ವಡಗೇರಾ: ನೂತನ ತಾಲೂಕು ಕೇಂದ್ರವಾದ ವಡಗೇರಾ ಸುತ್ತಮುತ್ತಲಿನ ಮುಖ್ಯ ರಸ್ತೆಗಳ ಕಾಮಗಾರಿ ಆಮೆಗತಿಯಿಲ್ಲಿ ಸಾಗಿದ್ದು, ಅಮಾಯಕರ ಪ್ರಾಣದ ಜತೆ ಗುತ್ತಿಗೆದಾರರು ಅಧಿಕಾಗಳು ಚಲ್ಲಾಟ ಆಡುತ್ತಿದ್ದಾರೆ. ಗೊಂದೆನೂರ ಕ್ರಾಸ್ ದಿಂದ ತುಮಕೂರ ಗ್ರಾಮದವರೆಗೆ ವಡಗೇರಾ ಪಟ್ಟಣದ ಮುಖ್ಯ ದ್ವಾರದಿಂದ ಹಳೆಯ ಪೊಲೀಸ್ ಠಾಣೆಯವರೆಗೆ ಹಾಗೂ ಹಾಲಗೇರಾ ಸಮೀಪವಿರುವ ಬಸ್ಸಯ್ಯ ತಾತಾ ಪ್ರೌಢಶಾಲೆಯ ಹತ್ತಿರದಿಂದ ಸುಮಾರು ಎರಡು ಕಿ.ಮೀ. ವರೆಗೆ ಈ ಎಲ್ಲಾ ರಸ್ತೆ ಕಾಮಗಾರಿಗಳು ಸುಮಾರು ಆರು ತಿಂಗಳಿಂದ ಆಮೆಗತಿಯಿಲ್ಲಿ ಸಾಗಿದ್ದು, ವಾಹನ ಸವಾರರಿಗೆ ಸಂಕಟ ತಂದಿದೆ.
ಅಪಘಾತಗಳು ಸಾಮಾನ್ಯ: ಈ ರಸ್ತೆಗಳ ಮೇಲೆ ದ್ವಿಚಕ್ರ ವಾಹನ ಸವಾರರು ಹಾಗೂ ಲಾರಿ ಚಾಲಕರು ವಾಹನ ಚಲಾಯಿಸಬೇಕಾದರೆ ಬಹಳ ಜಾಗೃತೆಯಿಂದ ವಾಹನ ಚಲಿಸಬೇಕು. ಒಂದು ವೇಳೆ ಚಾಲನೆಯಲ್ಲಿ ಅಜಾಗುರುಕತೆ ತೊರಿದರೆ ಅಪಘಾತ ತಪ್ಪಿದಲ್ಲ. ಕಳೆದ ಎರಡು ದಿನಗಳ ಹಿಂದೆ ತುಮಕೂರ ಗ್ರಾಮದ ಅನತಿ ದೂರದಲ್ಲಿ ತಡಿಬಿಡಿ ಗ್ರಾಮದ ಭೀಮಣ್ಣ ಪೂಜಾರಿ ಎಂಬ ದ್ವಿಚಕ್ರ ವಾಹನ ಸವಾರನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತನು ಸ್ಥಳದಲ್ಲಿಯೇ ಮೃತ ಪಟ್ಟನು.
ಈ ರಸ್ತೆಯ ಮೇಲೆ ಈಗಾಗಲೇ ಕೋರಗ್ರೀನ ಸಕ್ಕರೆ ಕಾರ್ಖಾನೆಗೆ ಲಾರಿಗಳು ಕಬ್ಬನ್ನು ತುಂಬಿಕೊಂಡು ಸಂಚರಿಸುತ್ತಿವೆ. ರಸ್ತೆ ಕಾಮಗಾರಿ ವಿಳಂಬ ಆಗುತ್ತಿದ್ದು, ವಾರದಲ್ಲಿ ಒಂದೆರಡಾದರೂ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದೇ ರೀತಿ ವಡಗೇರಾ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದು, ರಸ್ತೆಗೆ ಹಾಕಿದ ಜೆಲ್ಲಿ ಕಲ್ಲುಗಳು ರಸ್ತೆ ಮೇಲೆ ತೇಲಿವೆ. ದ್ವಿಚಕ್ರ ವಾಹನ ಸವಾರರು ಷ್ಟೊ ವೇಳೆ ಆಯಾ ತಪ್ಪಿ ಕೈ ಕಾಲು ಮುರಿದುಕೊಂಡ ಘಟನೆ ಜರಗಿವೆ.
ಒಣ ಮಣ್ಣ ಅಡಚಣೆ: ಬಸಯ್ಯ ತಾತಾ ಪ್ರೌಢಶಾಲೆಯ ಹತ್ತಿರದಿಂದ ಸುಮಾರು ಎರಡು ಕಿ.ಮೀವರೆಗೆ ರಸ್ತೆ ಕಾಮಗಾರಿಗಾಗಿ ಒಣ ಮಣ್ಣನ್ನು ಅಲ್ಲಲ್ಲಿ ಗಡ್ಡೆ ಹಾಕಿದ್ದು, ರಸ್ತೆ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇಷ್ಟಾದರೂ ಸಹ ತ್ತಿಗೆದಾರರು ಹಾಗೂ ಅ ಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸರಕಾರ ವಡಗೇರಾ ನೂತನ ತಾಲೂಕು ಕೇಂದ್ರವೆಂದು ಘೋಷಣೆ ಮಾಡಿದೆ, ಅದು ನೂತನ ವರ್ಷದಂದು ಕಾರ್ಯಾರಂಭ ಮಾಡಲಿದೆ. ಆದರೆ ಸುಗಮ ಸಂಚಾರಕ್ಕೆ ಸರಿಯಾದ ರಸ್ತೆಗಳೆ ಇಲ್ಲ. ಆದಕಾರಣ ಜಿಲ್ಲಾ ಧಿಕಾರಿಗಳು ಇತ್ತ ಕಡೆ ಗಮನಹರಿಸಿ ಆದಷ್ಟು ಬೇಗ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲು ಅಧಿಕಾರಿಗಳಿಗೆ ಆದೇಶ ಮಾಡಲು ಈ ಭಾಗದ ಅನೇಕ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುತ್ತಿಗೆದಾರರು ರಸ್ತೆ ಕಾಮಗಾರಿಯನ್ನು ಸ್ಥಗಿತ ಮಾಡಿದ್ದರಿಂದ ಅಮಾಯಕರು ಈ ರಸ್ತೆ ಮೇಲೆ ಜೀವ ಕಳೆದುಕೊಳ್ಳುತಿದ್ದಾರೆ. ಶೀಘ್ರ ರಸ್ತೆ ಕಾಮಗಾರಿಯನ್ನು ಆರಂಭಿಸದಿದ್ದರೆ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು.
ಶಿವುಕುಮಾರ ಕೊಂಕಲ್, ಅಜ್ಮಿರಬಾಷಾ ಗ್ರಾಮಸ
ಈಗಾಗಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಕಾಮಗಾರಿ ಶೀಘ್ರ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.
ಕಾಮಗಾರಿ ಆರಂಭವಾಗದಿದ್ದರೆ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಪಿ.ಬಿ. ಚವ್ಹಾಣ ಜೆಇ
ನಾಮದೇವ ವಾಟ್ಕರ