ಮಿರ್ಪುರ್: ಭಾರತೀಯ ವನಿತೆಯರ ಬ್ಯಾಟಿಂಗ್ ಸ್ಪಿನ್ ದಾಳಿಗೆ ಕುಸಿದ ಕಾರಣ ಬಾಂಗ್ಲಾದೇಶ ತಂಡವು ಗುರುವಾರ ನಡೆದ ವನಿತಾ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿ ಸಮಾಧಾನಪಟ್ಟುಕೊಂಡಿತು. ಈ ಪಂದ್ಯದಲ್ಲಿ ಸೋತರೂ ಭಾರತ 2-1 ಅಂತರದಿಂದ ಟಿ20 ಸರಣಿ ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಸ್ಪಿನ್ ದಾಳಿಗೆ ತತ್ತರಿಸಿಹೋ ಯಿತು. 11 ರನ್ ಅಂತರದಲ್ಲಿ ಆರು ವಿಕೆಟ್ ಕಳೆದುಕೊಂಡ ಭಾರತ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟಿಗೆ 102 ರನ್ ಗಳಿಸಲಷ್ಟೇ ಶಕ್ತವಾಯಿತು. ದ್ವಿತೀಯ ಪಂದ್ಯದಲ್ಲಿ 95 ರನ್ ಗಳಿಸಿಯೂ ಗೆದ್ದಿದ್ದ ಭಾರತ ಇಲ್ಲಿ ಮಾತ್ರ ಗೆಲ್ಲಲು ವಿಫಲವಾಯಿತು. ನಾಲ್ಕು ವಿಕೆಟಿಗೆ 91 ರನ್ ತಲುಪಿದ ವೇಳೆ 40 ರನ್ ಗಳಿಸಿದ ನಾಯಕಿ ಹರ್ಮನ್‌ಪ್ರೀತ್ ಕೌರ್ ಔಟಾದರು. ಆಬಳಿಕ 11 ರನ್ ಗಳಿಸುವಷ್ಟರಲ್ಲಿ ತಂಡ ಆಲೌಟಾಗಿ ಆಘಾತಕ್ಕೆ ಒಳಗಾಯಿತು.
ಅಲ್ಪ ಮೊತ್ತವಾದರೂ ತಾಳ್ಮೆಯಿಂದ ಆಡಿದ ಬಾಂಗ್ಲಾದೇಶ 18.1 ಓವರ್‌ಗಳಲ್ಲಿ ಆರು ವಿಕೆಟಿಗೆ 103 ರನ್ ಗಳಿಸಿ ಜಯಭೇರಿ ಬಾರಿಸಿತು. ಆರಂಭಿಕ ಆಟಗಾರ್ತಿ ಶಮಿಮಾ ಸುಲ್ತಾನಾ ಅವರ 42 ರನ್ ನೆರವಿನಿಂದ ತಂಡ ಸುಲಭ ಗೆಲುವು ಕಂಡಿತು.
ಭಾರತ ಮತ್ತು ಬಾಂಗ್ಲಾ ದೇಶ ಜು. 16ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಯಲ್ಲಿ ಆಡಲಿ ರುವುದರಿಂದ ಆಟಗಾರ್ತಿಯರು ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುವುದು ಅಗತ್ಯವಾಗಿದೆ.
ಸಂಕ್ಷಿಪ್ತ ಸ್ಕೋರು: ಭಾರತ 9 ವಿಕೆಟಿಗೆ 102 ಹರ್ಮನ್‌ಪ್ರೀತ್ 40, ರಯೆಬಾ ಖಾನ್ 16ಕ್ಕೆ 3); ಬಾಂಗ್ಲಾದೇಶ 18.1 ಓವರ್‌ಗಳಲ್ಲಿ 103 (ಶಮಿಮಾ ಸುಲ್ತಾನಾ 42).