Advertisement
ಮಂಗಳೂರು ನಗರದಿಂದ ಸುಮಾರು 16 ಕಿ. ಮೀ. ದೂರದಲ್ಲಿರುವ ಈ ಗ್ರಾಮ ಮಂಗ ಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಈ ಗ್ರಾಮಘೋಷಿತ ಉಳ್ಳಾಲ ತಾಲೂಕಿಗೆ ಒಳಪಡುತ್ತದೆ. ಗ್ರಾಮದ ಒಂದು ಭಾಗ ನೇತ್ರಾವತಿ ನದಿ ತಟಕ್ಕೆ ತಾಗಿಕೊಂಡಿದೆ. ಇನ್ನೊಂದು ಭಾಗದಲ್ಲಿ ಗುಡ್ಡ ಪ್ರದೇಶ ಹೆಚ್ಚಿದ್ದು, ಇದೇ ಪ್ರದೇಶದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. 1,327,11 ಎಕರೆ ಪ್ರದೇಶದಲ್ಲಿರುವ ಈ ಗ್ರಾಮದಲ್ಲಿ ಸುಮಾರು 1,100 ಮನೆಗಳಿದ್ದು, ಏಳು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಇಲ್ಲಿ ಸಾರ್ವಜನಿಕ ಕುಡಿಯುವ ನೀರಿಗೆ ಇರುವ ಮೂರು ತೆರೆದ ಬಾವಿಗಳಲ್ಲಿ ಒಂದು ಬಾವಿ ನೀರು ಮಾತ್ರ ಕುಡಿಯಲು ಯೋಗ್ಯವಾಗಿದ್ದು, ಉಳಿದಂತೆ ನೀರಿಗೆ ಕೊಳವೆ ಬಾವಿಗಳೇ ಗತಿ.
Related Articles
Advertisement
ಜ ಅಂಬ್ಲಿಮೊಗರು ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆಯೂ ಇದ್ದು, ಈಗಾಗಲೇ ಎಲಿಯಾರ್‌ನಲ್ಲಿ ತ್ಯಾಜ್ಯ ವಿಲೇವಾರಿಗೆ ಜಾಗ ಮೀಸಲಿಡಲಾಗಿದೆ. ಇದರೊಂದಿಗೆ ಖಾಸಗಿ ಸಹಭಾಗಿತ್ವದಲ್ಲಿಯೂ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಮಾತುಕತೆ ನಡೆಯುತ್ತಿದೆ.
ಜ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನಕ್ಕೆ ಬೇಡಿಕೆಯಿದ್ದು ಪಂಚಾಯತ್‌ಗೆ ಅರ್ಜಿಗಳು ಸಲ್ಲಿಕೆಯಾಗಿದೆ. ಶಾಲೆ ಸಹಿತ ನಿವೇಶನ ರಹಿತರಿಗೆ ಜಾಗ ಗುರುತಿಸಿದ್ದರೂ ಕೃಷಿಕರ ಸ್ವಾಧೀನದಲ್ಲಿರುವ ಜಾಗಕ್ಕೆ ಕೋರ್ಟ್ ಮೆಟ್ಟಿಲೇರಿದೆ.
ಜ ಈ ಪ್ರದೇಶದಲ್ಲಿ ಪ್ರತಿ ಮಳೆಗಾಲದ ವೇಳೆ ನೇತ್ರಾವತಿ ನದಿ ಉಕ್ಕಿ ಹರಿಯು ವುದರಿಂದ ಕೃಷಿ ಭೂಮಿಗೆ ನೆರೆ ಬರು ವುದು ಸಾಮಾನ್ಯ. ಅಲ್ಲದೆ ಬೆಳ್ಮ ಮತ್ತು ಮುನ್ನೂರು ಗ್ರಾಮಗಳಿಂದ ಹರಿದು ಬರುವ ಮಳೆನೀರಿನಿಂದ ಕೃತಕ ನೆರೆ ನಿರ್ಮಾಣ ವಾಗುತ್ತಿದೆ. ಹಿಂದೆ ಈ ಪ್ರದೇಶದಲ್ಲಿ ಸಿಗಡಿ ಕೃಷಿ, ಆವೆಮಣ್ಣಿನ ಇಟ್ಟಿಗೆ ಉದ್ಯಮ ಹಲವರಿಗೆ ಉದ್ಯೋಗ ನೀಡುತ್ತಿತ್ತು. ಆದರೆ ಕೃತ ನೆರೆಯ ಕಾರಣದಿಂದ ಆ ಚಟುವಟಿಕೆಗಳು ಸ್ಥಗಿತಕೊಂಡಿವೆ.
ಜ ಇಲ್ಲಿನ ಒಳ ರಸ್ತೆಗಳು ಇನ್ನು ಅಭಿವೃದ್ಧಿ ಯಾಗಬೇಕಾಗಿದೆ. ಮಳೆಗಾಲದಲ್ಲಿ ಗುಡ್ಡ ಕುಸಿತ ಇಲ್ಲಿನ ಪ್ರಮುಖ ಸಮಸ್ಯೆಗಳಲ್ಲೊಂ ದು. ಬಸ್ ಸಂಚಾರ ನಿಯಮಿತವಾಗಿದೆ. ಈ ವ್ಯಾಪ್ತಿಯಲ್ಲಿ ಇನ್ನಷ್ಟು ಸರಕಾರಿ ಬಸ್‌ಗಳು ಸಂಚಾರ ನಡೆಸುವಂತೆ ಆಗ್ರಹಿಸಿ ಹೋರಾಟಗಳು ನಡೆಯುತ್ತಿವೆ.
ಬೇಸಗೆ ಕಾಲದಲ್ಲಿ ಟ್ಯಾಂಕರ್ ನೀರು :
ಅಂಬ್ಲಿಮೊಗರು ಕುಡಿಯುವ ನೀರಿನ ಆಭಾವವಿರುವ ಪ್ರದೇಶಗಳಿಗೆ ಸರಬರಾಜು ಮಾಡಲು ಒಟ್ಟು 9 ಕೊಳವೆ ಬಾವಿಗಳಿವೆ. ಬೇಸಗೆ ಕಾಲದಲ್ಲಿ ಮೂರು ತಿಂಗಳು ಈ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಜನರಿಗೆ ಟ್ಯಾಂಕರ್ ನೀರೆ ಆಶ್ರಯ. ಗ್ರಾಮದ ಪ್ರಮುಖ ಪ್ರದೇಶವಾದ ತಿಲಕ್ ನಗರದಲ್ಲಿ ಅತೀ ಹೆಚ್ಚು ಮನೆಗಳಿದ್ದರೆ, ಉಳಿದಂತೆ ಬೆಳ್ಮ ಗ್ರಾಮದ ಗಡಿ ಪ್ರದೇಶವಾದ ರೆಂಜಾಡಿ ಗಾಂಧಿನಗರ, ಸೇನೆರೆಬೆಟ್ಟು, ಮದಕ, ತಾರಿಗುಡ್ಡೆ, ಅಂಬೆಡ್ಕರ್ ಪದವು, ಬರುವ, ಎಲಿಯಾರ್, ಪಡ್ಡಾಯಿಗುಡ್ಡೆ, ಮದಕ ಗುಡ್ಡೆ, ಸಣ್ಣ ಮದಕ ಪ್ರದೇಶಗಳಿಗೆ ಕೊಳವೆ ಬಾವಿಯ ನೀರೆ ಆಶ್ರಯವಾಗಿದೆ. ಈ ಕೊಳವೆ ಬಾವಿಗಳು ಹಾಳಾದರೆ ಈ ಪ್ರದೇಶಗಳಿಗೆ ಒಂದೆರಡು ದಿನಗಳು ನೀರಿಗೆ ಬರ ಸ್ಥಿತಿ ನಿರ್ಮಾಣವಾಗುತ್ತದೆ.