Advertisement

ಮೇ22ಕ್ಕೆ ಮಹಿಳೆಯರ ಟಿ20 ಪ್ರದರ್ಶನ ಪಂದ್ಯ

12:12 PM May 13, 2018 | Team Udayavani |

ನವದೆಹಲಿ: ಮಹಿಳೆಯರಿಗೂ ಐಪಿಎಲ್‌ ಮಾದರಿಯ ಟಿ20 ಕೂಟವನ್ನು ಆರಂಭಿಸಬೇಕೆಂಬುದು ಬಹಳ ದಿನಗಳ ಹಿಂದಿನಿಂದ ಇರುವ ಬೇಡಿಕೆ. ಈ ನಿಟ್ಟಿನಲ್ಲಿ ಬಿಸಿಸಿಐ, ಐಪಿಎಲ್‌ ಆಡಳಿತ ಮಂಡಳಿ ಇನ್ನೂ ಮುಂದಡಿ ಇರಿಸಿಲ್ಲ. ಆದರೆ ಈ ಬಾರಿ ಮಹಿಳೆಯರ ಪ್ರದರ್ಶನ ಪಂದ್ಯವೊಂದನ್ನು ಆಡಿಸಲು ಬಿಸಿಸಿಐ ಮುಂದಾಗಿದ್ದು, ಇದೊಂದು ಉತ್ತಮ ಬೆಳವಣಿಗೆ ಎನ್ನಲಡ್ಡಿಯಿಲ್ಲ.

Advertisement

ಮೇ 22ರ ಪ್ಲೇ-ಆಫ್ ಪಂದ್ಯಕ್ಕೂ ಮುನ್ನ ಮುಂಬೈ “ವಾಂಖೇಡೆ ಸ್ಟೇಡಿಯಂ’ನಲ್ಲಿ ಈ ಪ್ರದರ್ಶನ ಪಂದ್ಯವನ್ನು ಆಡಲಾಗುವುದು. ಅಪರಾಹ್ನ 2.30ಕ್ಕೆ ಪಂದ್ಯ ಆರಂಭವಾಗಲಿದೆ. ಪ್ರತಿಯೊಂದು ತಂಡದಲ್ಲಿ 4 ಮಂದಿ ವಿದೇಶಿ ಆಟಗಾರ್ತಿಯರಿಗೆ ಅವಕಾಶ ಕಲ್ಪಿಸಲಾಗಿದೆ. ಬಿಸಿಸಿಐ ಈಗಾಗಲೇ ಇಂಗ್ಲೆಂಡ್‌, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆμÅಕಾ ಕ್ರಿಕೆಟ್‌ ಮಂಡಳಿಗಳನ್ನು ಸಂಪರ್ಕಿಸಿದ್ದು, ಇದರಲ್ಲಿ ಆಡಲು ಬಯಸುವ ಆಟಗಾರ್ತಿಯರ ಹೆಸರು ಸೂಚಿಸುವಂತೆ ಕೇಳಿಕೊಂಡಿದೆ ಎನ್ನಲಾಗಿದೆ.

ಎರಡೂ ತಂಡಗಳಲ್ಲಿ ಒಟ್ಟು 20 ಮಂದಿ ಭಾರತೀಯ ಆಟಗಾರ್ತಿಯರು ಹಾಗೂ 10 ಮಂದಿ ವಿದೇಶಿ ಆಟಗಾರ್ತಿಯರಿತ್ತಾರೆ. ಭಾರತ ತಂಡವನ್ನು ರಾಷ್ಟ್ರೀಯ ಆಯ್ಕೆ ಸಮಿತಿಯೇ ಪ್ರಕಟಿಸುತ್ತದೆ. ಪಂದ್ಯ 2.30ಕ್ಕೆ
ಆರಂಭಾಗಲಿದ್ದು, ನೇರ ಪ್ರಸಾರ ಕಾಣಲಿದೆ ಎಂದು ಆಡಳಿತ ಸಮಿತಿಯ ಸದಸ್ಯೆ, ಭಾರತದ ಮಾಜಿ ಆಟಗಾರ್ತಿ ಡಯಾನಾ ಎಡುಲ್ಜಿ ಹೇಳಿದ್ದಾರೆ.

ಇದು ಮಹಿಳಾ ಐಪಿಎಲ್‌ಗೆ ಬುನಾದಿಯಾಗುವ ಸೂಚನೆ ಎಂದು ಅಭಿಪ್ರಾಯಪಡಲಾಗಿದೆ. ಸದ್ಯ ಆಸ್ಟ್ರೇಲಿಯಾದ ಬಿಗ್‌ ಬಾಶ್‌ ಲೀಗ್‌ನಲ್ಲಷ್ಟೇ ಮಹಿಳಾ ಟಿ20 ಪಂದ್ಯಗಳನ್ನು ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next