ಪಂಜಾಬ್ : ದೇಶದ ಹಿತದೃಷ್ಠಿಯಿಂದ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಅವರ ಹೆಸರನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಎಂದು ನಿರ್ಗಮಿತ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಹೇಳಿದ್ದಾರೆ.
ಶನಿವಾರ ಪಂಜಾಬ್ ರಾಜಕೀಯ ವಲಯದಲ್ಲಿ ನಡೆದ ಬೆಳವಣೆಗೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ರಾಜೀನಾಮೆ ನೀಡುವಂತೆ ಪಕ್ಷದ ಹೈಕಮಾಂಡ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವಮಾನಿತನಾಗಿದ್ದೇನೆ. “ಅವರು ನಂಬುವವರನ್ನು ಮುಖ್ಯಮಂತ್ರಿಯಾಗಿ ನೇಮಿಸಲು” ಕಾಂಗ್ರೆಸ್ ಮುಕ್ತವಾಗಿದೆ. “ಸಮಯ ಬಂದಾಗ ನನ್ನ ಮುಂದಿನ ಆಯ್ಕೆಗಳನ್ನು ತಿಳಿಸುತ್ತೇನೆ” ಎಂದು ಹೇಳಿದ್ದಾರೆ.
ಇದೆ ವೇಳೆ ನವಜೋತ್ ಸಿಂಗ್ ಸಿಧು ವಿರುದ್ಧ ನೇರವಾಗಿ ಆಕ್ರೋಶ ಹೊರಹಾಕಿದ ಕ್ಯಾಪ್ಟನ್, ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ. ಪಾಕ್ ಪಿಎಂ ಇಮ್ರಾನ್ ಖಾನ್ ಅವರು ಸಿಧು ಅವರ ಸ್ನೇಹಿತ. ಪಾಕ್ ಸೇನೆಯ ಮುಖ್ಯಸ್ಥ ಜ.ಖುಮರ್ ಜಾವೆದ್ ಬಕ್ವಾ ಜೊತೆ ಸಿಧು ಉತ್ತಮ ಸಂಬಂಧ ಹೊಂದಿದ್ದಾರೆ. ಹಾಗಾಗಿ ದೇಶದ ಹಿತದೃಷ್ಠಿಯಿಂದ ನಾನು ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸುವುದನ್ನು ಬಲವಾಗಿ ವಿರೋಧಿಸುತ್ತೇನೆ ಎಂದು ನುಡಿದರು.
ನವಜೋತ್ ಸಿಂಗ್ ಸಿಧು ಓರ್ವ ಅಸಮರ್ಥ ವ್ಯಕ್ತಿ. ನಾನು ನೀಡಿದ್ದ ಒಂದು ಇಲಾಖೆಯನ್ನೂ ಸರಿಯಾಗಿ ನಡೆಸಲು ಅವನಿಂದ ಸಾಧ್ಯವಾಗಲಿಲ್ಲ. ಏಳು ತಿಂಗಳಿನ ಅವಧಿಯಲ್ಲಿ ಒಂದು ಖಡತಗಳನ್ನೂ ವಿಲೇವಾರಿ ಮಾಡಲಿಲ್ಲ ಎಂದು ಹರಿಹಾಯ್ದರು.
ನವಜೋತ್ ಸಿಂಗ್ ಸಿಧು ಓರ್ವ ಅಸಮರ್ಥ ವ್ಯಕ್ತಿ. ನಾನು ನೀಡಿದ್ದ ಒಂದು ಇಲಾಖೆಯನ್ನೂ ಸರಿಯಾಗಿ ನಡೆಸಲು ಅವನಿಂದ ಸಾಧ್ಯವಾಗಲಿಲ್ಲ. ಏಳು ತಿಂಗಳಿನ ಅವಧಿಯಲ್ಲಿ ಒಂದು ಖಡತಗಳನ್ನೂ ವಿಲೇವಾರಿ ಮಾಡಲಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್‍ನಲ್ಲಿ ಮುಂದುವರೆಯುತ್ತೀರಾ ? ಎನ್ನುವ ಮಾಧ್ಯಮದ ಪ್ರಶ್ನೆಗೆ “ಸದ್ಯಕ್ಕೆ ಈ ಪ್ರಶ್ನೆಗೆ ನಾನು ಉತ್ತರಿಸಲಾರೆ ಎಂದು ಅಮರೀಂದರ್ ಸಿಂಗ್ ಅವರು ಹೇಳಿದರು.