Advertisement

ಮಹಿಳೆಯನ್ನು ಅಪರಾಧಿ ಮಾಡುವ ವ್ಯಭಿಚಾರದ ಕಾನೂನು ಮುಟ್ಟೆನು: ಸುಪ್ರೀಂ

11:35 AM Aug 02, 2018 | Team Udayavani |

ಹೊಸದಿಲ್ಲಿ : ಮಹಿಳೆಯರನ್ನೂ ಅಪರಾಧಿಗಳನ್ನಾಗಿ ಮಾಡುವ ವ್ಯಭಿಚಾರ ನಿಗ್ರಹ ಕಾನೂನನ್ನು ತಾನು ಮುಟ್ಟಲು ಹೋಗುವುದಿಲ್ಲ ಎಂದಿರುವ ಸರ್ವೋಚ್ಚ ನ್ಯಾಯಾಲಯ, ವ್ಯಭಿಚಾರ ನಿಗ್ರಹ ಕಾನೂನು ಲಿಂಗ ಅಲಿಪ್ತ ಕಾನೂನಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿತು.

Advertisement

ವಿವಾಹಿತ ಪರ ಸ್ತ್ರೀಯೊಂದಿಗೆ ವಿವಾಹೇತರ ಲೈಂಗಿಕ ಸಂಬಂಧ ಹೊಂದುವ ಪುರುಷನನ್ನು   ಮಾತ್ರವೇ ಶಿಕ್ಷಿಸುವ ಐಪಿಸಿ ಸೆ.497 (ವ್ಯಭಿಚಾರ ನಿಗ್ರಹ ಕಾನೂನು) ರದ್ದು ಪಡಿಸಬೇಕೆಂದು ಕೋರುವ ಅರ್ಜಿಗಳ ಮೇಲಿನ ವಿಚಾರಣೆಯನ್ನು ಕೈಗೊಂಡ ಸುಪ್ರೀಂ ಕೋರ್ಟ್‌, ಐಪಿಸಿಯ ಸೆ.497 ಕ್ರಿಮಿನಲ್‌ ಅಪರಾಧವಾಗಿ ಉಳಿಯಬೇಕೇ ಬೇಡವೇ ಎಂಬುದನ್ನು ತಾನು ಪರಿಶೀಲಿಸುವುದಾಗಿ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಪೀಠ ಹೇಳಿತು.

ಇನ್ನೊಬ್ಬ ವ್ಯಕ್ತಿಯ ಪತ್ನಿಯೊಂದಿಗೆ ತಾನು ಪರಸ್ಪರ ಒಪ್ಪಿಗೆಯ ಮೇಲೆ ಸಂಭೋಗ ನಡೆಸಿದ್ದಾಗಿ ಹೇಳುವ ವ್ಯಕ್ತಿಯನ್ನು ಜೈಲಿಗೆ ಅಟ್ಟಲು ಸಾಧ್ಯವೇ ಎಂಬುದನ್ನು ಕೂಡ ಪರಿಶೀಲಿಸುವುದಾಗಿ ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ, ಜಸ್ಟಿಸ್‌ಗಳಾದ ರೊಹಿನ್‌ಟನ್‌ ಫಾಲಿ ನಾರಿಮನ್‌, ಎ ಎಂ ಖಾನ್‌ವಿಲ್ಕರ್‌ , ಡಿ ವೈ ಚಂದ್ರಚೂಡ್‌ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಪೀಠ ಹೇಳಿತು. 

ಸಂವಿಧಾನದ 14ನೇ ವಿಧಿಯ ನೆಲೆಯಲ್ಲಿ (ಕಾನೂನಿನ ಮುಂದೆ ಎಲ್ಲರೂ ಸಮಾನರು) ಐಪಿಸಿಯ ಸೆ.497 (ವ್ಯಭಿಚಾರ ನಿಗ್ರಹ) ಕ್ರಿಮಿನಲ್‌ ಅಪರಾಧವಾಗಿ ಉಳಿಯಲು ಸಾಧ್ಯವೇ ಎಂಬುದನ್ನು ತಾನು ಪರಿಶೀಲಿಸುವುದಾಗಿ ಪೀಠವು ಹೇಳಿತು. 

Advertisement

Udayavani is now on Telegram. Click here to join our channel and stay updated with the latest news.

Next