Advertisement

ಡಿ.ಸಿ.ಗೌರಿಶಂಕರ್‌ ವಿರುದ್ಧ ಸ್ತ್ರೀಯರ ಆಕ್ರೋಶ

04:54 PM May 18, 2019 | Team Udayavani |

ತುಮಕೂರು: ಗ್ರಾಮಾಂತರ ಶಾಸಕರ ಬೆಂಬಲಿಗ ಹಾಗೂ ಜೆಡಿಎಸ್‌ ಕಾರ್ಯಕರ್ತ ಬಿಜೆಪಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಯಾಗಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿ ರುವುದನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರೆಯರು ಶುಕ್ರವಾರ ಶಾಸಕರ ವಿರುದ್ಧ ಹಾಗೂ ಡಿ.ಸಿ.ಗೌರಿಶಂಕರ್‌ ಅವರ ಸಾಮಾಜಿಕ ಜಾಲತಾಣದ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಗೂಳೂರು ಹೋಬಳಿ ಡಿ. ಕೊರಟಗೆರೆ ಗ್ರಾಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ರಸ್ತೆ ತಡೆ ಚಳವಳಿ ಮಾಡಿ, ಪೊರಕೆ ಹಿಡಿದು ಪ್ರತಿಭಟನೆಯ ನಡೆಸಿ ಗ್ರಾಮಾಂತರ ಶಾಸಕ ಹಾಗೂ ಅವರ ಬೆಂಬಲಿಗನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಆಯೋಗಕ್ಕೆ ದೂರು: ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಪಂ ಸದಸ್ಯೆ ಅನಿತಾ ಸಿದ್ದೇಗೌಡ ಮಾತನಾಡಿ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರೆಯನ್ನು ಗೋವಾಗೆ ಹನಿಮೂನಿಗೆ ಕರೆದುಕೊಂಡು ಹೋಗುವು ದಾಗಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿರು ವುದನ್ನು ಖಂಡಿಸಿದರು. ಶಾಸಕ ಡಿ.ಸಿ. ಗೌರಶಂಕರ್‌ ಮತ್ತು ಗೌರಿಶಂಕರ್‌ ಸೋಶಿ ಯಲ್ ಮೀಡಿ ಯಾದ ಮುಖ್ಯಸ್ಥನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡ ಲಾಗುವುದು ಎಂದು ಹೇಳಿದರು.

ಮೋಜಿಗಾಗಿ ಹಾಲಿ ಶಾಸಕರು ವಿದೇಶಿ ಪ್ರವಾಸ: ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಬರಗಾಲ ಇರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರು ಮೋಜು ಮಸ್ತಿಗಾಗಿ ವಿದೇಶಿ ಪ್ರವಾಸಕ್ಕಾಗಿ ಸಿಂಗಾಪುರಕ್ಕೆ ಹೋಗಿರುವ ಬಗ್ಗೆ ಸುರೇಶಗೌಡರ ಪ್ಯಾನ್‌ ಪೇಜಿನಲ್ಲಿ ನಮ್ಮ ಕಾರ್ಯಕರ್ತರು ಪೋಸ್ಟ್‌ ಮಾಡಿರುವುದು ತಪ್ಪೇನು? ಹಾಲಿ ಶಾಸಕರಿಗೆ ಬರಗಾಲ ಕಾಣದೆ ಮೋಜು ಮಸ್ತಿಗಾಗಿ ಸಿಂಗಾಪುರಕ್ಕೆ ಹೋಗಿರು ವುದು ಎಷ್ಟು? ಸರಿ ಇದನ್ನು ಕೇಳಿದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಈಗೆಲ್ಲ ಅವಹೇಳನಾ ಕಾರಿಯಾಗಿ ಮಾತನಾಡಿರುವುದು ಖಂಡ ನೀಯ. ಡಿ.ಸಿ. ಗೌರಿಶಂಕರ ಅವರು ಜೆಡಿಎಸ್‌ ಕಾರ್ಯಕರ್ತರಿಗೆ ಮತ್ತು ಅವರ ಬೆಂಬಲಿಗರಿಗೆ ಇದೇನಾ ಕಲಿಸಿರುವುದು. ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ? ಬಾಯಿಗೆ ಬಂದ ಹಾಗೆ ಮನಸ್ಸಿಗೆ ತೋಚಿದ ರೀತಿಯಲ್ಲಿ ಹಿಂದೂ ಹೆಣ್ಣು ಮಕ್ಕಳ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡುವ ರೀತಿ ನೀತಿ ಇದೆನಾ ಇದ್ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದರು.

ಕಿಡಿಗೇಡಿಗಳ‌ನ್ನು ಗಡಿಪಾರು ಮಾಡಲು ಆಗ್ರಹ: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲಾವತಿ ಮಾತನಾಡಿ, ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಅವಹೇಳನವಾಗಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಮಾಡಿರುವ ಕಿಡಿಗೇಡಿಗಳ‌ನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿದರು.

Advertisement

ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ: ಜಿಪಂ ಸದಸ್ಯ ವೈ,ಎಚ್.ಹುಚ್ಚಯ್ಯ ಮಾತನಾಡಿ, ಹಿಂದೂ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿರುವುದು ಅಲ್ಲದೆ, ಅವಮಾನ ಮಾಡಿದ್ದಾರೆ. ಶಾಸಕ ಡಿ.ಸಿ. ಗೌರಿಶಂಕರ ಮತ್ತು ಅವರ ಬೆಂಬಲಿಗರಿಂದ ಗ್ರಾಮಾಂತರ ಕ್ಷೇತ್ರದ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ. ನಮಗೆ ಸೂಕ್ತ ರಕ್ಷಣೆ ನೀಡಬೇಕು. ನಮ್ಮ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಏನಾದರೂ ಆದರೆ, ಶಾಸಕ ಡಿ.ಸಿ.ಗೌರಿಶಂಕರ ಮತ್ತು ಜೆಡಿಎಸ್‌ ಬೆಂಬಲಿಗರೇ ಕಾರಣರಾಗುತ್ತಾರೆ ಎಂದು ತಿಳಿಸಿದರು.

ನಾಗವಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಬಿಜೆಪಿ ಮುಖಂಡ ಸಾಸಲು ಮೂರ್ತಿ ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದೇಗೌಡ, ಜಿಪಂ ಸದಸ್ಯ ಶಿವಕುಮಾರ್‌, ತಾಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಹೊನ್ನುಡಿಕೆ ಮಾಜಿ ಅಧ್ಯಕ್ಷ ಶಿವರಾಜು, ಮಾಜಿ ಉಪಾಧ್ಯಕ್ಷ ಕಾಂತರಾಜು, ಹೊಳಕಲ್ಲು ಕಿರಣ ಅಂಜಿನಪ್ಪ, ಗಿರೀಶ ನರುಗನಹಳ್ಳಿ, ಕುಮಾರ್‌, ಗಂಗಮ್ಮ, ಶಿವಮ್ಮ, ಅಕ್ಕಮ್ಮ, ಲಕ್ಮಕ್ಕ, ದ್ರಾಕ್ಷಾಯಿಣಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next