Advertisement

ಕೊಳಗೇರಿ ಮಕ್ಕಳಿಗಾಗಿ ಮನೆ ಬಾಗಿಲಿಗೆ ಬಸ್‌ ಶಾಲೆ

12:28 PM Sep 13, 2022 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊಳಗೇರಿಯ ಅಂಗನವಾಡಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಫ್ರೀ ಥಿಂಕಿಂಗ್‌ ಫೌಂಡೇಷನ್‌, ಬಿಬಿಎಂಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ವಂಡರ್‌ ಆನ್‌ ವ್ಹೀಲ್ಸ್‌ (ಮನೆ ಬಾಗಿಲಿಗೆ ಶಾಲೆ) ವಾಹನಕ್ಕೆ ಸೋಮವಾರ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಚಾಲನೆ ನೀಡಿದರು.

Advertisement

ಬಿಬಿಎಂಪಿ ವತಿಯಿಂದ ತನ್ನ ಎಲ್ಲ ವಲಯಗಳಲ್ಲೂ 10 ಬಸ್‌ಗಳಲ್ಲಿ ಸ್ಕೂಲ್‌ ಆನ್‌ ವ್ಹೀಲ್‌ ವಾಹನಗಳ ಮೂಲಕ ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣ ನಿಡಲಾಗುತ್ತಿದೆ. ಅದರ ಜತೆಗೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮಾಂಟೆಸ್ಸರಿ ಮಕ್ಕಳಿಗಾಗಿ ಮೇ 25ರಂದು ವಂಡರ್‌ ಆನ್‌ ವ್ಹೀಲ್‌ ಬಸ್‌ ಸೇವೆ ಆರಂಭಿಸಲಾಗಿತ್ತು. ಅದರ ಜತೆಗೆ ಇದೀಗ ಪೂರ್ವ ವಲಯದಲ್ಲೂ ವಂಡರ್‌ ಆನ್‌ ವ್ಹೀಲ್‌ ವಾಹನ ಸೇವೆಗೆ ಚಾಲನೆ ನೀಡಲಾಗಿದ್ದು, ಕೊಳಗೇರಿಯಲ್ಲಿ ವಾಸಿಸುವ 2.5ರಿಂದ 6 ವರ್ಷದ ಮಕ್ಕಳು ವಾಹನಗಳಲ್ಲಿ ಬಂದು ಕಲಿಕೆ ಮಾಡಬಹುದಾಗಿದೆ.

ವಂಡರ್‌ ಆನ್‌ ವ್ಹೀಲ್‌ ವಾಹನದಲ್ಲಿ ಕಲಿಕಾ ಸಾಮಗ್ರಿಗಳು, ಇಬ್ಬರು ಶಿಕ್ಷಕರು, ಒಬ್ಬ ಗ್ರೂಪ್‌ ಡಿ ನೌಕರ, ಬಿಳಿ ಹಲಗೆ, ಮಕ್ಕಳನ್ನು ಆಕರ್ಷಿಸುವ ಚಿತ್ರಗಳು, ಕುಡಿಯುವ ನೀರು ಸೇರಿ ಇನ್ನಿತರ ಮೂಲಸೌಲಭ್ಯಗಳು ಇರಲಿವೆ. ಬಿಬಿಎಂಪಿ ವಿಶೇಷ ಆಯುಕ್ತ ಡಾ. ರಾಮ್‌ಪ್ರಸಾತ್‌ ಮನೋಹರ್‌, ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ಉಮೇಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಉಷಾ, ಫ್ರೀ ಥಿಂಕಿಂಗ್‌ ಫೌಂಡೇಷನ್‌ ಸಂಸ್ಥೆಯ ಮುಖ್ಯಸ್ಥ ಸುನೋಜ್‌ ಫಿಲಿಪ್‌ ಇತರರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next