ದೇವನಹಳ್ಳಿ: ವೈಯಕ್ತಿಕ ದ್ವೇಷಗಳನ್ನು ಬದಿಗಿಟ್ಟುಒಗ್ಗಟ್ಟಿನಿಂದಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾರ್ಯಕರ್ತರು ಮತ್ತು ಮುಖಂಡರು ಶ್ರಮಿಸಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಕಾರಹಳ್ಳಿ ಕ್ರಾಸ್‌ನ ಖಾಸಗಿ ಹೋಟೆಲ್‌ನಲ್ಲಿ ತಾಲೂಕು ಜೆಡಿಎಸ್‌ವತಿಯಿಂದ ಹಮ್ಮಿಕೊಂಡಿದ್ದ ಕಾರಹಳ್ಳಿ ಗ್ರಾಪಂ ವ್ಯಾಪ್ತಿ ಗ್ರಾಪಂ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯಾರೇ ಅಭ್ಯರ್ಥಿಯಾಗಲೀ ಅವರನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲಿದೆ ಎಂದು ಹೇಳಿದರು.
ಮುಂದಿನ ಬಾರಿ ಕುಮಾರಸ್ವಾಮಿ ಸಿಎಂ: ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ 2 ಸ್ಥಾನಗಳನ್ನು ಗೆಲ್ಲುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 113 ಸ್ಥಾನಗಳನ್ನು ಗೆದ್ದು ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬರುತ್ತದೆ.60-70 ಸ್ಥಾನಗಳು ಬಂದರೂ ಸಹ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದರು.
10 ಕೋಟಿ ರೂ. ಅನುದಾನಕ್ಕೆ ಮನವಿ: ಕುಮಾರಸ್ವಾಮಿ ಜೊತೆಗೂಡಿ ಸಿಎಂಯಡಿಯೂರಪ್ಪ ಅವರೊಂದಿಗೆ ಮಾತನಾಡಿ, ತಾಲೂಕಿಗೆ 10ಕೋಟಿ ರೂ. ಅನುದಾನನೀಡುವಂತೆ ಮನವಿ ಮಾಡಲಾಗಿದೆ. 25 ಕೋಟಿ ರೂ.ವೆಚ್ಚದಲ್ಲಿ ಮಾಯಸಂದ್ರ ರಸ್ತೆ ಅಗಲಿಕರಣ ಹಾಗೂ ಕುಂದಾಣದಿಂದ ಚಿಕ್ಕಜಾಲ ರಸ್ತೆ, ನಂದಿ ಉಪಚಾರದಿಂದ ಕಾರಹಳ್ಳಿ ರಸ್ತೆ ಮಾರ್ಗ ಅಗಲಿಕರಣಕ್ಕೆ ಅನುದಾನಬಂದಿದ್ದು, ಈ ಎಲ್ಲಾ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಬೇಕಿದೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಆರ್. ಮುನೇಗೌಡ ಮಾತನಾಡಿ, 1994ರಿಂದ ಸತತವಾಗಿ ಕಾರಹಳ್ಳಿ ಗ್ರಾಪಂ ಜೆಡಿಎಸ್‌ಭದ್ರಕೋಟೆಯಾಗಿ ಗ್ರಾಪಂನಲ್ಲಿ ಅಧಿಕಾರದಚುಕ್ಕಾಣಿ ಹಿಡಿಯುತ್ತಿದೆ. ಇದಕ್ಕೆ ಪಕ್ಷದಮುಖಂಡರು ಮತ್ತು ಕಾರ್ಯಕರ್ತರ ಶ್ರಮ ಇದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತುಮತ್ತೆ ನಿಮ್ಮೆಲ್ಲರ ಆಶೀರ್ವಾದದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯೇ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.
ಜೆಡಿಎಸ್ ಅಧ್ಯಕ್ಷ ಶ್ರೀನಿವಾಸ್, ಟಿಎಪಿಸಿಎಂಎಸ್‌ಅಧ್ಯಕ್ಷಮಂಡಿಬೆಲೆ ರಾಜಣ್ಣ,ಹೋಬಳಿ ಅಧ್ಯಕ್ಷ ಚಂದೇÅಗೌಡ, ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್,ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿಜಿ.ಎ.ರವೀಂದ್ರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜ್, ಹಾಪ್‌ಕಾಮ್ಸ್ ನಿರ್ದೇಶಕ ಶ್ರೀನಿವಾಸ್, ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್, ಸಾದಹಳ್ಳಿ ಮಹೇಶ್,ಕಾರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎ.ದೇವರಾಜ್, ಸದಸ್ಯರಾದ ರಾಜೇಂದ್ರ, ಮೀನಾಕ್ಷಿ ಮುನಿಕೃಷ್ಣಪ್ಪ, ವಿಎಸ್ ಎಸ್‌ಎನ್ ಅಧ್ಯಕ್ಷ ಮಂಜುನಾಥ್, ಕಸಬಾ ಹೋಬಳಿ ಅಧ್ಯಕ್ಷ ಬಿದಲೂರು ಇದ್ದರು.