Advertisement

ವಾಡೆಯ ಸೇವಕರಾಗಿ ಕರ್ತವ್ಯ ನಿರ್ವಹಿಸಿ: ಬಿಷಪ್‌

05:50 AM Aug 08, 2017 | Team Udayavani |

ಕುಂದಾಪುರ: ವಾಡೆಯ ಗುರಿಕಾರರು ತಾವು ಅ ಧಿಕಾರಸ್ಥರಂತೆ ನೆಡೆದುಕೊಳ್ಳದೇ ಸಮಾಜದ ಸೇವಕನಂತೆ ತಮ್ಮ ಕರ್ತವ್ಯ ನಿರ್ವಹಿಸಬೇಕು. ಕೇವಲ ಕ್ರೈಸ್ತರ ಸೇವೆ ಮಾಡುವುದಲ್ಲ, ಕಷ್ಟದಲ್ಲಿರುವ ಎಲ್ಲರ ಸೇವೆ ಮಾಡಿ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ| ವಂ| ಬಿಶಪ್‌ ಜೆರಾಲ್ಡ್‌ ಐಸಾಕ್‌ ಲೋಬೊ ನುಡಿದರು.

Advertisement

ಅವರು ಕುಂದಾಪುರ ವಲಯದ 6 ಚರ್ಚ್‌ಗಳ ವಾಡೆಯ ಗುರಿಕಾರರಿಗೆ ಕುಂದಾಪುರದ ಸಂತ ಮೇರಿಸ್‌ ಜೂ. ಕಾಲೇಜಿನ ಸಭಾ ಭವನದಲ್ಲಿ ನೆಡೆದ ಗುರಿಕಾರರ ತರಬೇತಿ ಕಾರ್ಯಾಗಾರದಲ್ಲಿ ತರಬೇತಿ ನೀಡಿ ಮಾತನಾಡಿದರು.
ಸಂಕಷ್ಟಕ್ಕೆ ಗುರಿಯಾದವರಿಗೆ ಸಹಾಯ ಹಸ್ತ ನೀಡಿ. ವಾಡೆಯಲ್ಲಿ ಶ್ರಮದಾನ ಮಾಡಿ ಸಮಾಜಕ್ಕೆ ಒಳಿತನ್ನು ಮಾಡಿ. ವಾಡೆಯ ಏಕತೆಗಾಗಿ ಶ್ರಮಿಸಿ ಪ್ರೀತಿ ಬಾಂಧವ್ಯದ ಬೆಳವಣಿಗೆಗಾಗಿ ಶ್ರಮಿಸಿರಿ ಎಂದು ಅವರು ಹೇಳಿದರು.
ಕುಂದಾಪುರ, ಪಿಯುಸ್‌ ನಗರ, ಬಸೂÅರು, ಕೋಟೇಶ್ವರ, ಕೋಟ ಮತ್ತು ಕಂಡೂÉರು ಚರ್ಚ್‌ಗಳ  ವಾಡೆಯ ಗುರಿಕಾರರು ಈ ತರಬೇತಿಯಲ್ಲಿ ಭಾಗವಹಿಸಿದರು.

ಈ ತರಬೇತಿಗೆ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಪ್ರಾಧ್ಯಾಪಕ ರೊನಾಲ್ಡ್‌ ಮೊರಾಸ್‌ ಉಪಯುಕ್ತ ಮಾಹಿತಿಯನ್ನು ಹಾಗೂ ತರಬೇತಿಯನ್ನು ನೀಡಿದರು. ಮೆಲ್ವಿನ್‌ ಮಸ್ಕರೇನಸ್‌ ತರಬೇತಿ ಕಾರ್ಯಾಗಾರಕ್ಕೆ ಸಹಕಾರ ನೀಡಿದರು.  ಬರ್ನಾಡ್‌ ಡಿ’ಕೋಸ್ತಾ, ಜಾರ್ಜ್‌ ಡಿಸೋಜಾ ಮತ್ತು ಆಶಾ ಕರ್ವಾಲ್ಲೊ ತಮ್ಮ ಪ್ರತಿಕ್ರಿಯೆಯಗಳನ್ನು ಹಂಚಿಕೊಂಡರು
ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ| ಅನಿಲ್‌ ಡಿ’ಸೋಜಾ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next