Advertisement

2024ರವರೆಗೂ ಎಲ್ಲರಿಗೂ ಲಭ್ಯವಾಗದು ಲಸಿಕೆ!

12:48 AM Sep 15, 2020 | mahesh |

ಹೊಸದಿಲ್ಲಿ: ಕೋವಿಡ್ ಗೆ ಲಸಿಕೆ ಯಾವಾಗ ಸಿದ್ಧವಾಗುತ್ತದೆ ಎಂಬುದು ಎಲ್ಲರ ಪ್ರಶ್ನೆ. ಆದರೆ, ಲಸಿಕೆ ಅಭಿವೃದ್ಧಿಯಾದರೂ ಅದು ಎಲ್ಲರಿಗೂ ತಲುಪುವುದಕ್ಕೆ ಎಷ್ಟು ಸಮಯ ಹಿಡಿಯ ಬಹುದು? ಜಗತ್ತಿನ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪನಿ ಪುಣೆ ಮೂಲದ ಸೇರಂ ಇನ್ಸ್‌ಟಿಟ್ಯೂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದಾರ್‌ ಪೂನಾವಾಲಾ ಅವರ ಪ್ರಕಾರ, 2024ರವರೆಗೂ ಕೋವಿಡ್‌ ಲಸಿಕೆ ಎಲ್ಲರಿಗೂ ಲಭ್ಯವಾಗುವುದಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಉತ್ಪಾದಿಸುವ ಸಾಮರ್ಥ್ಯವನ್ನು ಕಂಪನಿಗಳು ಬೆಳೆಸಿಕೊಳ್ಳದಿರುವುದೇ ಇದಕ್ಕೆ ಕಾರಣ ಎನ್ನುವುದು ಅವರ ಅಭಿಪ್ರಾಯ. ಪ್ರಪಂಚದಲ್ಲಿನ ಎಲ್ಲರಿಗೂ ಲಸಿಕೆ ದೊರೆಯಲು ಕನಿಷ್ಠ ನಾಲ್ಕರಿಂದ-ಐದು ವರ್ಷಗಳಾದರೂ ಬೇಕು ಎಂದು ಅವರು ಫೈನಾನ್ಶಿಯಲ್‌

Advertisement

ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸೇರಂ ಇನ್ಸ್‌ ಟಿಟ್ಯೂಟ್‌ ಆಫ್ ಇಂಡಿಯಾ ಆಸ್ಟ್ರಾಜೆನೆಕಾ, ನಾವೋವ್ಯಾಕ್ಸ್‌ ಸೇರಿದಂತೆ ಜಗತ್ತಿನ ಐದು ಅಂತಾರಾಷ್ಟ್ರೀಯ ಔಷಧೋದ್ಯಮಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದು ಲಸಿಕೆ ಅಭಿವೃದ್ಧಿಯಾದರೆ, 100 ಕೋಟಿ ಡೋಸ್‌ಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದೆ. ಅದರಲ್ಲಿ 50 ಪ್ರತಿಶತ ಲಸಿಕೆಯನ್ನು ಭಾರತೀಯರಿಗೆ ಒದಗಿಸುವುದಾಗಿ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next