Advertisement

ವನಿತಾ ಟಿ20 ವಿಶ್ವಕಪ್‌: ಕೌರ್‌ ನಾಯಕಿ; ರಿಚಾ ಘೋಷ್‌ ಹೊಸಮುಖ

10:02 AM Jan 14, 2020 | Team Udayavani |

ಮುಂಬಯಿ: ಫೆಬ್ರವರಿ 21ರಿಂದ ಆಸ್ಟ್ರೇಲಿಯ ಆತಿಥ್ಯದಲ್ಲಿ ಆರಂಭವಾಗಲಿರುವ ವನಿತಾ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ರವಿವಾರ ಭಾರತ ತಂಡವನ್ನು ಪ್ರಕಟಿಸಲಾಯಿತು. 15 ಸದಸ್ಯರ ಪಡೆಯನ್ನು ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸಲಿದ್ದಾರೆ. ಬಂಗಾಲದ ಬೀಸು ಹೊಡೆತಗಳ ಆಟಗಾರ್ತಿ ರಿಚಾ ಘೋಷ್‌ ಈ ತಂಡದ ಏಕೈಕ ಹೊಸಮುಖವಾಗಿದ್ದಾರೆ.

Advertisement

ತಂಡದಲ್ಲಿ ಕರ್ನಾಟಕದ ಇಬ್ಬರು ಕ್ರಿಕೆಟಿಗರಿದ್ದಾರೆ. ಇವರೆಂದರೆ, ಮಧ್ಯಮ ಕ್ರಮಾಂಕದ ಆಟಗಾರ್ತಿ, ಚಿಕ್ಕಮಗಳೂರಿನ ವೇದಾ ಕೃಷ್ಣಮೂರ್ತಿ ಮತ್ತು ವಿಜಯಪುರದ ಎಡಗೈ ಸ್ಪಿನ್ನರ್‌ ರಾಜೇಶ್ವರಿ ಗಾಯಕ್ವಾಡ್‌.

ವನಿತಾ ಕ್ರಿಕೆಟಿನ ನವತಾರೆ, ಹರ್ಯಾಣದ 15ರ ಹರೆಯದ ವಿದ್ಯಾರ್ಥಿನಿ ಶಫಾಲಿ ವರ್ಮ ಈ ತಂಡ ದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಅವರು ವಿಶ್ವ ಮಟ್ಟದ ಪಂದ್ಯಾವಳಿಯಲ್ಲಿ ಭಾರತವನ್ನು ಮೊದಲ ಸಲ ಪ್ರತಿನಿಧಿಸುತ್ತಿದ್ದಾರೆ.

ರಿಚಾ ಘೋಷ್‌ ಕಳೆದ ಚಾಲೆಂಜರ್‌ ಟ್ರೋಫಿ ಸರಣಿಯಲ್ಲಿ ಬಿರುಸಿನ ಬ್ಯಾಟಿಂಗ್‌ ಮೂಲಕ ಗಮನ ಸೆಳೆದಿದ್ದರು.

ತ್ರಿಕೋನ ಸರಣಿಗೆ ನುಜತ್‌
ಇದೇ ವೇಳೆ ಟಿ20 ವಿಶ್ವಕಪ್‌ಗ್ೂ ಮೊದಲು ನಡೆಯುವ ಟಿ20 ತ್ರಿಕೋನ ಸರಣಿಗೂ ಭಾರತ ತಂಡವನ್ನು ಪ್ರಕಟಿಸಲಾಯಿತು. ವಿಶ್ವಕಪ್‌ ತಂಡಕ್ಕೆ ಹೆಚ್ಚುವರಿಯಾಗಿ ನುಜತ್‌ ಪರ್ವೀನ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ವಿಕೆಟ್‌ ಕೀಪರ್‌ ಆಗಿರುವ ಅವರು ಮಧ್ಯಮ ಕ್ರಮಾಂಕದ ಬಲಗೈ ಆಟಗಾರ್ತಿಯಾಗಿದ್ದಾರೆ.

Advertisement

ತ್ರಿಕೋನ ಸರಣಿ ಜ. 31ರಿಂದ ಆರಂಭವಾಗಲಿದೆ. ಇದರಲ್ಲಿ ಪಾಲ್ಗೊಳ್ಳಲಿರುವ ತಂಡಗಳೆಂದರೆ ಭಾರತ, ಇಂಗ್ಲೆಂಡ್‌ ಮತ್ತು ಆತಿಥೇಯ ಆಸ್ಟ್ರೇಲಿಯ.

ಪ್ರತಿಭೆಗಳ ಮಹಾಪೂರ
“ಕಳೆದ ಒಂದು ವರ್ಷದಿಂದ ವನಿತಾ ಕ್ರಿಕೆಟ್‌ನಲ್ಲಿ ಪ್ರತಿಭೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಅವಧಿ ಯಲ್ಲಿ ಐದಾರು ಆಟಗಾರ್ತಿಯರು ಭಾರತವನ್ನು ಮೊದಲ ಸಲ ಪ್ರತಿನಿಧಿಸುವ ಅವಕಾಶ ಪಡೆದರು. ಈ ಬಾರಿ ರಿಚಾ ಘೋಷ್‌ ಅವರಿಗೆ ಬಾಗಿಲು ತೆರೆದಿದೆ’ ಎಂಬುದಾಗಿ ಆಯ್ಕೆ ಸಮಿತಿ ಅಧ್ಯಕ್ಷೆ ಹೇಮಲತಾ ಕಲಾ ಹೇಳಿದರು.

ವನಿತಾ ಟಿ20 ವಿಶ್ವಕಪ್‌ ತಂಡ
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಹಲೀìನ್‌ ದೇವಲ್‌, ದೀಪ್ತಿ ಶರ್ಮ, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್‌, ತಾನಿಯಾ ಭಾಟಿಯ, ಪೂನಂ ಯಾದವ್‌, ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ಅರುಂಧತಿ ರೆಡ್ಡಿ.

ತ್ರಿಕೋನ ಸರಣಿ ತಂಡ
ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಸ್ಮತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್‌, ಹಲೀìನ್‌ ದೇವಲ್‌, ದೀಪ್ತಿ ಶರ್ಮ, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್‌, ತಾನಿಯಾ ಭಾಟಿಯ, ಪೂನಂ ಯಾದವ್‌, ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌, ಅರುಂಧತಿ ರೆಡ್ಡಿ, ನುಜತ್‌ ಪರ್ವೀನ್‌.

Advertisement

Udayavani is now on Telegram. Click here to join our channel and stay updated with the latest news.

Next