Advertisement
ಭಾರತ 2014ರಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೈಸೂರಿನಲ್ಲಿ ತನ್ನ ಕೊನೆಯ ಟೆಸ್ಟ್ ಆಡಿತ್ತು. ಅಂದು ಕೂಡ ಮಿಥಾಲಿ ಅವರೇ ಭಾರತದ ನಾಯಕಿ ಆಗಿದ್ದರು. ಜತೆಗೆ ಮಿಥಾಲಿ ಸೇರಿದಂತೆ ಅಂದಿನ ಇನ್ನಿಂಗ್ಸ್ ಗೆಲುವಿಗೆ ಸಾಕ್ಷಿಯಾದ 7 ಆಟಗಾರ್ತಿಯರು ಈಗಿನ ತಂಡದಲ್ಲಿರುವುದೊಂದು ವಿಶೇಷ. ಹೀಗಾಗಿ ಇಂಗ್ಲೆಂಡಿಗೆ ಹೋಲಿಸಿದರೆ ಭಾರತ ಹೆಚ್ಚು ಅನುಭವಿ ಎನ್ನಲಡ್ಡಿಯಿಲ್ಲ. 7 ವರ್ಷಗಳಿಂದ ಟೆಸ್ಟ್ ಆಡಿಲ್ಲ ಎಂಬುದಷ್ಟೇ ಒಂದು ಕೊರತೆ.
ಉಪನಾಯಕಿ ಹರ್ಮನ್‌ಪ್ರೀತ್ ಕೌರ್, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ, ವೇಗಿ ಜೂಲನ್ ಗೋಸ್ವಾಮಿ ಮೊದಲಾದ ಅನು
ಭವಿಗಳಿಂದ ಭಾರತ ತಂಡ ಸದೃಢವಾಗಿದೆ. ಆದರೆ ಯುವ ಆಟಗಾರ್ತಿಯರಿಗೆ ಈ ಪಂದ್ಯ ದೊಡ್ಡ ಸವಾಲಾಗಬಹುದು. ಇವರೆಲ್ಲ ಸೀಮಿತ ಓವರ್‌ಗಳ ಪಂದ್ಯವನ್ನೇ ಆಡುತ್ತ ಬಂದವರಾದ್ದರಿಂದ ನಾಲ್ಕು ದಿನಗಳ ಮುಖಾಮುಖೀಗೆ ಹೊಂದಿಕೊಳ್ಳುವರೇ ಎಂಬ ಪ್ರಶ್ನೆಯೊಂದು ಸಹಜವಾಗಿಯೇ ಕಾಡುತ್ತಿದೆ. ಆದರೆ ಇವರೆಲ್ಲ ಪ್ರತಿಭಾವಂತರು ಹಾಗೂ ನಿರ್ಭೀತ ಆಟಗಾರ್ತಿಯರು ಎಂಬುದರಲ್ಲಿ ಎರಡು ಮಾತಿಲ್ಲ. “ಲೇಡಿ ಸೆಹವಾಗ್’ ಎಂದೇ ಗುರುತಿಸಲ್ಪಡುವ 17 ವರ್ಷದ ಶಫಾಲಿ ವರ್ಮ ಆಡುವ ಬಳಗದಲ್ಲಿ ಸ್ಥಾನ ಪಡೆಯುವರೇ ಎಂಬು ದೊಂದು ಕುತೂಹಲ. ಅವರಿಗೆ ಸಚಿನ್ ಶುಭ ಹಾರೈಸಿದ್ದಾರೆ.
Related Articles
ಇಂಗ್ಲೆಂಡ್ ನೆಲದಲ್ಲಿ ಭಾರತೀಯರ ಟೆಸ್ಟ್ ದಾಖಲೆ ಅತ್ಯುತ್ತಮ ವಾಗಿದೆ ಎಂಬುದೊಂದು ಪ್ಲಸ್ ಪಾಯಿಂಟ್. ಇಲ್ಲಿ ಆಡಿದ ಕಳೆದೆರಡೂ ಟೆಸ್ಟ್‌ಗಳಲ್ಲಿ ಭಾರತ ಜಯ ಸಾಧಿಸಿರುವುದನ್ನು ಮರೆಯುವಂತಿಲ್ಲ.
Advertisement
ಇಂಗ್ಲೆಂಡ್ ನೆಚ್ಚಿನ ತಂಡವಾಗಿ ಗೋಚರಿಸಿದರೂ ಭಾರತದ ಅನುಭವಿ ಹಾಗೂ ಯುವ ಆಟಗಾರರ ಸಮ್ಮಿಶ್ರ ಪಡೆಯ ಬಗ್ಗೆ ಆತಿಥೇಯರಿಗೆ ಭೀತಿ ಇದ್ದೇ ಇದೆ. ಹೊಸಬರು ಹಾಗೂ ಪ್ರತಿಭಾನ್ವಿತರ ಪಡೆ ಯಾವತ್ತೂ ಹೆದರಿಕೆ ಇಲ್ಲದೆ ಆಡುತ್ತದೆ ಎಂಬುದಾಗಿ ಆತಿಥೇಯ ತಂಡದ ಉಪನಾಯಕಿ ನ್ಯಾಟ್ ಶಿವರ್ ಹೇಳಿರುವುದು ಭಾರತಕ್ಕೊಂದು ಸ್ಫೂರ್ತಿ!