Advertisement

ಮಹಿಳೆಯರ ಸ್ಯಾನಿಟರಿ ನ್ಯಾಪ್‌ಕಿನ್‌ ತೆರಿಗೆ ಮುಕ್ತಗೊಳಿಸುವಂತೆ ಮನವಿ

02:20 AM Jul 15, 2017 | Team Udayavani |

ಮಲ್ಪೆ: ಮಹಿಳೆಯರಿಗೆ ಮೂಲಭೂತವಾಗಿ ಅವಶ್ಯಕವಾಗಿರುವ ಸ್ಯಾನಿಟರಿ ನ್ಯಾಪ್‌ಕಿನ್‌ನ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆಯನ್ನು ಮುಕ್ತಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ.

Advertisement

ಮಹಿಳೆಯರು ತಮ್ಮ ಋತುಸ್ರಾವದ ಸಮಯದಲ್ಲಿ ಉಪಯೋಗಿಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಇತೀ¤ಚೆಗೆ ನೂತನವಾಗಿ ಜಾರಿಗೆ ತಂದ ತೆರಿಗೆ ಪದ್ಧತಿ ಜಿ.ಎಸ್‌.ಟಿ ಯೋಜನೆಯಡಿ ಶೇ.12 ರಷ್ಟು ತೆರಿಗೆ ವಿಧಿಸಿರುವುದು ಖಂಡನೀಯ ಹಾಗೂ ಆಕ್ಷೇಪಾರ್ಹ. ಇದನ್ನು ಕೇವಲ ಒಂದು ಪ್ರಾಡಕ್ಟ್ ಆಗಿ ಗಮನಕ್ಕೆ ತೆಗೆದುಕೊಳ್ಳುವುದಕ್ಕಿಂತ ಹೆಣ್ಮಕ್ಕಳ ಅನಿವಾರ್ಯತೆ ಎಂದು ಅರಿಯಬೇಕಾಗಿತ್ತು.

ಜಿ.ಎಸ್‌.ಟಿ. ಜಾರಿಯಾಗುವ ಮುನ್ನವೇ ಹಲವು ಮಹಿಳಾ ಪರ ಸಂಘಟನೆಗಳು ತಮಗೆ ಹಾಗೂ ಅರ್ಥ ಸಚಿವರಿಗೆ ಈ ಬಗ್ಗೆ ಮನವಿ ಮಾಡಲಾಗಿತ್ತು.  ಋತುಸ್ರಾವದ ಸಮಯದಲ್ಲಿ ಯೌವನಾವಸ್ಥೆಯ ವಿದ್ಯಾರ್ಥಿನಿಯರ, ಯುವತಿಯರ, ಮನೋಭಾವನೆಯನ್ನು ತಾವು ಅರ್ಥ ಮಾಡಿಕೊಳ್ಳಬೇಕು. ಪ್ರಾಕೃತಿಕ ಪ್ರಕ್ರಿಯೆಗೆ ವಿಧಿಸಿರುವ ತೆರಿಗೆ ಮಹಿಳಾ ವಿರೋಧಿ ನೀತಿಯಾಗಿದೆ.

ಬಳೆಗಳು, ಬಿಂದಿ, ಗರ್ಭನಿರೋಧಕ ಮಾತ್ರೆಗಳು, ಕಾಂಡಮ್‌ಗಳು ಇವೆಲ್ಲದರ ಮೇಲೆ ಶೇ.0 ಜಿ.ಎಸ್‌ಟಿ. ವಿಧಿಸಿದ್ದು, ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಅತೀ ಅವಶ್ಯಕ ವಸ್ತುವಿನಡಿಯಲ್ಲಿ ಯಾಕೆ ಸೇರಿಸಿಲ್ಲ ಎಂಬುದೇ ಪ್ರಶ್ನಾತೀತವಾಗಿದೆ. ಈಗಲಾದರೂ ಇದರ ಗಂಭೀರತೆಯನ್ನು ಮತ್ತು ಅವಶ್ಯಕತೆಯನ್ನು ಅರಿತು, ಇದನ್ನು ತೆರಿಗೆ ಮುಕ್ತಗೊಳಿಸಿ ದೇಶದ 50% ಜನಸಂಖ್ಯೆಯಾದ ಮಹಿಳೆಯರ ಮಾನಸಿಕ ಭಾವನೆಗಳಿಗೆ ಸ್ಪಂದನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ವೆರೋನಿಕಾ ಕೆರ್ನೇಲಿಯೋ, ಸರಳ ಕಾಂಚನ್‌, ಡಾ. ಸುನೀತ ಶೆಟ್ಟಿ, ರೋಶ್ನಿ ಒಲಿವರ್‌, ಜೋÂತಿ ಹೆಬ್ಟಾರ್‌, ಚಂದ್ರಿಕಾ ಶೆಟ್ಟಿ, ರಮಾದೇವಿ, ಪ್ರಮೀಳಾ ಜತ್ತನ್ನ, ಮೇರಿ ಡಿಸೋಜಾ, ಸಾಮಂತ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next