇಶ್‌ ಕೋಟ್ಯಾನ್‌, 2015ರಿಂದ ಈ ಕುರಿತು 2,500ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತಾಲೂಕುವಾರು ಡಿಸಿ ಮನ್ನಾ ಭೂಮಿಯನ್ನು ಪತ್ತೆ ಮಾಡಿ ಮೀಸಲಾಗಿಟ್ಟರೂ ಈವರೆಗೂ ಭೂಮಿ ಮಾತ್ರ ಹಂಚಿಕೆಯಾಗಿಲ್ಲ ಎಂದರು.

Advertisement

ಇದು ಬ್ರಿಟಿಷರ ಅವಧಿಯಲ್ಲಿಯೇ ದಲಿತರಿಗಾಗಿ ಮೀಸಲಿಟ್ಟ ಭೂಮಿ ಯಾಗಿದ್ದು ಜಿಲ್ಲಾಧಿ ಕಾರಿ ಯವರ ವಿವೇಚನೆ ಮೇರೆಗೆ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ದಲಿತ ಮುಖಂಡ ಜನಾರ್ದನ್‌ ಬೊಳಂತೂರು ಹೇಳಿದರು. ಈ ಬಗ್ಗೆ ದಲಿತ ನಾಯಕರು ಹಾಗೂ ಅಧಿಕಾರಿಗಳ ನಡುವೆ ಚರ್ಚೆ ನಡೆಯಿತು. ಬಳಿಕ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮಾತನಾಡಿ, ಸರಕಾರದ ಹಂತದಲ್ಲಿ ಡಿಸಿ ಮನ್ನಾ ಭೂಮಿಯ ಹಂಚಿಕೆ ವಿಚಾರ ಯಾವ ಹಂತದಲ್ಲಿ ಎಂದು ತಿಳಿದು ಮುಂದಿನ ವಾರ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.

ಅಧಿಕಾರಿಗಳ ಅಡ್ಡಿ: ದಂಪತಿ ಅಳಲು
ಬಂಟ್ವಾಳದ ಪಂಜಿಕಲ್ಲು ಗ್ರಾ.ಪಂ. ವ್ಯಾಪ್ತಿಯ ತಮ್ಮ 2.19 ಎಕರೆ ಜಾಗದಲ್ಲಿ ಬ್ಯಾಂಕ್‌ನಿಂದ ಸುಮಾರು 8 ಲಕ್ಷ ರೂ. ಸಾಲ ಮಾಡಿ 800 ಅಡಿಕೆ ಗಿಡಗಳನ್ನು ನೆಡಲಾಗಿದೆ. ಆದರೆ ಬೋರ್‌ವೆಲ್‌ ತೋಡಿಸಲು ಗ್ರಾ.ಪಂ.ನಿಂದ ನಿರಾಕ್ಷೇಪಣ ಪತ್ರ ಸಿಗದ ಕಾರಣ ನೀರಿಲ್ಲದೆ ಮರಗಳು ಒಣಗಿವೆ. ಈ ಬಗ್ಗೆ ಸ್ಥಳೀಯ ಶಾಸಕರು, ಸಚಿವರು ಅವಕಾಶ ನೀಡುವಂತೆ ತಿಳಿಸಿದ್ದರೂ ಸ್ಥಳೀಯ ಕೆಲವು ಅಧಿಕಾರಿಗಳು ಅಡ್ಡಿ ಪಡಿಸುತ್ತಿದ್ದಾರೆ ಎಂದು ದಂಪತಿ ಅಳಲು ತೋಡಿಕೊಂಡರು. ದಂಪತಿ ಪರವಾಗಿ ಜಗದೀಶ್‌ ಪಾಂಡೇಶ್ವರ ಮಾತನಾಡಿದರು. ಜಿ.ಪಂ. ಸಿಇಒ ಮೂಲಕ ಪರಿಶೀಲನೆ ಮಾಡಿಸಿ, ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.

ಸಹಾಯಕ ಆಯುಕ್ತ ಮದನ್‌ ಮೋಹನ್‌, ಮನಪಾ ಉಪಆಯುಕ್ತ ಸಂತೋಷ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್‌.ಬಿ. ಯೋಗೀಶ್‌, ಮಂಗಳೂರು ಎಸ್‌.ಪಿ. ಲಕ್ಷ್ಮೀಪ್ರಸಾದ್‌, ಐಎಎಸ್‌ ಪ್ರೊಬೆಷನರ್‌ ರಾಹುಲ್‌ ಶಿಂಧೆ, ಪುತ್ತೂರು ಎಸಿ ಯತೀಶ್‌, ವಿವಿಧ ಇಲಾಖಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.

ತಂಬಾಕು ನಿಯಂತ್ರಣ: ಕಟ್ಟುನಿಟ್ಟಿನ ಜಾರಿ
ಕಾನೂನು ಬಾಹಿರವಾಗಿ ತಂಬಾಕು ವಸ್ತುಗಳನ್ನು ಮಾರಾಟ ಮಾಡುವವರ ಮೇಲೆ ನಿಗಾ ವಹಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಕಾಲೇಜು ಸಮೀಪ ಪರಿಸರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮುಂದುವರಿಸುತ್ತಿರುವ, ಪುನರಾ ವರ್ತಿತ ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next