Advertisement

ಮಹಿಳಾ ಪ್ರಧಾನ ಕ್ಷಮಾ ಆರಂಭ

06:07 AM Mar 05, 2019 | Team Udayavani |

ಉದಯ ಟಿವಿಯಲ್ಲಿ “ಕ್ಷಮಾ’ ಎಂಬ ಹೊಸ ಧಾರಾವಾಹಿ ನಿನ್ನೆಯಿಂದ (ಮಾ.4) ಆರಂಭವಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ಮಧ್ಯಮ ವಯಸ್ಸಿನ ಹೆಣ್ಣೊಬ್ಬಳ ಹೋರಾಟ, ಪ್ರಾಮಾಣಿಕವಾಗಿ ಸಂಸಾರ ನಡೆಸುವ ಕಷ್ಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಭಸುವ ಪರಿಪಾಟಲುಗಳೇ “ಕ್ಷಮಾ’ ಕಥೆಯ ಜೀವಾಳ.

Advertisement

ಭಾರತೀಶ್‌ ನಿರ್ದೇಶನ ಮತ್ತು ಮೀಡಿಯಾ ಹೌಸ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಮುಖ್ಯಭೂಮಿಕೆಯಲ್ಲಿ ಕ್ಷಮಾ ಪಾತ್ರಧಾರಿಯಾಗಿ ಶ್ವೇತಾರಾವ್‌ ನಟಿಸುತ್ತಿದ್ದಾರೆ. ಇತರ ತಾರಾಗಣದಲ್ಲಿ ವಿಶ್ವಾಸ್‌ ಭಾರದ್ವಾಜ್‌, ಲತಾ, ವಿಕ್ಕಿ ಮತ್ತು ಮಾಲತಿ ಮೈಸೂರು ಇದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next