Advertisement

Women’s Quota Bill: ಲೋಕಸಭೆಯಲ್ಲಿ “ನಾರಿ ಶಕ್ತಿ ವಂದನ್‌ ಅಧಿನಿಯಮ’ ಮಸೂದೆ ಅಂಗೀಕಾರ

08:40 AM Sep 21, 2023 | Team Udayavani |

ಹೊಸದಿಲ್ಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಒದಗಿಸುವ ಐತಿಹಾಸಿಕ ಮಸೂದೆಯು ಬುಧವಾರ ಲೋಕಸಭೆಯಲ್ಲಿ ಅಂಗಿಕಾರ ಗೊಂಡಿದೆ. ಈ ಮೂಲಕ 27 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ “ಮಹಿಳಾ ಮೀಸಲಾತಿ’ಯ ಕನಸು ಕೊನೆಗೂ ಸಾಕಾರಗೊಳ್ಳುವತ್ತ ಸಾಗಿದೆ.

Advertisement

ಮಸೂದೆ ಅಂಗೀಕಾರಕ್ಕೆ ನೂತನ ಸಂಸತ್‌ ಭವನ ಸಾಕ್ಷಿಯಾಗಿದ್ದಲ್ಲದೆ, ಪಕ್ಷ ಭೇದ ಮರೆತು ಸಂಸದರೆಲ್ಲರೂ ಒಗ್ಗಟ್ಟಾಗಿ ಮಹಿಳಾ ಸಬಲೀಕರಣಕ್ಕೆ ಜೈಕಾರ ಹಾಕಿ ದರು. ಲೋಕ ಸಭೆಯ ಅಂಕಿತ ಪಡೆದ “ನಾರಿ ಶಕ್ತಿ ವಂದನ್‌ ಅಧಿನಿಯಮ’ ಮಸೂದೆಯು ಗುರುವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.

ಲೋಕಸಭೆ ಹಾಗೂ ರಾಜ್ಯ ವಿಧಾನ ಸಭೆಗಳಲ್ಲಿ ಸ್ತ್ರೀಯರಿಗೆ ಮೂರನೇ ಒಂದರಷ್ಟು ಮೀಸ ಲಾತಿ ಕಲ್ಪಿಸುವ ಮಸೂದೆ ಕುರಿತಾಗಿ ಬುಧ ವಾರ ಸತತ 7 ಗಂಟೆ ಚರ್ಚೆ ನಡೆದ ಬಳಿಕ ಧ್ವನಿಮತದ ಮೂಲಕ ಮಸೂದೆಗೆ ಅಂಗೀಕಾರ ಪಡೆಯಲಾಯಿತು. 27 ಮಂದಿ ಮಹಿಳಾ ಸಂಸದರು ಚರ್ಚೆಯಲ್ಲಿ ಪಾಲ್ಗೊಂಡರು. 454 ಸಂಸದರು ಮಹಿಳಾ ಮೀಸಲಾತಿ ಪರ ಹಾಗೂ ಎಐಎಂಐಎಂ ಪಕ್ಷದ ಅಸಾದುದ್ದೀನ್‌ ಒವೈಸಿ ಹಾಗೂ ಅದೇ ಪಕ್ಷದ ಇಮಿ¤ಯಾಜ್‌ ಜಲೀಲ್‌ ಮಸೂದೆ ವಿರುದ್ಧ ಮತ ಚಲಾಯಿಸಿದವರು. ಇತರ ಸದಸ್ಯರು ಗೈರಾಗಿದ್ದರು. “ಸವರ್ಣೀಯ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಿಸುವುದಷ್ಟೇ ಈ ಸರಕಾರದ ಉದ್ದೇಶ’ ಎಂದು ಆರೋಪಿಸಿದ ಈ ಇಬ್ಬರು ಸಂಸದರು, ಒಬಿಸಿ ಮತ್ತು ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಲು ಆಗ್ರಹಿಸಿದರು.

1996ರಲ್ಲಿ ಮೊತ್ತ ಮೊದಲ ಬಾರಿಗೆ ಮಂಡನೆಯಾಗಿದ್ದ ಈ ಮಸೂದೆ ಇದುವರೆಗೆ 6 ಬಾರಿ ಪರೀಕ್ಷೆ ಎದುರಿಸಿತ್ತು. 2008ರಲ್ಲಿ ಯುಪಿಎ ಸರ ಕಾರ ಸಿದ್ಧಪಡಿಸಿದ್ದ ಈ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರ ಗೊಂಡಿತ್ತು. ಆದರೆ ಒಬಿಸಿಗೂ ಮೀಸಲಾತಿ ಗಾಗಿ ಹಲವು ಪಕ್ಷಗಳು ಒತ್ತಾಯಿಸಿದ್ದ ಕಾರಣ ಲೋಕಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ.

ಬಿಸಿ ಬಿಸಿ ಚರ್ಚೆ
ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆ ಯಲ್ಲಿ ಸಂಸದರು ಸಕ್ರಿಯವಾಗಿ ಪಾಲ್ಗೊಂಡರು. ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರು, ಇತರ ಹಿಂದುಳಿದ ವರ್ಗಗಳ(ಒಬಿಸಿ) ಮಹಿಳೆಯ ರಿಗೂ ಮೀಸಲಾತಿಯನ್ನು ಒದಗಿ ಸುವ ನಿಬಂಧನೆಯನ್ನು ಸೇರಿಸಬೇಕು ಮತ್ತು ಮಸೂದೆಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ದರು. ಮಹಿಳೆಯರಿಗೆ ಮೀಸಲಾತಿ ಜಾರಿ ಮಾಡುವ ಮೊದಲು ಜನಗಣತಿ ಮತ್ತು ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆ ನಡೆಯ ಬೇಕು ಎಂಬ ಸರಕಾರದ ನಿರ್ಧಾರವನ್ನು ವಿಪಕ್ಷಗಳ ಹಲವು ನಾಯಕರು ವಿರೋಧಿಸಿ ದರು. ಮಹಿಳಾ ಮೀಸಲಾತಿ ಜಾರಿ ಪ್ರಕ್ರಿಯೆ ಇದರಿಂದಾಗಿಯೇ ವಿಳಂಬವಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

Advertisement

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾತನಾಡಿ, “ವಿಳಂಬ ಆಗುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಕೂಡಲೇ ಮುಂದಿನ ಸರಕಾರ ಗಣತಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ಆರಂಭಿಸಲಿದೆ’ ಎಂದು ಹೇಳಿದರು.

ಮಹಿಳಾ ಮಸೂದೆ ಅಂಗೀಕಾರವಾಗಿರುವುದಕ್ಕೆ ಸಂತಸವಾಗಿದೆ. ಬೆಂಬಲ ನೀಡಿದ ಎಲ್ಲ ಪಕ್ಷಗಳ ಸಂಸದರಿಗೂ ಧನ್ಯವಾದಗಳು.
– ನರೇಂದ್ರ ಮೋದಿ, ಪ್ರಧಾನಿ

ಇದು ನನ್ನ ಬದುಕಿನ ಅತ್ಯಂತ ಹೃದಯಸ್ಪರ್ಶಿ ಕ್ಷಣ. ಈ ಮಸೂದೆ ಅಂಗೀಕಾರಗೊಂಡರೆ ರಾಜೀವ್‌ ಗಾಂಧಿಯವರ ಕನಸು ಈಡೇರಿದಂತೆ. ಒಬಿಸಿ ಮಹಿಳೆ ಯರಿಗೂ ಮೀಸಲಾತಿ ಸಿಗು ವಂತಾಗಬೇಕು. ಕಾಂಗ್ರೆಸ್‌ ಈ ಮಸೂದೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.
– ಸೋನಿಯಾ ಗಾಂಧಿ, ಕಾಂಗ್ರೆಸ್‌ ನಾಯಕಿ

ಮಹಿಳಾ ಸುರಕ್ಷೆ, ಗೌರವ, ಸಮಾನ ಭಾಗೀದಾರಿಕೆಯು ಪ್ರಧಾನಿ ಮೋದಿ ನೇತೃತ್ವದ ಸರಕಾರದ ಸಂಕಲ್ಪವಾಗಿದೆ. ಮಹಿಳಾ ಮೀಸಲಾತಿ ಮಸೂದೆಯು ಹೊಸ ಯುಗಾರಂಭಕ್ಕೆ ನಾಂದಿ ಹಾಡಿದೆ.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಇದನ್ನೂ ಓದಿ: ‘Donald Trump: ಡೊನಾಲ್ಡ್ ಟ್ರಂಪ್ ನಿಧನ… ಟ್ರಂಪ್ ಮಗನ X ಖಾತೆ ಹ್ಯಾಕ್ ಮಾಡಿ ಟ್ವೀಟ್

Advertisement

Udayavani is now on Telegram. Click here to join our channel and stay updated with the latest news.

Next