Advertisement

ಮಹಿಳಾ ವಚನಕಾರರು ಆಧುನಿಕ ಸಮಾಜಕ್ಕೆ ಸ್ಫೂರ್ತಿ

01:55 PM May 09, 2019 | pallavi |

ಹಾವೇರಿ: ಮೈಸೂರಿನ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌, ಜಿಲ್ಲಾ ಕದಳಿ ವೇದಿಕೆ, ಹಾವೇರಿಯ ಜಿ.ಎಚ್. ಮಹಾವಿದ್ಯಾಲಯದ ಮಹಿಳಾ ಸಂಘ ಆಶ್ರಯದಲ್ಲಿ ನಗರದ ಜಿ.ಎಚ್. ಕಾಲೇಜಿನಲ್ಲಿ ಇತ್ತೀಚೆಗೆ ‘ಸ್ತ್ರೀ ಅಸ್ಮಿತೆ ಮತ್ತು ವಚನ ಕ್ರಾಂತಿ’ ಕುರಿತ ಚಿಂತನಗೋಷ್ಠಿ ನಡೆಯಿತು.

Advertisement

ಕರ್ಜಗಿಯ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಿಳಾ ವಚನಕಾರರು ಆಧುನಿಕ ಸಮಾಜದ ಸ್ಫೂರ್ತಿ ದೀಪಗಳು ಎಂದರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಭಾರತೀಯ ಮಹಿಳೆ ಸೂತಕವನ್ನು ಹೊತ್ತವಳು ಎಂಬ ಶೋಚನೀಯ ಸಂಗತಿ ಇತಿಹಾಸದಲ್ಲಿತ್ತು. ಬಸವಯುಗದಲ್ಲಿ ಮಹಿಳೆಗೆ ಪ್ರಥಮ ಆದ್ಯತೆಯನ್ನು ನೀಡಲಾಯಿತು ಎಂದರು.

‘ಲಿಂಗ ಅಸಮಾನತೆ ಮತ್ತು ಸೂತಕಗಳನ್ನು ಸುಳ್ಳು ಮಾಡಿದ ವಚನ ಕ್ರಾಂತಿ’ ಕುರಿತು ಉಪನ್ಯಾಸ ನೀಡಿದ ಡಾ| ಅನುಸೂಯಾ ಕಾಂಬಳೆ, ವಚನ ಕ್ರಾಂತಿ ಎಂಬ ಪದದಲ್ಲಿ ಕ್ರೂರತೆ ಇದೆ. ‘ವಚನ ಚಳವಳಿ’ ಎಂಬ ನುಡಿ ಸಮಂಜಸವಾಗಿದೆ. ಮಹಿಳೆಯರಲ್ಲಿ ಮರು ಅಸ್ಮಿತೆ ಕಂಡುಬಂದಿದ್ದು ಬಸವಯುಗದಲ್ಲಿ. ಕಾಯಕದಲ್ಲಿ ಗೌರವವನ್ನು ಸೂಚಿಸಿ, ಸತಿಪತಿಗಳೊಂದಾದ ಭಕ್ತಿ ಹಿತವಪ್ಪದು. ಶಿವಂಗೆ ಎಂಬುದರಲ್ಲಿ ಸಮಾನತೆಯನ್ನು ತಂದರು ಎಂದರು.

‘ವೈಚಾರಿಕ ದಾಂಪತ್ಯಕ್ಕೆ ಅಡಿಪಾಯ ಹಾಕಿದ ವಚನ ಕ್ರಾಂತಿ’ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ, ಸಿದ್ದಣ್ಣ ಲಂಗೋಟಿ, ಸೃಷ್ಟಿಯ ಉಗಮಕ್ಕೆ ಶಿವ, ಶಕ್ತಿ ತತ್ವಗಳು ಪ್ರಮುಖವಾಗಿವೆ. ಅದಕ್ಕಾಗಿ ಶರಣರು ದಾಂಪತ್ಯಕ್ಕೆ ಹೆಚ್ಚಿನ ಮಹತ್ವ ಕೊಟ್ಟರು. ದಾಂಪತ್ಯದಲ್ಲಿ ಶರಣರ ಕಾಯಕ ಸತ್ಯಶುದ್ಧವಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಅಮೃತಮ್ಮ ಶೀಲವಂತರ ವಚನಗಳನ್ನು ವಿಶ್ಲೇಷಿಸಿದರು. ವಾಣಿ ಕಣೆಕಲ್ ಮತ್ತು ಸಂಗಡಿಗರು ವಚನ ಸಂಗಮದಲ್ಲಿ ಭಾಗಿಯಾಗಿದ್ದರು. ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಎಂ.ಎಸ್‌. ಯರಗೊಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ| ಮಹಾದೇವಿ ಕಣವಿ ಸ್ವಾಗತಿಸಿದರು. ದಾಕ್ಷಾಯಿಣಿ ಗಾಣಿಗೇರ ಪರಿಚಯಿಸಿದರು. ಮಧುಮತಿ ಚಿಕ್ಕೇಗೌಡರ ನಿರೂಪಿಸಿದರು. ಪ್ರೊ| ಉಮಾ ಜಾಲಿ, ಮಾರುತಿ ಶಿಡ್ಲಾಪೂರ ಹಾಗೂ ಶರಣ ಶರಣೆಯರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next