Advertisement

ಮಹಿಳಾ ವಿವಿ ನಾಮಕರಣಕ್ಕೆಭತ್ಯೆ: ವಾಪಸ್‌ಗೆ ವಿಪಕ್ಷ ಆಗ್ರಹ

11:13 AM Jun 08, 2017 | Team Udayavani |

ಬೆಂಗಳೂರು: ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರಿಡುವ ಕಾರ್ಯಕ್ರಮಕ್ಕೆ ಆಗಮಿಸುವ ಮಹಿಳೆಯರಿಗೆ 200 ರೂ. ಭತ್ಯೆ ನೀಡುವ ಆದೇಶವನ್ನು ಸರ್ಕಾರ ವಾಪಸ್‌ ಪಡೆಯಬೇಕೆಂದು ಪ್ರತಿಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಉದಯವಾಣಿ ಪತ್ರಿಕೆಯ ವಿಶೇಷ ವರದಿ ಕುರಿತು ಪ್ರಸ್ತಾಪಿದ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌,
ರಾಜ್ಯ ಸರ್ಕಾರ ಮಹಿಳೆಯರಿಗೆ ಹಣ ಕೊಟ್ಟು ಕಾರ್ಯಕ್ರಮಕ್ಕೆ ಕರೆತರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಸರ್ಕಾರದ
ಭಂಡತನವನ್ನು ತೋರಿಸುತ್ತದೆ. ಇಂತಹ ಕೆಲಸಗಳಿಂದಲೇ ರಾಜ್ಯ ಸರ್ಕಾರ ಅಧೋಗತಿಗೆ ಇಳಿದಿದೆ. ಒಂದು ನಾಗರಿಕ ಸರ್ಕಾರ ತಮ್ಮ ಕಾರ್ಯಕ್ರಮಗಳ ಪ್ರಚಾರ ಮಾಡಲು ಈ ರೀತಿಯ ಕೆಲಸ ಮಾಡುವುದು ಒಳ್ಳೆಯದಲ್ಲ.

ಸರ್ಕಾರ ಮಹಿಳೆಯರನ್ನು ಕರೆತಂದು ಭತ್ಯೆ ನೀಡುವ ಆದೇಶ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಮಹಿಳೆ ಯರಿಗೆ ಹಣ ಕೊಟ್ಟು ಕಾರ್ಯಕ್ರಮಕ್ಕೆ
ಕರೆಸುವುದು ರಾಜ್ಯದ ಜನರ ತೆರಿಗೆ ಹಣ ಲೂಟಿ ಮಾಡುವ ಕೆಲಸ. ಅಭಿವೃದ್ಧಿ ಕಾರ್ಯ ಕ್ರಮಗಳು, ಸಾಧನಾ ಸಮಾವೇಶಗಳಿಗಾಗಿ ಕೋಟ್ಯಂತರ ರೂಪಾಯಿ ದುಂದು ವೆಚ್ಚ ಮಾಡುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಇಂತಹ ಕಾರ್ಯಕ್ರಮಗಳ ಬದಲಾಗಿ ಕುಗ್ರಾಮಗಳ ಅಭಿವೃದ್ಧಿ ಮಾಡಲಿ ಎಂದು ಸಲಹೆ ನೀಡಿದ ಅವರು, ಇದು ಜನಪರ ಸರ್ಕಾರವೋ ಅಥವಾ ತುಘಲಕ್‌ ಸರ್ಕಾರವೋ ಎಂಬ ಅನುಮಾನ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತ ಪಡಿಸಿರುವ ಜೆಡಿಎಸ್‌ ಉಪ ನಾಯಕ ವೈಎಸ್‌ವಿ ದತ್ತಾ, ಉನ್ನತ ಶಿಕ್ಷಣ ಸಚಿವ
ಬಸವರಾಜ ರಾಯರೆಡ್ಡಿ ದಕ್ಷ ಮತ್ತು ಪ್ರಾಮಾಣಿಕ ಸಚಿವರು, ಅವರು ಈ ರೀತಿಯ ತೀರ್ಮಾನ ಮಾಡಿರುವುದು ಸರಿಯಲ್ಲ. ಈ ಹಿಂದೆ ಯಡಿಯೂರಪ್ಪ ಕೂಡ ಹೆಣ್ಣುಮಕ್ಕಳಿಗೆ ಸೀರೆ, ರವಿಕೆ ಕೊಟ್ಟು ಬಸ್‌ಗಳಲ್ಲಿ ಕರೆಸಿಕೊಂಡು ಬಂದಿದ್ದರು. ಆದರೆ, ರಾಯರೆಡ್ಡಿ ಅಂತಹ ತಪ್ಪು ಮಾಡಿಲ್ಲ. ಆದರೂ ಹಣ ಕೊಟ್ಟು ಕಾರ್ಯಕ್ರಮಕ್ಕೆ ಕರೆಸುವುದು ತಪ್ಪು. ಸರ್ಕಾರ ಮಾಡಿರುವ ಆದೇಶವನ್ನು ಮಾರ್ಪಾಡು ಮಾಡಬೇಕೆಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next