Advertisement

ಸರ್ವ ಕ್ಷೇತ್ರಗಳಲ್ಲಿ  ಮಹಿಳಾ ಸಾಧನೆ:ಪ್ರಮೋದ್‌ ಹರ್ಷ

10:39 AM Mar 09, 2018 | |

ಉಡುಪಿ: ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಸಾಧನೆಯನ್ನು ದಾಖಲಿಸುತ್ತಿರುವುದು ಶ್ಲಾಘನೀಯ. ಕಾನೂನಿನ ನೆರವೂ ಮಹಿಳೆಯರ ಪರವಾಗಿ ಇದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. 

Advertisement

ಅವರು ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟ ಹಾಗೂ ಸ್ತ್ರೀಶಕ್ತ ಒಕ್ಕೂಟ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಆಶೀರ್ವಚನ ನೀಡಿ ಮಹಿಳೆಯರಿಗೆ ಗೌರವ ದೊರಕುವ ಸಮಾಜದಲ್ಲಿ ಸುಭಿಕ್ಷೆ ನೆಲೆಸುತ್ತದೆ ಎಂದರು. 

ಮೀಸಲಾತಿಯಿಂದಾಗಿ ರಾಜಕೀಯದಲ್ಲೂ  ಮಹಿಳೆಯರುಪುರುಷರಿಗೆ ಸಮಾನವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ.  ಶೆಟ್ಟಿ ಹೇಳಿದರು.

ರಾಜಕೀಯ ಕ್ಷೇತ್ರದಲ್ಲಿ ಇಂದು ಮಹಿಳೆಯರಿಗೆ ಅವಕಾಶ ಗಳ ಬಾಗಿಲು ತೆರೆದಿದ್ದು ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ. 33ರಷ್ಟು ಮೀಸಲಾತಿ ನೀಡಲಾಗಿದೆ. ಮಹಿಳೆಯರಿಗೆ ಮೀಸಲಾಗಿರಿಸಿದ ಅವಕಾಶವನ್ನು  ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು. 

Advertisement

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾತನಾಡಿ, ಮಹಿಳೆಯರು ಹಕ್ಕುಗಳನ್ನು ಬಳಸಿಕೊಂಡು ತಮ್ಮ ಕರ್ತವ್ಯ ವನ್ನು ನಿರ್ವಹಿಸಿದರೆ ಸಶಕ್ತೀಕರಣ ಸಾಧ್ಯ ಎಂದರು.  

ಮತದಾನ ಜಾಗೃತಿ: ಜಿ.ಪಂ. ಸಿಇಒ ಶಿವಾನಂದ ಕಾಪಶಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಆಯೋಗದ ವೆಬ್‌ಸೈಟಿನಲ್ಲಿ ಅಥವಾ 9731979899 ಈ ನಂಬರಿಗೆ ತಮ್ಮ ಎಪಿಕ್‌ ನಂಬರ್‌ ಹಾಕಿ ಮೆಸೇಜ್‌ ಮಾಡಿ ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂದು ನೋಡಬಹುದು ಎಂದರು.

ಪ್ರೊ|  ನಿತ್ಯಾನಂದ, ಜ್ಯೋತಿ ಪಿ. ನಾಯಕ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು,  ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ಮಾತನಾಡಿದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಲತಾ, ವಸಂತಿ ರಾವ್‌, ಸರಳ ಕಾಂಚನ್‌, ರಾಧಾದಾಸ್‌, ಧನಲಕ್ಷ್ಮೀ, ಅಡಿಶನಲ್‌ ಎಸ್‌ಪಿ ಕುಮಾರ ಚಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಎಲ್‌. ಗೊನ್ಸಾಲ್ವಿಸ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next