Advertisement
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರವು ಪ್ರೊ| ಹಿರೇಮಠ್ಠ ಸಭಾಂಗಣದಲ್ಲಿ ಆಯೋಜಿಸಿರುವ ಮಹಿಳೆ-ಸಾಹಿತ್ಯ ಮತ್ತು ಸಮಾಜ ಎಂಬ ಕಮ್ಮಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸೇರಿದಂತೆ ಮಹಿಳೆಯರಿಗೆ ಇರುವ ಸಾಕಷ್ಟು ಹಕ್ಕುಗಳನ್ನು ಬಳಸಿಕೊಳ್ಳುವಲ್ಲಿ ಸಮಾಜ ಸೋತಿದೆ ಎಂದರೆ ಸಾಹಿತ್ಯವು ಅರಿವು ಮೂಡಿಸುವಲ್ಲಿ ಕುಂಠಿತವಾಗಿದೆ ಎಂದರ್ಥ ಎಂದರು.
ಸರಸ್ವತಿ ಬಾಯಿ ಕಾರವಾಡೆ, ಯಶವಂತ ಚಿತ್ತಾಲರ ಕೃತಿಗಳು ಒಬ್ಬ ಅನಕ್ಷರಸ್ಥ, ಶೋಷಿತ, ದಲಿತ ಮಹಿಳೆ ನಾಯಕಿಯಾಗಿ ಬೆಳೆಯಬಹುದಾದ ಸಾಧ್ಯತೆಗಳನ್ನು ಮುಂದಿಟ್ಟವು. ಸಂವಿಧಾನವು ಪ್ರಗತಿಪರ ಮತ್ತು ವಾಸ್ತವಿಕತೆಯ ಪ್ರತೀಕವೇ ಹೊರತು ಸಂಪ್ರದಾಯದ್ದಲ್ಲ. ಒಂದು ವಾದದ ಪ್ರಕಾರ ಮಹಿಳೆಯರು ದಲಿತರಿಗಿಂತ ಹೆಚ್ಚು ಶೋಷಣೆಗೆ ಒಳಗಾಗಿದ್ದಾರೆ, ಸಂಘಟನೆಯ ಕೊರತೆ ಇಲ್ಲಿ ಚಳವಳಿಯ ಮಂದತ್ವಕ್ಕೆ ಕಾರಣವಾಗಿದೆ ಎಂದು ಎಚ್ಚರಿಸಿದರು. ಮಹಿಳೆಯರಲ್ಲೇ ದಲಿತ ಮಹಿಳೆಯರು ಮತ್ತಷ್ಟು ಶೋಷಣೆಗೆ ಒಳಗಾಗಿದ್ದು, ಜಾತಿ ವ್ಯಕ್ತಿಯನ್ನು ನಿಯಂತ್ರಿಸುವುದರೊಂದಿಗೆ ಎಲ್ಲ ಅವಕಾಶಗಳು ಮತ್ತು ಸಾಮಾಜಿಕ ಸಂಬಂಧಗಳನ್ನು ಕುಂಠಿತಗೊಳಿಸುತ್ತದೆ. ಭಾರತೀಯ ಸ್ತ್ರೀವಾದ ಇಂದು ತುರ್ತಾಗಿ ಬೇಕಿದ್ದು, ಪ್ರತಿಭಾ ನಂದಕುಮಾರ್ ಅವರ ನಾವು ಹುಡುಗಿಯರೇ ಹೀಗೆ ಎಂಬ ಕೃತಿ ಮಹಿಳಾ ಕೌಟುಂಬಿಕ ವ್ಯವಸ್ಥೆಯನ್ನು ಹೊಸದಿಕ್ಕಿಗೆ ಕೊಂಡೊಯ್ಯಬಲ್ಲದ್ದಾಗಿದೆ ಎಂದರು.
Related Articles
Advertisement
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವಿಯ ಕುಲಸಚಿವ ಪ್ರೊ| ಬೋಜ್ಯಾನಾಯ್ಕ ಮಾತನಾಡಿದರು. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ| ಗೀತಾ ಸಿ.ಕನ್ನಡ ಅಧ್ಯಯನ ವಿಭಾಗದ ಡಾ| ಪ್ರಶಾಂತನಾಯಕ ಇದ್ದರು.