Advertisement

ವನಿತೆಯರ ಏಕದಿನ ರ್‍ಯಾಂಕಿಂಗ್‌: 7ನೇ ಸ್ಥಾನದಲ್ಲಿ ಮಿಥಾಲಿ ರಾಜ್‌

11:05 PM Jun 07, 2022 | Team Udayavani |

ದುಬಾೖ: ಮಂಗಳವಾರ ಬಿಡುಗಡೆಗೊಂಡ ನೂತನ ಐಸಿಸಿ ವನಿತೆಯರ ಏಕದಿನ ರ್‍ಯಾಂಕಿಂಗ್‌ನಲ್ಲಿ ಭಾರತದ ಆಟಗಾರ್ತಿ ಮಿಥಾಲಿ ರಾಜ್‌ ತನ್ನ ಏಳನೇ ಸ್ಥಾನವನ್ನು ಉಳಿಸಿಕೊಂಡಿದ್ದರೆ ಸ್ಮತಿ ಮಂಧಾನ 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Advertisement

ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಆಸ್ಟ್ರೇಲಿಯದ ಅಲಿಸ್ಸಾ ಹೀಲಿ ಅಗ್ರಸ್ಥಾನದಲ್ಲಿದ್ದರೆ ಇಂಗ್ಲೆಂಡಿನ ನಟಾಲಿಯೆ ಸಿವೆರ್‌ ದ್ವಿತೀಯ ಸ್ಥಾನದಲ್ಲಿದ್ದಾರೆ. ಅವರಿಬ್ಬರು ಈ ವರ್ಷವೇ ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆದ ವನಿತೆಯರ ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು.

ಬೌಲಿಂಗ್‌ ಪಟ್ಟಿಯಲ್ಲಿ ಭಾರತದ ಖ್ಯಾತ ವೇಗಿ ಜೂಲನ್‌ ಗೋಸ್ವಾಮಿ ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಶ್ರೇಷ್ಠ ನಿರ್ವಹಣೆ ದಾಖಲಿಸಿದ್ದ ಪಾಕಿಸ್ಥಾನದ ಖ್ಯಾತ ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ 123 ರನ್‌ ಬಾರಿಸಿ ಜಯದ ರೂವಾರಿಯಾಗಿ ಕಾಣಿಸಿಕೊಂಡಿದ್ದ ಸಿದ್ರಾ ಅಮೀನ್‌ ಒಟ್ಟಾರೆ ಸರಣಿಯಲ್ಲಿ 72.66 ಸರಾಸರಿಯಂತೆ 218 ರನ್‌ ಗಳಿಸಿದ್ದರು. ಈ ಸಾಧನೆಯಿಂದಾಗಿ 30ರ ಹರೆಯದ ಅವರು 19 ಸ್ಥಾನ ಮೇಲಕ್ಕೇರಿದ್ದು ತನ್ನ ಜೀವನಶ್ರೇಷ್ಠ 35ನೇ ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾದ ನಾಯಕಿ ಚಮರಿ ಅತ್ತಪತ್ತು ಕೂಡ ರ್‍ಯಾಂಕಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದಾರೆ. 6 ಸ್ಥಾನ ಮೇಲಕ್ಕೇರಿರುವ ಅವರು 23ನೇ ಸ್ಥಾನ ಪಡೆದಿದ್ದಾರೆ.

Advertisement

ಇಂಗ್ಲೆಂಡಿನ ಸೋಫಿ ಎಕ್ಲೆಸ್ಟೋನ್‌ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಶಬಿ°ಮ್‌ ಇಸ್ಮಾಯಿಲ್‌ ಮತ್ತು ಆಸ್ಟ್ರೇಲಿಯದ ಜೆಸ್‌ ಜೋನಾಸ್ಸೆನ್‌ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next