Advertisement
ಅವರು 116 ವರ್ಷದ ಹಿಂದಿನ ದಾಖಲೆ ಪತನಗೊಳಿಸಿದ್ದರು. ಬರೋಬ್ಬರಿ 1009 ರನ್ ಚಚ್ಚಿ ಅಂತರ್ ಶಾಲಾ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ಹುಡುಗನ ಸಾಧನೆ ಕಂಡು ಜನ ಅದ್ಭುತ, ಅಮೋಘ ಎಂದರು. ಎಲ್ಲೆಡೆಯಿಂದ ಪ್ರಶಂಸೆ, ಸನ್ಮಾನ ಪ್ರಣವ್‌ರನ್ನು ಹುಡುಕಿಕೊಂಡು ಬಂತು. ಕ್ರಿಕೆಟ್‌ನಲ್ಲಿ ಭವ್ಯ ಭವಿಷ್ಯ ಕಾಣುತ್ತಿದ್ದ ಪ್ರಣವ್ ಮುಖದಲ್ಲಿ ನಗು ಮೂಡಿತು. ಹೆತ್ತವರು ಮಗನ ಬಗ್ಗೆ ಕನಸು ಕಾಣಲು ಆರಂಭಿಸಿದರು. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ತಿಂಗಳಿಗೆ 10 ಸಾವಿರ ರೂ. ಸ್ಕಾಲರ್‌ಶಿಪ್ ನೀಡಿತು. ಎಲ್ಲವೂ ಅಂದುಕೊಂಡಂತೆ ನಡೆಯುತ್ತಿತ್ತು.
Related Articles
Advertisement
ಮೂಲಗಳ ಪ್ರಕಾರ ಪ್ರಣವ್ ಕಳಪೆ ಫಾರ್ಮ್ನಿಂದಾಗಿ 16 ವರ್ಷ ವಯೋಮಿತಿಯೊಳಗಿನ ಎಂಸಿಎ ಕ್ರಿಕೆಟ್ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ ಪ್ರಣವ್‌ಗೆ ಏರ್ ಇಂಡಿಯಾ ಮತ್ತು ದಾದರ್ ಯೂನಿಯನ್ ಸಂಸ್ಥೆ ನೆಟ್ ಅಭ್ಯಾಸ ನಡೆಸಲು ಉಚಿತ ವೇದಿಕೆ ನೀಡಿತ್ತು. ಸದ್ಯ ಈ ಸೌಲಭ್ಯ ಕೂಡ ಕಡಿತಗೊಂಡಿದೆ ಎನ್ನಲಾಗಿದೆ.
ಮಾಧ್ಯಮದಿಂದ ಕ್ರಿಕೆಟ್ ಭವಿಷ್ಯ ಹಾಳು?: ಪ್ರಣವ್ ಏಕಾಏಕಿ ವಿಫಲವಾಗಲು ಕಾರಣ ಅತಿಯಾದ ಮಾಧ್ಯಮ ಪ್ರಚಾರವೇ? ಹೌದು, ಎನ್ನುತ್ತಾರೆ ಪ್ರಣವ್ ಕೋಚ್ ಮೊಬಿನ್ ಶೇಖ್, ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಪ್ರಕಟವಾಗಿರುವುದರಿಂದ ಪ್ರಣವ್ ಒತ್ತಡಕ್ಕೆ ಒಳಗಾಗಿದ್ದಾನೆ. ಕ್ರಿಕೆಟ್‌ನತ್ತ ಏಕಾಗ್ರತೆ ಕಳೆದುಕೊಂಡಿದ್ದಾನೆ ಎಂದಿದ್ದಾರೆ.
ಕೇಂದ್ರ ಸಚಿವರ ವಿರುದ್ಧ ಪ್ರಣವ್ ಪ್ರತಿಭಟನೆ2016ರಲ್ಲಿ ಮಹಾರಾಷ್ಟ್ರ ಕಲ್ಯಾಣ್ ನಗರದಲ್ಲಿ ಪ್ರಣವ್ ಅಭ್ಯಾಸ ನಡೆಸಲು ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ಭೇಟಿ ಹಿನ್ನಲೆಯಲ್ಲಿ ಅವಕಾಶ ನೀಡಿರಲಿಲ್ಲ. ಸಚಿವರ ಹೆಲಿಕಾಪ್ಟರ್ ಇವರು ಅಭ್ಯಾಸ ನಡೆಸುತ್ತಿದ್ದ ಕ್ರೀಡಾಂಗಣದಲ್ಲಿ ಇಳಿಯುವುದಿತ್ತು. ಇದರ ವಿರುದ್ಧ ಪ್ರಣವ್ ಪ್ರತಿಭಟನೆ ನಡೆಸಿದ್ದರು. ಪೊಲೀಸರು ಪ್ರಣವ್ ಹಾಗೂ ಅವರ ತಂದೆ ಜತೆಗೆ ಅನುಚಿತವಾಗಿ ವರ್ತಿಸಿದ್ದರು. ಇದು ವಿವಾದವಾಗಿತ್ತು.