Advertisement

ಸಾಮಾಜಿಕ ಕಳಕಳಿಯಿಂದ ಜನಪರ ಕೆಲಸ ಮಾಡಿ

04:43 PM Apr 22, 2022 | Team Udayavani |

ಗದಗ: ಸರಕಾರಿ ನೌಕರರು ಸಾಮಾಜಿಕ ಕಳಕಳಿ, ಜನಪರ ಸೇವಾ ಮನೋಭಾವನೆಯಿಂದ ಕೆಲಸ ನಿರ್ವಹಿಸಬೇಕು. ಕೊಟ್ಟ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ರಾಜ್ಯ ಸರ್ಕಾರಿ ನೌಕರರ ಸಂಘಗಳ ಆಶ್ರಯದಲ್ಲಿ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ, ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಮೊದಲ ಬಾರಿಗೆ ಸರ್ಕಾರಿ ನೌಕರರ ದಿನಾಚರಣೆ ನಡೆಸುತ್ತಿರುವುದು ಹೆಮ್ಮೆಯ ವಿಷಯ. ಪ್ರತಿಯೊಬ್ಬ ನೌಕರರು ತಮ್ಮ ತಮ್ಮ ಜವಾಬ್ದಾರಿಯನ್ನು ದಕ್ಷತೆಯಿಂದ ನಿರ್ವಹಿಸಬೇಕು. ಕೆಲಸದ ಬಗ್ಗೆ ಶ್ರದ್ಧೆ ಬೆಳೆಸಿಕೊಳ್ಳಬೇಕು. ಸರ್ಕಾರಿ ನೌಕರರು ಜನಪರ, ಸಮಾಜಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕೆವಿಎಸ್‌ಆರ್‌ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಡಾ| ಅನಿಲ ವೈದ್ಯ, ಜನಸ್ನೇಹಿ ಆಡಳಿತ ಕುರಿತು ಉಪನ್ಯಾಸ ನೀಡಿ, ನೌಕರರು ಸದಾ ಸಂತೋಷದಿಂದ, ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಗುರುತಿಸುವುದು ಹಾಗೂ ನೌಕರರು ಸಾಮಾಜಿಕ ಕಾರ್ಯದಲ್ಲಿ ತೊಡಗುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರವಿ ಗುಂಜೀಕರ್‌ ಪ್ರಾಸ್ತಾವಿಕ ಮಾತನಾಡಿ, ಇದೀಗ ಪ್ರಪ್ರಥಮವಾಗಿ ನೌಕರರ ದಿನಾಚರಣೆ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

Advertisement

ಇದೇ ಸಂದರ್ಭದಲ್ಲಿ 2020-21ನೇ ಸಾಲಿನಲ್ಲಿ ಹಾಗೂ 2021-22 ನೇ ಸಾಲಿನಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದ ನೌಕರರನ್ನು ಸನ್ಮಾನಿಸಲಾಯಿತು.

ದ್ರಾಕ್ಷಾರಸ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾಂತಿಲಾಲ್‌ ಬನ್ಸಾಲಿ, ಜಿ.ಪಂ. ಸಿಇಒ ಡಾ| ಸುಶೀಲಾ ಬಿ., ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಫ್‌. ಹಳ್ಯಾಳ, ಖಜಾಂಚಿ ಸತೀಶ ಕಟ್ಟಿಮನಿ, ಗೌರವಾಧ್ಯಕ್ಷ ಆರ್‌.ಎನ್‌. ನಿಂಬಾನಾಯ್ಕರ್‌, ಹಿರಿಯ ಉಪಾಧ್ಯಕ್ಷ ಶಿದ್ದಪ್ಪ ಲಿಂಗಧಾಳ, ರೋಣ ತಾಲೂಕು ಅಧ್ಯಕ್ಷ ಜಗದೀಶ ಮಡಿವಾಳರ, ಗಜೇಂದ್ರಗಡ ತಾಲೂಕು ಅಧ್ಯಕ್ಷ ಎಂ.ಎ. ಹಾದಿಮನಿ, ಮುಂಡರಗಿ ತಾಲೂಕು ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಡಿ.ಎಚ್‌. ಪಾಟೀಲ, ನರಗುಂದ ತಾಲೂಕು ಅಧ್ಯಕ್ಷ ಆನಂದ ಬನಪ್ಪನವರ, ಶಿರಹಟ್ಟಿ ತಾಲೂಕು ಅಧ್ಯಕ್ಷ ಎಸ್‌.ಕೆ. ಪಾಟೀಲ ಇದ್ದರು.

ಕೊತಬಾಳದ ಅರುಣೋದಯ ಕಲಾ ತಂಡದವರು ನಾಡಗೀತೆ ಹಾಗೂ ದೀಪನೃತ್ಯ ಪ್ರಸ್ತುತಪಡಿಸಿದರು. ಶರಣು ಗೋಗೇರಿ ಸ್ವಾಗತಿಸಿದರು. ವೈ.ಕೆ. ಚೌಡಾಪುರ ವಂದಿಸಿದರು. ಎಂ.ಎ. ಯರಗುಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next