Advertisement
ಮೊದಲ ಪಂದ್ಯವನ್ನು ಭಾರತ ಅಧಿಕಾರಯುತವಾಗಿಯೇ ಗೆದ್ದಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ತಾಕತ್ತಿನ ನಿಜದರ್ಶನವಾಗಿದೆ. 326 ರನ್ನುಗಳ ಬೃಹತ್ ಸವಾಲು ಮುಂದಿದ್ದರೂ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಹರಿಣಗಳ ಪಡೆ ಕೇವಲ 4 ರನ್ನಿನಿಂದ ಹಿಂದುಳಿದಿತ್ತು. ಹೀಗಾಗಿ 3ನೇ ಪಂದ್ಯ ತೀವ್ರ ಪೈಪೋಟಿ ಕಾಣುವ ಸಾಧ್ಯತೆ ಇದೆ. ಸರಣಿ ಹೇಗೂ ಗೆದ್ದಾಯಿತೆಂದು ನಮ್ಮವರು ಪಂದ್ಯವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಕೆಲವು ಪ್ರಯೋಗಗಳಿಗಾಗಿಯೂ ಇದನ್ನು ಬಳಸಿಕೊಳ್ಳಬೇಕಿದೆ.
Related Articles
ಈ ಎರಡೂ ಪಂದ್ಯಗಳಲ್ಲಿ ತವರಿನ ಬೌಲರ್ ಶ್ರೇಯಾಂಕಾ ಪಾಟೀಲ್ ಆಡಿರಲಿಲ್ಲ. ರವಿವಾರ ಇವರಿಗೆ ಅವಕಾಶ ಸಿಗುವ ಎಲ್ಲ ಸಾಧ್ಯತೆ ಇದೆ. ಹಾಗೆಯೇ ಎಡಗೈ ಬ್ಯಾಟರ್ ಸೈಕಾ ಇಶಾಖ್, ಅಗ್ರ ಕ್ರಮಾಂಕದ ಆಟಗಾರ್ತಿ ಪ್ರಿಯಾ ಪೂನಿಯ ಕೂಡ ಆಡಿಲ್ಲ. ಇವರೂ ಆಡುವ ಬಳಗದಲ್ಲಿ ಕಾಣಿಸಿ ಕೊಳ್ಳಬಹುದು. ಕಳೆದ 8 ಪಂದ್ಯಗಳಲ್ಲಿ ತೀವ್ರ ರನ್ ಬರಗಾಲ ಎದುರಿಸುತ್ತಿರುವ ಶಫಾಲಿ ವರ್ಮ ಅವರಿಗೆ ವಿಶ್ರಾಂತಿ ನೀಡಿದರೂ ಅಚ್ಚರಿ ಇಲ್ಲ.
Advertisement