Advertisement

ಆಸ್ಟ್ರೇಲಿಯದಲ್ಲಿ ವನಿತಾ ಅಂಪಾಯರ್‌ಗಳಿಗೆ ಮನ್ನಣೆ

06:50 AM Dec 24, 2018 | Team Udayavani |

ಸಿಡ್ನಿ: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ವನಿತಾ “ಬಿಗ್‌ ಬಾಶ್‌ ಲೀಗ್‌’ ಕೂಟ ಕ್ರಿಕೆಟಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಇದೇ ಮೊದಲ ಬಾರಿಗೆ ಕ್ರಿಕೆಟಿನಲ್ಲಿ ವನಿತಾ ಅಂಪಾಯರ್‌ಗಳ ತಂಡವೊಂದು ಕೂಟದಲ್ಲಿ ಕಾರ್ಯ ನಿರ್ವಹಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

Advertisement

ರವಿವಾರ ನಡೆದ ವನಿತಾ ಬಿಗ್‌ ಬಾಶ್‌ ಲೀಗ್‌ನ ಪಂದ್ಯದಲ್ಲಿ ಕ್ಲೇರಿ ಪೊಲೊಸಾಕ್‌ ಹಾಗೂ ಎಲೋಯಿಸ್‌ ಶೆರಿಡನ್‌ ವನಿತಾ ಅಂಪಾಯರ್‌ಗಳಾಗಿದ್ದರು. ಕ್ರಿಕೆಟ್‌ ಆಸ್ಟ್ರೇಲಿಯದ  ಅಂಪಾಯರ್‌ ಸಮಿತಿಯ ಸದಸ್ಯರಾಗಿರುವ ಪೊಲೊಸಾಕ್‌ ಆಸ್ಟ್ರೇಲಿಯದಲ್ಲಿ ನಡೆದ ಪುರುಷರ ಸ್ಥಳೀಯ ಕ್ರಿಕೆಟಿನಲ್ಲಿ ಮೊದಲ ಬಾರಿ ಅಂಪಾಯರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ, ಐಸಿಸಿ ವನಿತಾ ವಿಶ್ವಟಿ20 ಟೂರ್ನಿಯ ಫೈನಲ್‌ನಲ್ಲಿಯೂ ಅಂಪಾಯರ್‌ ಆಗಿದ್ದರು. ಫೈನಲ್‌ನಲ್ಲಿ ವನಿತಾ ಅಂಪಾಯರ್‌ಗೆ ಅವಕಾಶ ನೀಡಿದ್ದು ಅದೇ ಮೊದಲಾಗಿತ್ತು. ಕ್ರಿಕೆಟಿಗೆ ವಿದಾಯ ಹೇಳಿದ ಅನಂತರ ಶೆರಿಡನ್‌ ಅಂಪಾಯರಿಂಗ್‌ಗೆ ಇಳಿದಿದ್ದರು.

“ಕ್ಲೇಹಾಗೂ ಎಲೋಯಿಸ್‌ ಆಸ್ಟ್ರೇಲಿಯದ ಪ್ರಮುಖ ವನಿತಾ ಅಂಪಾಯರ್‌ಗಳಾಗಿದ್ದು, ಅವರ ಕಠಿನ ಪರಿಶ್ರಮವನ್ನು ನೋಡಿ ತುಂಬ ಖುಷಿಯಾಗಿದೆ. ಕ್ರಿಕೆಟಿನಲ್ಲಿ ಇದು ಮತ್ತೂಂದು ಪ್ರಮುಖ ಹೆಜ್ಜೆಯಾಗಿದ್ದು, ಆಸ್ಟ್ರೇಲಿಯದ ಬಾಲಕಿಯರಿಗೆ ಹಾಗೂ ವನಿತೆಯರಿಗೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳುವಂತೆ ಉತ್ತೇಜಿಸಲು ಇದು ನೆರವಾಗಲಿದೆ’ ಎಂದು ಕ್ರಿಕೆಟ್‌ ಆಸ್ಟ್ರೇಲಿದಯ ಸಿಇಒ ಕೆವಿನ್‌ ರಾಬರ್ಟ್ಸ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next