Advertisement

ಮಾಸ್ಕ್ ತಯಾರಿಕೆಯತ್ತ ಸ್ತ್ರೀಶಕ್ತಿ ಸಂಘ

10:09 AM Apr 03, 2020 | Suhan S |

ಬೆಂಗಳೂರು: ಕೋವಿಡ್ 19 ವೈರಸ್‌ ಅಡಿಯಿಟ್ಟ ಮೇಲೆ ರಾಜ್ಯದಲ್ಲಿ ಮಾಸ್ಕ್ ಗಳ ಅಲಭ್ಯತೆಕಾಡುತ್ತಿದೆ. ಇದನ್ನೇ ಕೇಂದ್ರೀಕರಿಸಿ ಬೆಂಗಳೂರು ನಗರ ಜಿಪಂ ಬೆಂಗಳೂರು ದಕ್ಷಿಣ ತಾಲೂಕಿನ ಕೆಲವು ಗ್ರಾಪಂಗಳ ಸ್ವಸಹಾಯ ಗುಂಪುಗಳು ಈಗ ಸಾರ್ವಜನಿಕರಿಗೆ ಬೇಕಾದ ಮಾಸ್ಕ್ ತಯಾರಿಕೆಯಲ್ಲಿ ನಿರತವಾಗಿವೆ.

Advertisement

ಬೆಂ.ದಕ್ಷಿಣ ತಾ.ಚೋಳನಾಯಕನಹಳ್ಳಿ ಗ್ರಾಪಂನ ಶ್ರೀರಾಮ ಸಂಜೀವಿನಿ ಗ್ರಾಪಂ ಒಕ್ಕೂಟದ ಜನನಿ, ಜಯಭಾರತ, ಜಗದಾಂಬಿಕಾ ಸೇರಿದಂತೆ ಸ್ವಸಹಾಯ ಸಂಘ ಗಳು ಮಾಸ್ಕ್ ತಯಾರಿಕೆಯಲ್ಲಿ ನಿರತವಾಗಿದೆ. ಬ್ಯಾಗ್‌ ತಯಾರಿಸುತ್ತಿದ್ದ ಈ ಸಂಘ ಗಳು ಬ್ಯಾಗ್‌ ಜತೆಗೆ ಮಾಸ್ಕ್ ತಯಾರಿಕೆಗೆ ಮುಂದಾಗಿವೆ.

10 ಸಾವಿರ ಮಾಸ್ಕ್ ತಯಾರಿ: ರಾಜ್ಯದಲ್ಲಿ ಕೆಲವು ಕಡೆಗಳಲ್ಲಿ ಮಾಸ್ಕ್ ಅಲಭ್ಯತೆಯಿದೆ. ಆ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಸ್ತ್ರೀಶಕ್ತಿ ಸಂಘಗಳು ಮಾಸ್ಕ್ ತಯಾರಿಸುತ್ತಿವೆ. ಬೆಂ.  ನಗರ ಜಿಲ್ಲಾಧಿಕಾರಿಗಳ ಕಚೇರಿ, ಬೆಂ.ದಕ್ಷಿಣ ತಾಲೂಕು ಕಚೇರಿ, ಬೆಂ.ನಗರ ಜಿಪಂ ಅಧಿಕಾರಿಗಳು ಸೇರಿದಂತೆ ಹಲವು ಮಾಸ್ಕ್ಗೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಪ್ರತಿ ದಿನ ಸುಮಾರು 10 ಸಾವಿರ ಮಾಸ್ಕ್ ಸಿದ್ಧಪಡಿಸಲಾಗುತ್ತಿದೆ ಎಂದು ಜನನಿ ಸ್ತ್ರೀ ಶಕ್ತಿ ತಂಡದ ಮುಖ್ಯಸ್ಥೆ ರೋಹಿಣಿ ಮಾಹಿತಿ ನೀಡಿದ್ದಾರೆ

ಒಂದು ಯೂನಿಟ್‌ನಲ್ಲಿ ಸುಮಾರು ಇಪ್ಪತ್ತು ಜನರು ಬೆಳಗ್ಗೆಯಿಂದ ಸಂಜೆವರೆಗೂ ಕೆಲಸದಲ್ಲಿ ನಿರತರಾಗುತ್ತಾರೆ. ಬೆಂ.ದಕ್ಷಿಣ, ಬೆಂ. ಉತ್ತರ, ಆನೇಕಲ್‌ ಸೇರಿದಂತೆ ಹಲವು ಕಡೆಗಳಿಂದ ಮಾಸ್ಕ್ಗೆ ಬೇಡಿಕೆ ಬಂದಿದೆ. ಸುಮಾರು 5 ಲಕ್ಷ ಬಂಡವಾಳ ಹೂಡಿ ಪವರ್‌ ಮಷಿನ್‌ ಹಾಕಲಾಗಿದೆ. ಸರ್ಕಾರವು ಕೂಡ ಅನುದಾನದ ಜತೆಗೆ ಸವಲತ್ತು ನೀಡಿದೆ ಎಂದು ತಿಳಿಸಿದರು

ಮನೆಗಳಲ್ಲೂ ಮಾಸ್ಕ್ ಸಿದ್ಧಪಡಿಸುವಿಕೆ: ಒಂದು ಮಾಸ್ಕ್ಗೆ 10 ರೂ. ತೆಗೆದು ಕೊಳ್ಳ ಲಾಗುವುದು. ಹೆಚ್ಚಿನ ಆರ್ಡರ್‌ ಬಂದರೆ ಒಂದು ಮಾಸ್ಕ್ ಗೆ 9.50 ಪೈಸೆ ತೆಗೆದುಕೊಳ್ಳಲಾಗುವುದು. ಮಾಸ್ಕ್ಗೆ ಬೇಡಿಕೆ ಬರುತ್ತಿರುವ ಹಿನ್ನೆಲೆ ಎಲ್ಲವನ್ನೂ ಸ್ತ್ರೀ ಶಕ್ತಿ ಸಂಘಗಳಿಂದ ಪೂರೈಕೆ ಮಾಡಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿಯೇ ಯಾರು ಮನೆಗಳಲ್ಲಿ ಯಂತ್ರಗಳನ್ನು ಹೊಂದಿ ದ್ದಾರೊ ಅವರಿಗೂ ಮಾಸ್ಕ್ ಮಾಡಿಕೊಡು ವಂತೆ ವಿನಂತಿ ಮಾಡಿಕೊಡಲಾಗಿದೆ. ಮನೆಯಿಂದ ಮಾಸ್ಕ್ ಮಾಡಿಕೊಡುವವರಿಗೆ 1 ಮಾಸ್ಕ್ ಪೀಸ್‌ ಮೇಲೆ 2 ರೂ.ನೀಡ ಲಾಗುವುದು ಎಂದು ಜನನಿ ಸ್ತ್ರೀಶಕ್ತಿ ಸಂಘದ ಸದಸ್ಯರು ತಿಳಿಸಿದ್ದಾರೆ.

Advertisement

ಬೆಂ.ದಕ್ಷಿಣ ತಾಲೂಕಿನ ಕೆ.ಗೊಲ್ಲಹಳ್ಳಿ ಗ್ರಾಪಂನ ಆಶಾಕಿರಣ ಸಂಜೀವಿನಿ ಗ್ರಾಪಂ ಒಕ್ಕೂಟ ಹಲವು ಬಾರಿ ಬಳಕೆ ಮಾಡಬಹು ದಾದ ಮಾಸ್ಕ್ ಗಳ ಸಿದ್ಧಪಡಿಸುವಿಕೆಯಲ್ಲಿ ನಿರತವಾಗಿದೆ. ದಿನಕ್ಕೆ 250 ಮಾಸ್ಕ್ ಮಾತ್ರ ಸಿದ್ಧಪಡಿ ಸಲಾಗುತ್ತಿದೆ ಎಂದು ಒಕ್ಕೂಟದ ಮುಖ್ಯಸ್ಥೆ ಗೀತಾ ಹೇಳಿದ್ದಾರೆ.

ಬ್ಯಾಂಕ್‌ಗಳಲ್ಲೂ ಹೆಚ್ಚಿದ ಬೇಡಿಕೆ :  ಸರ್ಕಾರಿ ಕಚೇರಿಗಳ ಜತೆಗೆ ವಿವಿಧ ಬ್ಯಾಂಕ್‌ಗಳಿಗೂ ಕೂಡ ಮಾಸ್ಕ್ ಅಗತ್ಯವಿದೆ. ಆ ಹಿನ್ನೆಲೆಯಲ್ಲಿ ಹಲವು ಬ್ಯಾಂಕ್‌ ಅಧಿಕಾರಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಸಿದ್ಧಪಡಿಸಲು ಮನವಿ ಸಲ್ಲಿಸಿವೆ ಎಂದು ಒಕ್ಕೂಟದ ಮುಖ್ಯಸ್ಥೆ ಗೀತಾ ತಿಳಿಸಿದರು.

ಈ ಹಿಂದೆ ನಾವು ಬ್ಯಾಗ್‌ ತಯಾರಿಕೆಗೆ ಮಾತ್ರ ಸೀಮಿತವಾಗಿದ್ದೆವು. ಕೋವಿಡ್ 19  ವೈರಸ್‌ ರಾಜ್ಯಕ್ಕೆ ಅಡಿಯಿಟ್ಟ ಮೇಲೆ ಮಾಸ್ಕ್ ಅಲಭ್ಯತೆ ಉಂಟಾಯಿತು. ಅದನ್ನು ಗಮನದಲ್ಲಿಟ್ಟುಕೊಂಡು ಮಾಸ್ಕ್ ಸಿದ್ಧಪಡಿಸುವ ಕೆಲಸದಲ್ಲಿ ನಿರತರಾಗಿದ್ದೇವೆ. ಹಲವು ಕಡೆಗಳಿಂದ ಮಾಸ್ಕ್ ಗಳಿಗೆ ಬೇಡಿಕೆ ಬರುತ್ತಿದೆ.- ರೋಹಿಣಿ, ಶ್ರೀರಾಮ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಮುಖ್ಯಸ್ಥೆ

 

-ದೇವೇಶ್‌ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next