ಮುದಗಲ್ಲ: ಪಟ್ಟಣ ಸಮೀಪದ ಆಮದಿಹಾಳದ ಗ್ರಾಮದ ಹಳ್ಳದದಂಡೆಯಲ್ಲಿ ನಿರ್ಮಿಸಲಾಗುತ್ತಿರುವ ಕಸಾಯಿಖಾನೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 10ಲಕ್ಷ ರೂ.ವೆಚ್ಚದಲ್ಲಿ ಕಸಾಯಿ ಖಾನೆ ಕಟ್ಟಡ ನಿರ್ಮಿಸಲಾಗುತ್ತಿದೆ. ಆದರೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಕೆಕೆಆರ್‌ಡಿಬಿ ಲಿಂಗಸುಗೂರು ವಿಭಾಗದ ಅಧಿ ಕಾರಿಗಳು ಕಟ್ಟಡ ಉತ್ತಮ ಗುಣಮಟ್ಟದಲ್ಲಿ ಮಾಡದೆ ಅರ್ಧಂಬರ್ಧದಲ್ಲಿಯೇ ಕೆಲಸ ಕೈ ಬಿಟ್ಟಿದ್ದು, ಸರಕಾರದ ಹಣ ವ್ಯರ್ಥವಾಗಲು ಕಾರಣವಾಗಿದೆ.
ಕಟ್ಟಡದ ಪಿಲ್ಲರ್‌ಗೆ ಸ್ಟೀಲ್ ಹಾಗೂ ಸಿಮೆಂಟ್ ಕಡಿಮೆ ಪ್ರಮಾಣದಲ್ಲಿ ಹಾಗೂ ಕಳಪೆ ಮಟ್ಟದ ಮರಳು ಹಾಕಿದ್ದರಿಂದ ನಿರ್ಮಾಣದ ಹಂತದಲ್ಲಿಯೇ ಕಟ್ಟಡದಲ್ಲಿ ಬಿರಕು, ಬೋಂಗಾ ಬಿದ್ದಿದೆ. ಅಲ್ಲದೆ ಕಟ್ಟಡದ ಒಳಗಡೆ ಸವಳು ಮಣ್ಣು ಹಾಕಿದ್ದರಿಂದ ಬೇಸೆ¾ಂಟ್‌ಕುಸಿಯುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಕಾಮಗಾರಿ ಕಳಪೆಯಾಗಿ ಅರ್ಧಕ್ಕೆ ಕೈ ಬಿಟ್ಟಿರುವ ಬಗ್ಗೆ ಸಂಬಂಧಿಸಿದ ಇಂಜಿನಿಯರ್‌ಗಳ ಗಮನಕ್ಕೆ ತಂದರೂ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರಾದ ಹನುಮಂತ, ಬಸವರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೆ ಈ ಬಗ್ಗೆ ಅಧಿಕಾರಿಗಳುಗಮನ ಹರಿಸಿ ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಾಣ ಮಾಡುವ ಮೂಲಕ ಸರ್ಕಾರದ ಹಣ ಸದುಪಯೋಗವಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆಮದಿಹಾಳದಲ್ಲಿ ನಿರ್ಮಿಸುತ್ತಿರುವ ಕಸಾಯಿಖಾನೆ ಕಾಮಗಾರಿ ಹತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಯೋಜನೆಯಂತೆ ಕೆಲಸ ಮಾಡಲಾಗುತ್ತಿದೆ.
ಮಧುಶ್ರೀ, ಇಂಜಿನಿಯರ್, ಕೆಕೆಆರ್‌ಡಿಬಿ ಲಿಂಗಸುಗೂರು
ಕಸಾಯಿಖಾನೆ ಕಾಮಗಾರಿಯನ್ನು ಕಳಪೆ ಮಾಡುವ ಮೂಲಕ ಅಧಿಕಾರಿಗಳು ಸರ್ಕಾರದ ಲಕ್ಷಾಂತರ ರೂ.ವ್ಯರ್ಥವಾಗುವುದಕ್ಕೆ ಕಾರಣವಾಗಿದ್ದಾರೆ. ಈ ಬಗ್ಗೆ ಸರ್ಕಾರದ ಸಚಿವರಿಗೆ ಮತ್ತು ಜಿಲ್ಲಾ ಧಿಕಾರಿಗಳಿಗೆ ದೂರು ನೀಡಲಾಗುವುದು.
– ಬಸವರಾಜ, ಮರಳಿ ಗ್ರಾಮಸ್ಥ