Advertisement

ರಸ್ತೆಯಿಲ್ಲದ ಗದ್ದೆಯಲ್ಲಿ ಬಂದು ನಿಂತಿದೆ ಮಾಯಾವಿ ಕಾರು! ಪರ್ಕಳದ ಗದ್ದೆಯಲ್ಲಿ ನಿಗೂಢ ಕಾರು!

11:41 AM Nov 15, 2020 | keerthan |

ಉಡುಪಿ: ಇಲ್ಲಿನ ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಎದುರು ತಗ್ಗಿನಲ್ಲಿರುವ ಗದ್ದೆಯಲ್ಲಿ ನಿಗೂಢ ರೀತಿಯಲ್ಲಿ ಎರಡು ದಿನಗಳಿಂದ ನಿಂತರುವ ಕಾರು ಜನರ ಕುತೂಹಲಕ್ಕೆ ಕಾರಣವಾಗಿದೆ.

Advertisement

ತಿರುವನಂತಪುರ ನೋಂದಣಿಯ (KL 01 AV 4981) ಕಾರು ಇದಾಗಿದ್ದು, ಕಾರಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಆದರೂ ರಸ್ತೆಯೂ ಇಲ್ಲದ ಆ ಗದ್ದೆಗೆ ಕಾರು ಹೇಗೆ ಬಂತು? ಯಾರು ತಂದು ನಿಲ್ಲಿಸಿದರು? ನಿಲ್ಲಿಸಿದವರು ಎಲ್ಲಿ ಹೋದರು? ಎನ್ನುವುದೇ ಸದ್ಯ ಜನರನ್ನು ಕಾಡುತ್ತಿರುವ ಪ್ರಶ್ನೆ.

ಒಂದು ವೇಳೆ ಅಪಘಾತವಾಗಿ ಕಾರು ಅಲ್ಲಿ ಬಿದ್ದಿದ್ದರೆ, ಅಷ್ಟು ಆಳಕ್ಕೆ ಉರುಳುವಾಗ ಹಾನಿಯಾಗಬೇಕಿತ್ತು, ಆದರೆ ಕನಿಷ್ಠ ಕೆಸರು-ಮಣ್ಣು ಕೂಡ ಹಿಡಿದಿಲ್ಲ. ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಎದುರು ತಗ್ಗಿನಲ್ಲಿರುವ ಗದ್ದೆಯಲ್ಲಿ ಹುಲ್ಲು ಪೊದೆ ಬೆಳೆದಿದೆ. ಕಾರು ಬಂದ ಜಾಗದ ಗುರುತು ಮೂಡಬೇಕಿತ್ತು. ಆದರೆ ಕಾರು ನಿಂತಿರುವ ಜಾಗದ ಹೊರತು ಒಂದಿಂಚೂ ಹುಲ್ಲು/ಪೊದೆಗೆ ಹಾನಿಯಾಗಿಲ್ಲ.

ಇದನ್ನೂ ಓದಿ:ಇಂದಿನಿಂದ ತೆರೆಯಲಿದೆ ಶಬರಿಮಲೆ ದೇವಸ್ಥಾನ: ಈ ಬಾರಿ ಭಕ್ತರು ಈ ನಿಯಮಗಳನ್ನು ಪಾಲಿಸಲೇಬೇಕು

Advertisement

ಅಪರಾಧ ಪ್ರಕರಣ ಶಂಕೆ: ಕೇರಳದ ಕಾರನ್ನು ಉಡುಪಿ ಸಮೀಪದ ಪರ್ಕಳದಲ್ಲಿ ಈ ರೀತಿ ನಿಗೂಢವಾಗಿ ಬಿಟ್ಟು ಹೋಗಿರುವ ಹಿನ್ನಲೆಯಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಕೊಲೆ ಅಥವಾ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನಂತರ ಇಲ್ಲಿ ಈ ರೀತಿ ಕಾರನ್ನು ಬಿಟ್ಟು ಹೋಗಿರಬಹುದು ಎನ್ನುವ ಶಂಕೆ ಬಲವಾಗಿ ವ್ಯಕ್ತವಾಗುತ್ತಿದೆ.

ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next