Advertisement

ಐಸಿಸಿ ವನಿತಾ ಟಿ20 ವಿಶ್ವಕಪ್‌ ಇಲೆವೆನ್‌ :ಪೂನಂ ಭಾರತದ ಏಕೈಕ ಆಟಗಾರ್ತಿ

09:16 AM Mar 11, 2020 | sudhir |

ದುಬಾೖ: ಐಸಿಸಿ ಬಿಡುಗಡೆ ಮಾಡಿದ ವನಿತಾ ಟಿ20 ವಿಶ್ವಕಪ್‌ ಸಾಧಕಿಯರ ಇಲೆವೆನ್‌ನಲ್ಲಿ ರನ್ನರ್ ಅಪ್‌ ಭಾರತಕ್ಕೆ ಏಕೈಕ ಸ್ಥಾನ ಲಭಿಸಿದೆ. ಈ ಅವಕಾಶ ಲೆಗ್‌ಸ್ಪಿನ್ನರ್‌ ಪೂನಂ ಯಾದವ್‌ ಪಾಲಾಗಿದೆ. ಶಫಾಲಿ ವರ್ಮ 12ನೇ ಆಟಗಾರ್ತಿಯಾಗಿದ್ದಾರೆ.

Advertisement

ಹನ್ನೊಂದರ ಬಳಗದಲ್ಲಿ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಸಿಂಹಪಾಲು ಲಭಿಸಿದ್ದು, ಇಲ್ಲಿನ 5 ಆಟಗಾರ್ತಿಯರಿದ್ದಾರೆ. ನಾಯಕತ್ವ ಕೂಡ ಆಸ್ಟ್ರೇಲಿಯಕ್ಕೇ ಲಭಿಸಿದೆ. ಅಲಿಸ್ಸಾ ಹೀಲಿ, ಬೆತ್‌ ಮೂನಿ, ಮೆಗ್‌ ಲ್ಯಾನಿಂಗ್‌, ಜೆಸ್‌ ಜೊನಾಸೆನ್‌ ಮತ್ತು ಮೆಗಾನ್‌ ಶಟ್‌ ಈ ತಂಡದ ಆಸೀಸ್‌ ಆಟಗಾರ್ತಿ ಯರಾಗಿದ್ದಾರೆ. ಮೆಗ್‌ ಲ್ಯಾನಿಂಗ್‌ ಈ ತಂಡದ ನಾಯಕಿ.

ಆರಂಭಿಕರಾದ ಹೀಲಿ-ಮೂನಿ ವಿಶ್ವಕಪ್‌ ಕೂಟವೊಂದರ ಆರಂಭಿಕ ವಿಕೆಟಿಗೆ ಸರ್ವಾಧಿಕ 352 ರನ್‌ ಒಟ್ಟುಗೂಡಿಸಿ, 2018ರ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿದ್ದರು. 2020ರ ಕೂಟದಲ್ಲಿ ಅವರು 2 ಶತಕದ ಜತೆಯಾಟ ದಾಖಲಿಸಿದ್ದಾರೆ.

ಇಂಗ್ಲೆಂಡಿಗೆ 4 ಸ್ಥಾನ
4 ಲೀಗ್‌ ಪಂದ್ಯ ಗಳನ್ನಷ್ಟೇ ಆಡಿದ ಇಂಗ್ಲೆಂಡಿನ ನಾಲ್ವರಿಗೆ ಈ ತಂಡದಲ್ಲಿ ಸ್ಥಾನ ಲಭಿಸಿರುವುದು ವಿಶೇಷ. ಇವರೆಂದರೆ ನಥಾಲಿ ಶೀವರ್‌, ಹೀತರ್‌ ನೈಟ್‌, ಸೋಫಿ ಎಕ್‌Éಸ್ಟೋನ್‌, ಅನ್ಯಾ ಶ್ರಬೊÕàಲ್‌. ಇನ್ನೊಂದು ಸ್ಥಾನ ದ.ಆಫ್ರಿಕಾದ ಲಾರಾ ವೋಲ್ವಾರ್ಟ್‌ ಪಾಲಾಗಿದೆ. ಉಳಿದ ಯಾವುದೇ ದೇಶಗಳ ಆಟಗಾರ್ತಿಯರಿಗೆ ಇಲ್ಲಿ ಜಾಗ ಸಿಕ್ಕಿಲ್ಲ.

ಮಾಜಿ ಕ್ರಿಕೆಟಿಗರಾದ ಇಯಾನ್‌ ಬಿಷಪ್‌, ಅಂಜುಮ್‌ ಚೋಪ್ರಾ, ಲೀಸಾ ಸ್ಥಾಲೇಕರ್‌, ಪತ್ರಕರ್ತ ರಾಫ್ ನಿಕೋಲ್ಸನ್‌ ಮತ್ತು ಐಸಿಸಿ ಪ್ರತಿನಿಧಿ ಹೋಲಿ ಕೋಲ್ವಿನ್‌ ಅವರನ್ನೊಳಗೊಂಡ ಆಯ್ಕೆ ಸಮಿತಿ ಈ ತಂಡವನ್ನು ರಚಿಸಿದೆ.

Advertisement

ಐಸಿಸಿ ಟಿ20 ಇಲೆವೆನ್‌
1.ಅಲಿಸ್ಸಾ ಹೀಲಿ (ಆ, ವಿ.ಕೀ.): 236 ರನ್‌,
7 ಕ್ಯಾಚ್‌/ಸ್ಟಂಪಿಂಗ್‌
2. ಬೆತ್‌ ಮೂನಿ (ಆ): 259 ರನ್‌
3. ನಥಾಲಿ ಶೀವರ್‌ (ಇಂ): 202 ರನ್‌
4. ಹೀತರ್‌ ನೈಟ್‌ (ಇಂ): 193 ರನ್‌
5.ಮೆಗ್‌ ಲ್ಯಾನಿಂಗ್‌ (ಆ., ನಾಯಕಿ): 132 ರನ್‌
6. ಲಾರಾ ವೋಲ್ವಾರ್ಟ್‌ (ದ.ಆ.): 94 ರನ್‌
7. ಜೆಸ್‌ ಜೊನಾಸೆನ್‌ (ಆ): 10 ವಿಕೆಟ್‌
8. ಸೋಫಿ ಎಕ್‌Éಸ್ಟೋನ್‌ (ಇಂ): 8 ವಿಕೆಟ್‌
9. ಅನ್ಯಾ ಶ್ರಬೊÕàಲ್‌ (ಇಂ): 8 ವಿಕೆಟ್‌
10. ಮೆಗಾನ್‌ ಶಟ್‌ (ಆ): 13 ವಿಕೆಟ್‌
11. ಪೂನಂ ಯಾದವ್‌ (ಭಾ): 10 ವಿಕೆಟ್‌
12. ಶಫಾಲಿ ವರ್ಮ (ಭಾ): 163 ರನ್‌

Advertisement

Udayavani is now on Telegram. Click here to join our channel and stay updated with the latest news.

Next