Advertisement
ತಾಲೂಕಿನ ಕಸಬಾ ಹೋಬಳಿಯ ಅಳ್ಳಿ ಮಾರನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಬಳಿ ಜಮಾವಣೆ ಗೊಂಡಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಪಡೆ ಪುಟ್ಟಸ್ವಾಮಿ, ಜಾಗೃತಿ ಟ್ರಸ್ಟ್ ರವಿ, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ತಾಲೂಕು ಅಧ್ಯಕ್ಷ ಸುರೇಶ್ ಸೇರಿದಂತೆ ಗ್ರಾಮಸ್ಥರು ರಜಾ ದಿನದಲ್ಲೂ ಗ್ರಾಮ ಪಂಚಾಯಿತಿ ಕಚೇರಿ ಬಾಗಿಲು ತೆರೆದು ಕೆಲಸ ಮಾಡುತ್ತಿದ್ದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
Related Articles
Advertisement
ಅಧಿಕಾರಿಗಳು, ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಿ: ಪಿಡಿಒ ಹನುಮಪ್ಪರೇಣಿ ಅವರು ಇಲ್ಲಿ ಪ್ರಭಾರ ಅಧಿಕಾರಿಯಾಗಿ ಬಂದು ಹತ್ತಾರು ವರ್ಷಗಳೇ ಕಳೆದಿವೆ. ಒಬ್ಬ ಅಧಿಕಾರಿ ಪ್ರಭಾರ ಅಧಿಕಾರಿಯಾಗಿ ಎಷ್ಟು ವರ್ಷ ಕೆಲಸ ಮಾಡಬಹುದು. ಇಷ್ಟು ವರ್ಷ ಕಳೆದರೂ ಏಕೆ ಇವರು ಇಲ್ಲೇ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮೇಲಧಿಕಾರಿಗಳು ಮತ್ತು ರಾಜಕಾರಣಿಗಳ ಶ್ರೀರಕ್ಷೆ ಇದೆ. ಹೀಗಾಗಿ ಈ ಗ್ರಾಪಂನಿಂದ ಇವರನ್ನು ಬಿಡುಗಡೆ ಮಾಡಿಲ್ಲ. ಸಂಬಂಧಪಟ್ಟ ಮೇಲಾಧಿಕಾರಿಗಳು, ಇದೆಲ್ಲದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕಾನೂನು ಶಿಸ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು, ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಪಂನಿಂದ ವರ್ಕ್ ಶಾಪ್ ಆಗಿದೆ. ಸಾರ್ವಜನಿಕರ ಜಮೀನು ಸರ್ವೆ ಮಾಡಲು ಶಿಬಿರ ಆಯೋಜನೆ ಮಾಡಿ, ಸಭೆಯಲ್ಲಿ ಸೂಚನೆ ನೀಡಿದ್ದಾರೆ. ನರೇಗಾ ಸಂಬಂಧಪಟ್ಟಂತೆ ಜಿಯೋ ಟ್ಯಾಗ್ ಮತ್ತು ನೆರೆಯಿಂದ ಆಗಿರುವ ಸಮಸ್ಯೆಗಳ ಬಗ್ಗೆ ಅಗತ್ಯ ಕ್ರಮಕ್ಕೆ ಜಿಪಂ ಉಪ ಕಾರ್ಯದರ್ಶಿ ಗ್ರೂಪ್ ಟಾಕ್‌ನಲ್ಲಿ ತಿಳಿಸಿದ್ದಾರೆ. ಹೀಗಾಗಿ ರಜಾ ದಿನದಲ್ಲಿ ಕೆಲಸ ಮಾಡುತ್ತಿದ್ದೇವೆ. – ಹನುಮಪ್ಪ ರೇಣಿ, ಅಭಿವೃದ್ಧಿ ಅಧಿಕಾರಿ, ಅಳ್ಳಿಮಾರನಹಳ್ಳಿ ಗ್ರಾಪಂ