Advertisement

‘ನಿರ್ಬಂಧ ಇಲ್ಲದೆಯೂ ಸಾಧಿಸಿದೆ’

02:32 PM May 02, 2018 | |

ನಗರ: ಯಾವುದೇ ನಿರ್ಬಂಧ ಹೇರದ ಕಾರಣ ಪಿಯುಸಿಯಲ್ಲಿ 590 ಅಂಕ ಗಳಿಸಲು ಸಾಧ್ಯವಾಯಿತು ಎಂದು ವರ್ಷಾ ತಿಳಿಸಿದ್ದಾರೆ.

Advertisement

ಪುತ್ತೂರು ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಇವರು, ತಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬಂದಿದೆ ಎಂದು ತಿಳಿಸಿದ್ದಾರೆ. ಮನೆಯವರು ಯಾವುದೇ ರೀತಿಯ ಒತ್ತಡ ಹೇರಿರಲಿಲ್ಲ. ಆರಾಮವಾಗಿ ಓದುತ್ತಿದ್ದೆ. ಇದರ ನಡುವೆ ಸಿಇಟಿ ಬರೆದಿದ್ದೇನೆ. ನೀಟ್‌ ಕೂಡ ಬರೆಯಬೇಕೆಂದಿದ್ದೇನೆ. ಬಳಿಕವಷ್ಟೇ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ತನ್ನ ಇಷ್ಟದ ವಿಭಾಗ ಜೀವಶಾಸ್ತ್ರ ಎಂದು ವರ್ಷಾ ತಿಳಿಸಿದ್ದಾರೆ.

ಇವರ ತಂದೆ ಧರ್ಮಪಾಲ ಅವರು ಮಣಿಕ್ಕರ ಪ್ರೌಢಶಾಲೆಯಲ್ಲಿ ಶಿಕ್ಷಕ. ತಾಯಿ ಉಷಾ ಎಂ. ಅವರು ನರಿಮೊಗರು ಐಟಿಐ ಕಾಲೇಜಿನಲ್ಲಿ ಜೆಟಿಒ (ಜ್ಯೂನಿಯರ್‌ ಟ್ರೈನಿಂಗ್‌ ಆಫೀಸರ್‌). ತಂಗಿ 7ನೇ ತರಗತಿ ಪಾಸ್‌ ಆಗಿದ್ದಾರೆ.

ಆಕೆಯೇ ನಿರ್ಧರಿಸಲಿ
ಮಗಳಿಗೆ ಯಾವುದೇ ರೀತಿಯ ನಿರ್ಬಂಧ ಹೇರಿರಲಿಲ್ಲ. ಆಕೆಗೆ ಬೇಕಾದಂತೆ ಟಿವಿ, ಮೊಬೈಲ್‌ ನೋಡುತ್ತಿದ್ದಳು. ಮೊದಲಿನಿಂದಲೇ ಕಲಿಯುವುದರಲ್ಲಿ ಮುಂದಿದ್ದಳು. ವರ್ಷಾಳನ್ನು ವೈದ್ಯೆ ಮಾಡಬೇಕೆಂಬ ಕನಸಿದೆ. ಆದರೆ ಆಕೆಯ ಭವಿಷ್ಯವನ್ನು ನಿರ್ಧರಿಸುವುದು ಅವಳಿಗೆ ಬಿಟ್ಟದ್ದು. ಶಟ್ಲ, ಸ್ವಿಮ್ಮಿಂಗ್‌, ಕಬಡ್ಡಿ ಆಡುವುದು ಈಕೆಯ ಹವ್ಯಾಸ.
ಧರ್ಮಪಾಲ್‌ ಕೆ.ಕೆ.
  ವರ್ಷಾ ತಂದೆ.

Advertisement

Udayavani is now on Telegram. Click here to join our channel and stay updated with the latest news.

Next