Advertisement
ಕೂಟದಲ್ಲಿ 10 ತಂಡಗಳು ಪಾಲ್ಗೊಳ್ಳಲಿವೆ. ಇವನ್ನು ತಲಾ 5 ತಂಡಗಳ 2 ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಲೀಗ್‌ನಲ್ಲಿ ಒಂದು ಸುತ್ತಿನ ಸ್ಪರ್ಧೆ ಏರ್ಪಡಲಿದೆ. ಗುಂಪಿನ ಮೊದಲೆರಡು ಸ್ಥಾನ ಪಡೆದ ತಂಡಗಳು ಸೆಮಿ ಪ್ರವೇಶಿಸಲಿವೆ.
“ಎ’ ವಿಭಾಗ ಹೆಚ್ಚು ಬಲಿಷ್ಠವಾಗಿ ಗೋಚರಿ ಸುತ್ತಿದ್ದು, ಇದನ್ನು “ಗ್ರೂಪ್ ಆಫ್ ಡೆತ್’ ಎಂದೇ ಗುರುತಿಸಲಾಗುತ್ತಿದೆ. ಹಾಲಿ ಚಾಂಪಿಯನ್ ಹಾಗೂ ಅತೀ ಹೆಚ್ಚು 4 ಸಲ ಕಪ್ ಎತ್ತಿರುವ ಆಸ್ಟ್ರೇಲಿಯ, ಅಪಾಯಕಾರಿ ನ್ಯೂಜಿಲ್ಯಾಂಡ್, ಏರುಪೇರಿನ ಫಲಿತಾಂಶಕ್ಕೆ ಹೆಸರುವಾಸಿಯಾಗಿರುವ ಶ್ರೀಲಂಕಾ ಜತೆಗೆ ಬಾಂಗ್ಲಾದೇಶ ತಂಡವನ್ನು ಭಾರತ ಎದುರಿಸಬೇಕಿದೆ. ಭಾರತದ ವನಿತೆಯರು ಈವರೆಗೆ ವಿಶ್ವಕಪ್ ಎತ್ತಿಲ್ಲ. ಅಷ್ಟೇ ಅಲ್ಲ, ಫೈನಲ್ ಕೂಡ ಪ್ರವೇಶಿಸಿಲ್ಲ. ಈವರೆಗೆ 3 ಸಲ ಸೆಮಿಫೈನಲ್ ತಲುಪಿದ್ದೇ ಅತ್ಯುತ್ತಮ ಸಾಧನೆ (2009, 2010 ಮತ್ತು 2018). ವಿಶ್ವಕಪ್‌ನಲ್ಲಿ ಆಡಿದ 26 ಪಂದ್ಯಗಳಲ್ಲಿ ಸೋಲು ಗೆಲುವಿನ ಸಮಬಲದ ಸಾಧನೆ ದಾಖಲಿಸಿದೆ (13 ಜಯ, 13 ಸೋಲು). ಈ ಸಲವಾದರೂ ಭಾರತದ ಟ್ರೋಫಿಯ ಕನಸು ನನಸಾದೀತೇ ಎಂಬುದು ಎಲ್ಲರ ಕುತೂಹಲ ಹಾಗೂ ನಿರೀಕ್ಷೆ.
Related Articles
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಈ ಕೂಟದ ಫೇವರಿಟ್ ತಂಡವಂತೂ ಅಲ್ಲ. ಆದರೆ ಸೆಮಿಫೈನಲ್ ಸಾಮರ್ಥ್ಯದ ಬಲಿಷ್ಠ ಪಡೆಯನ್ನು ಹೊಂದಿದೆ. ಸ್ಮತಿ ಮಂಧನಾ, ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೋಡ್ರಿಗಸ್, ಯುವ ಆಟಗಾರ್ತಿ ಶಫಾಲಿ ವರ್ಮ ಭಾರತದ ಬ್ಯಾಟಿಂಗ್ ವಿಭಾಗದ ಆಧಾರಸ್ತಂಭವಾಗಿದ್ದಾರೆ. ಆದರೆ ವೇದಾ ಕೃಷ್ಣಮೂರ್ತಿ, ಕೀಪರ್ ತನಿಯಾ ಭಾಟಿಯ ರನ್ ಬರಗಾಲದಿಂದ ಹೊರ ಬರಬೇಕಿದೆ.
ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳೇ ತುಂಬಿಕೊಂಡಿದ್ದಾರೆ.
Advertisement
ಇವರೆಂದರೆ ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ರಾಧಾ ಯಾದವ್ ಮತ್ತು ದೀಪ್ತಿ ಶರ್ಮ. ಶಿಖಾ ಪಾಂಡೆ ವೇಗದ ಅಸ್ತ್ರ. ಎಲ್ಲರೂ ಸ್ಥಿರ ಪ್ರದರ್ಶನ ನೀಡುವುದು ಅಗತ್ಯ.
ಮೊದಲ ಸವಾಲೇ ಕಠಿನಭಾರತಕ್ಕೆ ಮೊದಲ ಸವಾಲೇ ಕಠಿನವಾಗಿ ಗೋಚರಿಸಿದೆ. ಚಾಂಪಿಯನ್ನರ ಆಟವನ್ನಾಡುವ ಆಸ್ಟ್ರೇಲಿಯವನ್ನು ಅವರದೇ ಅಂಗಳದಲ್ಲಿ ಎದುರಿಸುವುದು ಸುಲಭವಲ್ಲ. ಕಳೆದ ತ್ರಿಕೋನ ಸರಣಿಯಲ್ಲಿ ಭಾರತ ಒಮ್ಮೆ ಆಸೀಸ್‌ಗೆ ಸೋಲಿನೇಟು ನೀಡಿತಾದರೂ ಫೈನಲ್‌ನಲ್ಲಿ ಎಡವಿತು. ಅಲ್ಲದೇ ವಿಶ್ವಕಪ್‌ಎನ್ನುವುದು “ಡಿಫರೆಂಟ್ ಬಾಲ್ ಗೇಮ್’. ಮೊದಲ ಮುಖಾಮುಖೀಯೇ “ಎ’ ವಿಭಾಗದ ಚಿತ್ರಣವನ್ನು ಬಿಡಿಸಿಡುತ್ತದೆ. ಭಾರತ ಗೆದ್ದರೆ ದೊಡ್ಡ ಬೇಟೆಯೊಂದನ್ನು ನಡೆಸಿದಂತಾಗುತ್ತದೆ. ಬಳಿಕ ನ್ಯೂಜಿಲ್ಯಾಂಡ್, ಲಂಕಾ ಮತ್ತು ಬಾಂಗ್ಲಾವನ್ನು ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಎದುರಿಸಬಹುದು. ಸಂಭಾವ್ಯ ತಂಡ
ಭಾರತ:
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮ, ವೇದಾ ಕೃಷ್ಣಮೂರ್ತಿ, ರಿಚಾ ಘೋಷ್, ಹಲೀìನ್ ದೇವಲ್, ತನಿಯಾ ಭಾಟಿಯ, ಶಿಖಾ ಪಾಂಡೆ, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪೂನಂ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್.