Advertisement
ಇಲ್ಲಿನ “ಸವಾಯ್ ಮಾನ್‌ಸಿಂಗ್ ಸ್ಟೇಡಿಯಂ’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಟ್ರೈಬ್ಲೇಜರ್ 6 ವಿಕೆಟಿಗೆ ಕೇವಲ 112 ರನ್ ಗಳಿಸಿತು. ಜವಾಬಿತ್ತ ವೆಲೋಸಿಟಿ ಕೊನೆಯ ಹಂತದಲ್ಲಿ ಕ್ಷಿಪ್ರ ಕುಸಿತವೊಂದನ್ನು ಕಂಡರೂ 18 ಓವರ್‌ಗಳಲ್ಲಿ 7 ವಿಕೆಟಿಗೆ 113 ರನ್ ಬಾರಿಸಿ ಗೆದ್ದು ಬಂದಿತು.
ಡೇನಿಯಲ್ ವ್ಯಾಟ್ 46 ರನ್ (35 ಎಸೆತ, 5 ಬೌಂಡರಿ, 2 ಸಿಕ್ಸರ್), ಶಫಾಲಿ ವರ್ಮ 34 ರನ್ ಬಾರಿಸಿ ವೆಲೋಸಿಟಿ ತಂಡಕ್ಕೆ ಆಧಾರವಾದರು. ನಾಯಕಿ ಮಿಥಾಲಿ ರಾಜ್ 17 ರನ್ ಮಾಡಿದರು. 17ನೇ ಓವರ್ ತನಕ ವೆಲೋಸಿಟಿ ದೊಡ್ಡ ಅಂತರದ ಜಯ ಸಾಧಿಸುವ ನಿರೀಕ್ಷೆ ದಟ್ಟವಾಗಿತ್ತು. ಆಗ 2 ವಿಕೆಟಿಗೆ 111 ರನ್ ಆಗಿತ್ತು. ಈ ಹಂತದಲ್ಲಿ ಕ್ಷಿಪ್ರ ಕುಸಿತವೊಂದು ಸಂಭವಿಸಿತು. ದೀಪ್ತಿ ಶರ್ಮ ಅವರ ಒಂದೇ ಓವರಿನಲ್ಲಿ 3 ವಿಕೆಟ್ ಬಿತ್ತು. ಇದರಿಂದ ಗೆಲುವೇನೂ ಕೈಜಾರಲಿಲ್ಲ. ಟ್ರೈಬ್ಲೇಜರ್ ವಿಕೆಟ್ ಬೇಟೆ ಬೇಗನೇ ಆರಂಭಗೊಂಡಿದ್ದರೆ ಪಂದ್ಯ ಇನ್ನಷ್ಟು ರೋಚಕಗೊಳ್ಳುತ್ತಿತ್ತು. ಈಗ ಮೂರೂ ತಂಡಗಳ ಹಾದಿ ಮುಕ್ತವಾಗಿದೆ.
Related Articles
ವೆಲೋಸಿಟಿ ಬ್ಯಾಟಿಂಗಿಗೆ ಎಡಗೈ ಸ್ಪಿನ್ನರ್ ಏಕ್ತಾ ಬಿಷ್ಟ್ (13ಕ್ಕೆ 2), ನ್ಯೂಜಿಲ್ಯಾಂಡಿನ ಅಮೇಲಿಯಾ ಕೆರ್ (21ಕ್ಕೆ 2) ಸೇರಿಕೊಂಡು ಕಡಿವಾಣ ಹಾಕಿದರು. ಹಲೀìನ್ ದೇವಲ್ 43 ರನ್ (40 ಎಸೆತ, 5 ಬೌಂಡರಿ), ಸುಝೀ ಬೇಟ್ಸ್ 26 ರನ್ ಹೊಡೆದರು. ಮೊದಲ ಪಂದ್ಯದಲ್ಲಿ 90 ರನ್ ಬಾರಿಸಿದ್ದ ಸ್ಮತಿ ಮಂಧನಾ ಆಟ ಇಲ್ಲಿ ಹತ್ತೇ ರನ್ನಿಗೆ ಕೊನೆಗೊಂಡಿತು.
Advertisement
ಸಂಕ್ಷಿಪ್ತ ಸ್ಕೋರ್: ಟ್ರೈಬ್ಲೇಜರ್-6 ವಿಕೆಟಿಗೆ 112 (ಹಲೀìನ್ 43, ಬೇಟ್ಸ್ 26, ದೀಪ್ತಿ 16, ಮಂಧನಾ 10, ಏಕ್ತಾ 13ಕ್ಕೆ 2, ಕೆರ್ 21ಕ್ಕೆ 2). ವೆಲೋಸಿಟಿ-18 ಓವರ್‌ಗಳಲ್ಲಿ 7 ವಿಕೆಟಿಗೆ 113 (ವ್ಯಾಟ್ 46, ಶಫಾಲಿ 34, ಮಿಥಾಲಿ 17, ದೀಪ್ತಿ 14ಕ್ಕೆ 4, ಹಲೀìನ್ 19ಕ್ಕೆ 1).