Advertisement

50 ಲಕ್ಷಕ್ಕೂ ಅಧಿಕ ಯುವ ಮತದಾರರ ಹೊಂದಿದ ಬಿಜೆಪಿ ಇನ್‌ಸ್ಟಾಗ್ರಾಂ ಖಾತೆ

07:13 PM Oct 07, 2022 | Team Udayavani |

ನವದೆಹಲಿ:ದೇಶದಲ್ಲಿನ ಯುವ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಅದು ಈಗ ಯಶಸ್ಸಿನ ಹಾದಿಯತ್ತ ಸಾಗುತ್ತಿದ್ದು, 50 ಲಕ್ಷಕ್ಕೂ ಅಧಿಕ ಮಂದಿ ಯುವಕರು ಅದಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್‌ ಯುವಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ತೆರೆದಿರುವ ಖಾತೆಗೆ 11 ಲಕ್ಷ ಮಂದಿ ಮಾತ್ರ ಇದ್ದಾರೆ.

Advertisement

ಇನ್ನು ನಾಯಕರ ಮಟ್ಟಿಗೆ ಹೇಳುವುದಾದದರೆ ಪ್ರಧಾನಿ ನರೇಂದ್ರ ಮೋದಿಯವರು ಇನ್‌ಸ್ಟಾಗ್ರಾಂನಲ್ಲಿ 7 ಕೋಟಿ ಮಂದಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ 20 ಲಕ್ಷ, ಪ್ರತಿಪಕ್ಷದ ಮುಖಂಡರಾಗಿರುವ ಅರವಿಂದ ಕೇಜ್ರಿವಾಲ್‌, ಮಮತಾ ಬ್ಯಾನರ್ಜಿ, ಅಖೀಲೇಶ್‌ ಯಾದವ್‌ 1.6 ಮಿಲಿಯ, 2.06 ಮಿಲಿಯ, 8.49 ಮಿಲಿಯ ಮಂದಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಬಿಜೆಪಿ 18ರಿಂದ 34 ವರ್ಷ ವಯೋಮಿತಿ ನಡುವಿನ ಮತದಾರರನ್ನು ಕೇಂದ್ರೀಕರಿಸುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಬಿಜೆಪಿ ಇದುವರೆಗೆ 6 ಸಾವಿರಕ್ಕಿಂತಲೂ ಅಧಿಕ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿದೆ. ಪ್ರಧಾನಿ ಮೋದಿ ಅವರ ಮಾನವೀಯತೆ, ಅವರ ಭಾಷಣಗಳು ಸೇರಿದಂತೆ ಹಲವು ಅಂಶಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next