Advertisement

ವನಿತಾ ಟಿ20 ತ್ರಿಕೋನ ಸರಣಿ : ಇಂಗ್ಲೆಂಡ್‌ ಔಟ್‌; ಭಾರತ-ಆಸ್ಟ್ರೇಲಿಯ ಫೈನಲ್‌

10:00 AM Feb 11, 2020 | sudhir |

ಮೆಲ್ಬರ್ನ್: ವನಿತಾ ಟಿ20 ತ್ರಿಕೋನ ಸರಣಿಯ ಫೈನ್‌ನಲ್ಲಿ ಆತಿಥೇಯ ಆಸ್ಟ್ರೇಲಿಯ ಮತ್ತು ಭಾರತ ಸೆಣಸಾಡಲಿವೆ. ಮತ್ತೂಂದು ತಂಡವಾದ ಇಂಗ್ಲೆಂಡ್‌ ಅಂತಿಮ ಲೀಗ್‌ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಶರಣಾಗಿ, ರನ್‌ರೇಟ್‌ ಹಿನ್ನಡೆಯಿಂದ ಕೂಟದಿಂದ ನಿರ್ಗಮಿಸಿತು.

Advertisement

ರವಿವಾರ ಇಲ್ಲಿನ “ಜಂಕ್ಷನ್‌ ಓವಲ್‌’ನಲ್ಲಿ ನಡೆದ ನಿರ್ಣಾಯಕ ಲೀಗ್‌ ಮೇಲಾಟದಲ್ಲಿ ಆಸ್ಟ್ರೇಲಿಯ 16 ರನ್ನುಗಳಿಂದ ಇಂಗ್ಲೆಂಡನ್ನು ಮಣಿಸಿತು. ಇದರೊಂದಿಗೆ ಎಲ್ಲ 3 ತಂಡಗಳು 4 ಅಂಕಗಳೊಂದಿಗೆ ಸಮಬಲ ಸಾಧಿಸಿದವು. ರನ್‌ರೇಟ್‌ ಲೆಕ್ಕಾಚಾರದಲ್ಲಿ ಮುಂದಿದ್ದ ಆಸ್ಟ್ರೇಲಿಯ ಮತ್ತು ಭಾರತ ಫೈನಲ್‌ಗೆ ನೆಗೆದವು. ಪ್ರಶಸ್ತಿ ಸಮರ ಬುಧವಾರ ಇದೇ ಅಂಗಳದಲ್ಲಿ ಏರ್ಪಡಲಿದೆ.

ಹಿಂದುಳಿದ ಇಂಗ್ಲೆಂಡ್‌
ಅಂತಿಮ ಲೀಗ್‌ ಪಂದ್ಯ ಆಸ್ಟ್ರೇಲಿಯ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಅದು ಗೆಲ್ಲಲೇಬೇಕಿತ್ತು. ಇಂಗ್ಲೆಂಡ್‌ ಸೋತರೂ ರನ್‌ರೇಟ್‌ ಉತ್ತಮಪಡಿಸಿಕೊಳ್ಳಬೇಕಿತ್ತು. ಈ ಪೈಪೋಟಿಯಲ್ಲಿ ಆಸೀಸ್‌ ಮೇಲುಗೈ ಸಾಧಿಸಿತು. ಇಂಗ್ಲೆಂಡ್‌ ಹಿಂದುಳಿಯಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ 7 ವಿಕೆಟಿಗೆ 132 ರನ್‌ ಗಳಿಸಿದರೆ, ಇಂಗ್ಲೆಂಡ್‌ 7 ವಿಕೆಟಿಗೆ 116 ರನ್‌ ಮಾಡಿ ಸೋಲೊಪ್ಪಿಕೊಂಡಿತು.

ಆಸ್ಟ್ರೇಲಿಯ ಪರ ಆರಂಭಿಕ ಆಟಗಾರ್ತಿ ಬೆತ್‌ ಮೂನಿ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. 40 ಎಸೆತ ಎದುರಿಸಿದ ಅವರು 6 ಬೌಂಡರಿ ನೆರವಿನಿಂದ ಭರ್ತಿ 50 ರನ್‌ ಹೊಡೆದರು. ಬಳಿಕ ಸೋಫಿ ಮೊಲಿನಾಕ್ಸ್‌, ಟಯಾÉ ಲೆಮಿಂಕ್‌, ಜೆಸ್‌ ಜೊನಾಸೆನ್‌ ಬಿಗಿಯಾದ ಬೌಲಿಂಗ್‌ ನಡೆಸಿ ಇಂಗ್ಲೆಂಡನ್ನು ಕಟ್ಟಿಹಾಕಿದರು. ಕ್ಯಾಥರಿನ್‌ ಬ್ರಂಟ್‌, ಲಾರೆನ್‌ ವಿಲ್‌ಫೀಲ್ಡ್‌ ತಲಾ 23 ರನ್‌ ಹೊಡೆದದ್ದೇ ಸರ್ವಾಧಿಕ ಗಳಿಕೆ ಎನಿಸಿತು.

Advertisement

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-7 ವಿಕೆಟಿಗೆ 132 (ಮೂನಿ 50, ಹೇನ್ಸ್‌ 24, ಗ್ಲೆನ್‌ 18ಕ್ಕೆ 2, ಎಕಲ್‌ಸ್ಟೋನ್‌ 19ಕ್ಕೆ 2). ಇಂಗ್ಲೆಂಡ್‌-7 ವಿಕೆಟಿಗೆ 116 (ಬ್ರಂಟ್‌ ಔಟಾಗದೆ 23, ವಿನ್‌ಫೀಲ್ಡ್‌ 23, ಮೊಲಿನಾಕ್ಸ್‌ 19ಕ್ಕೆ 3, ಲೆಮಿಂಕ್‌ 18ಕ್ಕೆ 2).
ಪಂದ್ಯಶ್ರೇಷ್ಠ: ಸೋಫಿ ಮೊಲಿನಾಕ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next