Advertisement

ವನಿತಾ T20: ಸೂಪರ್‌ ನೋವಾಸ್- ಟ್ರಯಲ್‌ಬ್ಲೇಜರ್ ಮುಖಾಮುಖೀ

09:07 AM May 07, 2019 | Team Udayavani |

ಕಳೆದ ವರ್ಷ ವನಿತಾ ಪ್ರದರ್ಶನ ಟಿ20 ಕೂಟ ಆರಂಭಿಸಿದ ಬಿಸಿಸಿಐ ಈ ಬಾರಿ ಕೂಡ ವನಿತಾ ಪ್ರದರ್ಶನ ಪಂದ್ಯಗಳನ್ನು ಆಯೋಜಿಸಿದ್ದು, ಸೋಮವಾರ ಮೊದಲ ಪಂದ್ಯದಲ್ಲಿ ಸೂಪರ್‌ನೋವಾಸ್-ಟ್ರಯಲ್‌ಬ್ಲೇಜರ್ ತಂಡಗಳು ಮುಖಾಮುಖೀಯಾಗಲಿವೆೆ.

Advertisement

ಜೈಪುರದ ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೂಪರ್‌ ನೋವಾಸ್ ತಂಡವನ್ನು ಹರ್ಮನ್‌ಪ್ರೀತ್‌ ಕೌರ್‌ ಮುನ್ನಡೆಸಲಿದ್ದು, ಸ್ಮತಿ ಮಂಧಾನ ಟ್ರಯಲ್‌ಬ್ಲೇಜರ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.

ಸೂಪರ್‌ ನೋವಾಸ್ ತಂಡದ ಬ್ಯಾಟಿಂಗ್‌ ವಿಭಾಗದಲ್ಲಿ ಜೆಮಿಮ್‌ ರೋಡ್ರಿಗಸ್‌, ಕಿವೀಸ್‌ ಆಟಗಾರ್ತಿ ಸೋಫಿ ಡಿವೈನ್‌, ಚಮರಿ ಹಾಗೂ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಇದ್ದರೆ, ಬೌಲಿಂಗ್‌ನಲ್ಲಿ ಲೀ ತಹುಹು ಮತ್ತು ಪೂನಂ ಯಾದವ್‌ ಹಾಗೂ ಮಾನ್ಸಿ ಜೋಶಿ ತಂಡದ ಬಲವಾಗಿದ್ದಾರೆ. ಟ್ರಯಲ್‌ ಬ್ಲೇಜರ್ ತಂಡದಲ್ಲಿ ಸ್ಟಿಫಾನಿ ಟೇಲರ್‌, ದಯಾಲನ್‌ ಹೇಮಲತಾ, ಸೂಝಿ ಬ್ಯಾಟ್ಸ್‌ ಬ್ಯಾಟಿಂಗ್‌ ವಿಭಾಗದಲ್ಲಿದ್ದರೆ, ಜೂಲನ್‌ ಗೋಸ್ವಾಮಿ, ಭಾರತಿ ಫ‌ಲ್ಮಾನಿ, ದೀಪ್ತಿ ಶರ್ಮ, ಸೋಫಿ ಎಕ್ಲೆಸ್ಟೋನ್‌ ಬೌಲಿಂಗ್‌ ಆಕರ್ಷಣೆಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next