Advertisement

ಓಜಸ್‌ನಲ್ಲಿ ಸ್ತ್ರೀ ಶಕ್ತಿ

09:46 AM Feb 01, 2020 | mahesh |

ಮಹಿಳೆಯೊಬ್ಬಳು ಸುಶಿಕ್ಷಿತೆಯಾದರೆ, ಸಬಲೆಯಾದರೆ ಕೇವಲ ತನ್ನ ಮನೆಗೆ ಮಾತ್ರವಲ್ಲ ಇಡೀ ಸಮಾಜಕ್ಕೇ ಬೆಳಕಾಗುತ್ತಾಳೆ. ಈಗ ಇದೇ ವಿಷಯವನ್ನು ಇಟ್ಟುಕೊಂಡು ಇಲ್ಲೊಂದು ಚಿತ್ರತಂಡ, ಮಹಿಳೆಯೊಬ್ಬಳ ಸಾಧನೆಯ ಕಥೆಯನ್ನು ತೆರೆಮೇಲೆ ಹೇಳಲು ಹೊರಟಿದೆ. ಅಂದಹಾಗೆ, ಆ ಚಿತ್ರದ ಹೆಸರು “ಓಜಸ್‌’. “ಓಜಸ್‌’ ಎಂದರೆ ಶಬ್ಧಕೋಶದಲ್ಲಿ ಬೆಳಕು ಎಂಬ ಅರ್ಥವಿದೆ. ಒಬ್ಬ ಮಹಿಳೆಯು ಬೆಳೆದು ನಿಂತರೆ, ಮನೆ-ಮನಗಳ ಜೊತೆ ಸಮಾಜವನ್ನೇ ಬೆಳಗುತ್ತಾಳೆ. ಅದಕ್ಕಾಗಿ ಚಿತ್ರದ ಕಥೆ ಮತ್ತು ಆಶಯಕ್ಕೆ ತಕ್ಕಂತೆ ಇರುವುದರಿಂದ ಚಿತ್ರಕ್ಕೆ “ಓಜಸ್‌’ ಎಂದು ಹೆಸರಿಡಲಾಗಿದೆ ಎನ್ನುತ್ತದೆ ಚಿತ್ರತಂಡ.

Advertisement

ಸುಮಾರು ಎರಡು-ಮೂರು ವರ್ಷಗಳ ಹಿಂದೆಯೇ ಶುರುವಾದ ಈ ಚಿತ್ರ ಇದೀಗ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೇ ಫೆಬ್ರವರಿ 7ಕ್ಕೆ ತೆರೆಗೆ ಬರುತ್ತಿದೆ. “ರಜತ ರಘುನಾಥ ಪೊ›ಡಕ್ಷನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ರಜತ ರಘುನಾಥ, ಡಾ. ಎಡ್ವರ್ಡ್‌ ಡಿಸೋಜ ನಿರ್ಮಿಸಿ¨ªಾರೆ. ಚಿತ್ರಕ್ಕೆ ಸಿ.ಜೆ ವರ್ಧನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇಲ್ಲಿಯವರೆಗೆ ಗ್ಲಾಮರಸ್‌ ಮತ್ತು ಬೋಲ್ಡ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನೇಹಾ ಸಕ್ಸೇನಾ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟಿ ಭವ್ಯಾ, ಹಿರಿಯ ನಟರಾದ ಡಿಂಗ್ರಿ ನಾಗರಾಜ್‌, ಮೈಸೂರು ರಮಾನಂದ್‌, ಯತಿರಾಜ್‌, ಜಿ. ಮೂರ್ತಿ, ಹನುಮಂತ ರಾಜು, ದುಬೈ ರಫೀಕ್‌, ಶೋಭಾ, ಶಿವಾನಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆಗೂ ಮುನ್ನ “ಓಜಸ್‌’ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಕೆಲ ವಿಷಯಗಳ ಬಗ್ಗೆ ಮಾತನಾಡಿತು.

“ಇದೊಂದು ಮಹಿಳಾ ಪ್ರಧಾನ ಚಿತ್ರ. ಬಡ ಕುಟುಂಬದಲ್ಲಿ ಹುಡುಗಿಯೊಬ್ಬಳು ಅನೇಕ ಕಷ್ಟ-ಕಾರ್ಪಣ್ಯಗಳನ್ನು ಎದುರಿಸಿ ನಿಂತು ಕೊನೆಗೆ ಡಿ.ಸಿ ಆಗುತ್ತಾಳೆ. ಬಾಲ್ಯದಲ್ಲಿ ಒಂದು ಥರದ ಸವಾಲುಗಳನ್ನು ಎದುರಿಸಿ ಗೆದ್ದ ಹುಡುಗಿಗೆ ನಂತರ, ಭ್ರಷ್ಟಾಚಾರದಂಥ ಸವಾಲುಗಳು ಎದುರಾಗುತ್ತದೆ. ತನ್ನ ಹಾದಿಯಲ್ಲಿ ರಾವಣನ ಗುಣವನ್ನು ಹೊಂದಿರುವ ವ್ಯಕ್ತಿಗಳನ್ನು ಹೇಗೆ ರಾಮನ ಗುಣದ ವ್ಯಕ್ತಿಗಳನ್ನಾಗಿ ಬದಲು ಮಾಡುತ್ತಾಳೆ ಅನ್ನೋದೆ ಚಿತ್ರದ ಕಥೆ. ಇಡೀ ಚಿತ್ರದಲ್ಲಿ ಎಲ್ಲೂ ಫೈಟ್ಸ್‌ ಆಗಲಿ, ವೈಲೆಂಟ್‌ ಆಗಲಿ ಇಲ್ಲ’ ಎಂದು ಚಿತ್ರದ ಕಥಾಹಂದರ ಬಿಚ್ಚಿಟ್ಟಿತು ಚಿತ್ರತಂಡ.

“ಓಜಸ್‌’ ಚಿತ್ರಕ್ಕೆ ಪಿ.ವಿ.ಆರ್‌. ಸ್ವಾಮಿ ಛಾಯಾಗ್ರಹಣ, ಜೆ. ಗುರುಪ್ರಸಾದ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ತುಮಕೂರು, ಮದ್ದೂರು ಮೊದಲಾದ ಕಢೆಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ.

ಜಿ. ಎಸ್‌. ಕಾರ್ತಿಕ ಸುಧನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next