Advertisement
ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಇರುವುದು ತುಂಗಾನದಿ ಹರಿಯುತ್ತಾಇದೆ ವಿಠಲನಗರ ತುಂಗಾ ನದಿಯ ದಡದಲ್ಲಿ ಇದ್ದರೂ ಕೂಡ ವಿಠಲನಗರದ ಜನತೆಗೆ ಕುಡಿಯಲು ನೀರಿಲ್ಲದೆ ಪರಿತಪ್ಪಿಸುವಂತಾಗಿದೆ ತುಂಗಾ ನದಿಯ ಪಾತ್ರದಲ್ಲಿ ಇರುವ ಜನರ ಕಷ್ಟ ಇದಾದರೆ ಇನ್ನೂ ಗ್ರಾಮ ಪಂಚಾಯಿತಿ ಯಿಂದ ದೂರ ದೂರ ಇರುವ ಊರಿನ ಜನರ ನೀರಿನ ಸಮಸ್ಯೆ ಹೇಳತೀರಾದಾಗಿದೆ. ಆದರೂ ಗ್ರಾಮ ಪಂಚಾಯತಿ ಇತ್ತ ಕಡೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದೆ ವಿಠಲನಗರ ಊರಿಗೆ ನೀರಿಲ್ಲದೆ ಎಂಟು ಹತ್ತು ದಿನಗಳಾದರೂ ಇತ್ತ ಗ್ರಾಮ ಪಂಚಾಯಿತಿ ನೀರಿನ ಸಮಿತಿಯ ಇದರ ಬಗ್ಗೆ ಗಮನ ವಹಿಸದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ. ಮೂಲಭೂತ ಸೌಕರ್ಯ ಕೊಡುತ್ತೇವೆ ಎಂದು ಚುನಾವಣೆಗೆ ನಿಲ್ಲುವಾಗ ಆಶ್ವಾಸನೆ ಕೊಡುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ಸಾರ್ವಜನಿಕರ ಬಗ್ಗೆ ಕಿಂಚಿತ್ತು ಯೋಚನೆ ಮಾಡುವುದಿಲ್ಲ ಎಂದು ವಿಠಲನಗರದ ಪ್ರತಿಭಟನಾ ನಿರತರಾದ ಮಹಿಳೆಯರಿಂದ ಮಾತು ಕೇಳಿ ಬರುತ್ತಿದೆ. ವಾರದಿಂದ ನೀರಿಲ್ಲದ ವಿಷಯ ತಿಳಿದು ಬಾನುವಾರ ಸಂಜೆ ಟ್ಯಾಂಕರ್ ಒಂದರಲ್ಲಿ ನೀರು ವಿಠಲನಗರ ಜನರಿಗೆ ಕೊಟ್ಟ ರಾದರು ಒಬ್ಬರಿಗೆ ಕೊಟ್ಟರೆ ಒಬ್ಬರಿಗೆ ಕೊಟ್ಟಿಲ್ಲ ಎಂದು ಮಹಿಳೆಯರು ದೂರಿದ್ದಾರೆ . ಇಂದು ಸಂಜೆಯ ಒಳಗೆ ನೀರು ಬರದೇ ಇದ್ದರೆ ಸಂಜೆಯ ವೇಳೆ ಮತ್ತೊಮ್ಮೆ ಪ್ರತಿಭಟನೆ ನಡೆಸುತ್ತೇವೆ. ಎಂದು ಗ್ರಾಮ ಪಂಚಾಯಿತಿ ಕಛೇರಿ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
Advertisement
ಊರಿಗೆ ನೀರಿಲ್ಲದೆ ಎಂಟು ದಿನವಾಯ್ತು: ಗ್ರಾಮಪಂಚಾಯಿತಿ ಎದುರು ಮಹಿಳೆಯರಿಂದ ಪ್ರತಿಭಟನೆ
03:59 PM Feb 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.