Advertisement

ಸಂವಿಧಾನದ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಿ

10:02 AM Aug 10, 2018 | |

ಕಲಬುರಗಿ: ಪೊಲೀಸರು ತಮ್ಮ ಜೀವನದಲ್ಲಿ ಸಂವಿಧಾನದ ಅಂಶಗಳನ್ನು ಅಳವಡಿಸಿಕೊಂಡು ಯಾವುದೇ ತರಹದ ಜಾತಿ, ಧರ್ಮ, ಆಸೆ-ಆಮಿಷಗಳಿಗೆ ಒಳಗಾಗದೇ ದೈರ್ಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಸ್‌ಪಿ. ಎನ್‌. ಶಶಿಕುಮಾರ ಸಲಹೆ ನೀಡಿದರು.

Advertisement

ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಲಬುರಗಿ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 17ನೇ ತಂಡದ ಸಶಸ್ತ್ರ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಪೊಲೀಸ್‌ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಸಮಯದಲ್ಲಿ ಸಂವಿಧಾನದ ಎಲ್ಲ ಅಂಶಗಳು ಮತ್ತು ಕಾನೂನುಗಳನ್ನು ಬೋಧಿಸಲಾಗಿದೆ. ಅವುಗಳ ರೀತ್ಯ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಲ್ಲಿ ಪೊಲೀಸ್‌ ಇಲಾಖೆ ಬಗ್ಗೆ ವಿಶ್ವಾಸ ಮೂಡಿಸಬೇಕು ಎಂದು ಹೇಳಿದರು.

ಪೊಲೀಸ್‌ ಇಲಾಖೆ ಶಿಸ್ತಿಗೆ ಹೆಸರಾಗಿದೆ. ಪೊಲೀಸರು ಸಾರ್ವಜನಿಕರ ನಿರೀಕ್ಷೆಗಳನ್ನು ತಲುಪಿ ಅವರಲ್ಲಿ ಭರವಸೆ ಮೂಡಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಕಾನೂನು ಪಾಲನೆ ಮಾಡಿ ರಕ್ಷಣೆ ನೀಡಬೇಕು. ಸಶಸ್ತ್ರ ಪೊಲೀಸ್‌ ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಗಣೇಶ ಹಬ್ಬ, ರಂಜಾನ್‌ ಹಬ್ಬಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ನಿಯೋಜಿಸಿ ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಪೊಲೀಸ್‌ ಇಲಾಖೆ ಒಬ್ಬ ಸಿಬ್ಬಂದಿ ತನ್ನ
ನಿವೃತ್ತಿ ಕಾಲದವರೆಗೆ ಕೈಗೊಳ್ಳುವ ಎಲ್ಲ ಕರ್ತವ್ಯಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿ ಹೇಳಲಾಗಿದೆ. ಇದರ ಪ್ರಯೋಜನವನ್ನು ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಹೆಚ್ಚುವರಿ ಎಸ್‌ಪಿ ಹಾಗೂ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆ ಪ್ರಾಂಶುಪಾಲ ಜಯಪ್ರಕಾಶ ವರದಿ ವಾಚನ ಮಾಡಿ, ಕಲಬುರಗಿಯ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯಿಂದ ಈವರೆಗೆ 9 ಸಿವಿಲ್‌, 6 ಸಶಸ್ತ್ರ ಮೀಸಲು ಹಾಗೂ 1 ಮಹಿಳಾ ಪೊಲೀಸ್‌ ಪೇದೆ ತಂಡದ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಒಟ್ಟು 16 ತಂಡಗಳಿಗೆ ಮೂಲ ತರಬೇತಿ ನೀಡಲಾಗಿದೆ. ಒಟ್ಟು 2563 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಇಂದು ಪಥಸಂಚಲನದಲ್ಲಿ ಭಾಗಿಯಾಗಿರುವ 17ನೇ ತಂಡದ 146 ಪ್ರಶಿಕ್ಷಣಾರ್ಥಿಗಳಿಗೆ ಮೂಲ ತರಬೇತಿ ನೀಡಲಾಗಿದೆ. ಪ್ರಶಿಕ್ಷಣಾರ್ಥಿಗಳಿಗೆ ಒಳಾಂಗಣ, ಹೊರಾಂಗಣ ತರಬೇತಿಗಳಲ್ಲದೇ ವಿಶೇಷ ತರಬೇತಿಗಳನ್ನು ಸಹ ನುರಿತ ತಜ್ಞರಿಂದ ನೀಡಲಾಗಿದೆ ಎಂದು ವಿವರಿಸಿದರು.

Advertisement

ಸರ್ವೋತ್ತಮ ಪ್ರಶಿಕ್ಷಣಾರ್ಥಿ ಮಹೇಶ ಆರ್‌. ಬಿದರಮಳಿ, ಒಳಾಂಗಣ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ ಪಡೆದ ಜಿ. ಖಲೀಪ್‌ ಪೀರ್‌, ದ್ವಿತೀಯ ಬಹುಮಾನ ನಾಗರಾಜ, ತೃತೀಯ ಬಹುಮಾನ ಅನೀಲ ಟಿ.ವೈ., ಹೊರಾಂಗಣ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ ಮಹೇಶ ಆರ್‌. ಬಿದರಮಳಿ, ದ್ವಿತೀಯ ಬಹುಮಾನ ಹನುಮಂತ ದಳವಾಯಿ,
ತೃತೀಯ ಬಹುಮಾನ ಹಸನಸಾಬ್‌ ಜಕಾತಿ, ಫೈರಿಂಗ್‌ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ ಶಿವಾ ಎಸ್‌.ಆರ್‌., ದ್ವಿತೀಯ ಬಹುಮಾನ ಹನುಮಂತ ದಳವಾಯಿ, ತೃತೀಯ ಬಹುಮಾನ ಮಹೇಶ ಆರ್‌. ಬಿದರಮಳಿ ಅವರಿಗೆ ವಿತರಿಸಲಾಯಿತು.

ಹೆಚ್ಚುವರಿ ಎಸ್‌ಪಿ ಜಯಪ್ರಕಾಶ ಪ್ರತಿಜ್ಞಾ ವಿಧಿ ಬೋಧಿಸಿದರು. ಕಲಬುರಗಿ ಎ ವಿಭಾಗದ ಡಿವೈಎಸ್‌ಪಿ ಲೋಕೇಶ, ನಾಗನಹಳ್ಳಿ ಪೊಲೀಸ್‌ ತರಬೇತಿ ಕಾಲೇಜಿನ ಪ್ರಾಂಶುಪಾಲ ಸವಿತಾ ಹೂಗಾರ, ಕೆಎಸ್‌ಆರ್‌ಪಿ 6ನೇ ಪಡೆ ಕಮಾಂಡಂಟ್‌ ಬಸವರಾಜ ಜಿಳ್ಳೆ, ಹಿರಿಯ ಪೊಲೀಸ್‌ ಅಧಿಕಾರಿಗಳು, ನಿವೃತ್ತ ಪೊಲೀಸ್‌ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಪೋಷಕರು ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next