ಆಳಂದ: ಮಹಿಳೆಯರ ಪರ ಕಾನೂನು ಇದೆ ಎಂದು ಕ್ಷುಲ್ಲಕ ಕಾರಣಕ್ಕೆ ಕೋರ್ಟ್, ಕಚೇರಿಗೆ ಬಂದರೆ ಸಮಾಜದ ಸ್ವಾಸಸ್ಥ್ಯ ಹದಗೆಡುತ್ತದೆ. ನಾನು ನನ್ನ ಕುಟುಂಬ, ಗಂಡ, ಮಕ್ಕಳ ಅತ್ತೆ, ಮಾವ, ತಂದೆ, ತಾಯಿ, ಸೋಹದರ ಎಂಬಾರ್ಥದಲ್ಲಿ ನಡೆಯಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಪ್ರಕಾಶ ಸಿ.ಡಿ. ಮಹಿಳೆಯರಿಗೆ ಸಲಹೆ ನೀಡಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಆಶ್ರಯದಲ್ಲಿ ಸಂಚಾರಿ ನ್ಯಾಯಾಲಯ ಹಾಗೂ ಸಾಕ್ಷರತಾ ರಥ ಜಾಥಾದ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೌರ್ಜನ್ಯ ಅಥವಾ ಲೈಂಕಿಕ ಕಿರುಕುಳ ಎದುರಾಗುವ ಮೊದಲೇ ಮಹಿಳೆ ಮೆಟ್ಟಿನಿಂತರೆ ಮುಂದಾಗುವ ಪ್ರಕರಣ
ಆರಂಭದಲ್ಲೇ ನಿವಾರಿಸಲು ಸಾಧ್ಯವಿದೆ. ಮಹಿಳೆಗಿದ್ದಷ್ಟು ಕಾಯ್ದೆಗಳು ಪುರುಷರಿಗಿಲ್ಲ. ಒಂದೊಮ್ಮೆ ಪುರುಷರಿಗಿದ್ದಿದ್ದರೆ ಅದೇಷ್ಟೋ ಪ್ರಕರಣಗಳು ದಾಖಲಾಗುತ್ತಿದ್ದವು. ಭ್ರೂಣ ಹತ್ಯೆಯಾಗಲಿ, ವರದಕ್ಷಣೆ ಕಿರುಕುಳ ಎಲ್ಲದಕ್ಕೂ ಮನೆ ಮಹಿಳೆ ಪಾಲಿರುತ್ತದೆ. ಕುಟುಂಬದಲ್ಲಿ ಮಹಿಳೆಯರಿಂದಲೇ ಮಹಿಳೆಯರಿಗೆ ಕಿರುಕುಳ ಹೆಚ್ಚಾಗಿರುತ್ತದೆ. ಒಂದರ್ಥದಲ್ಲಿ ಹೆಣ್ಣಿಗೆ ಹೆಣ್ಣೆ ಶಸುವಾಗಿದ್ದಾಳೆ. ಇಂಥವುಗಳಿಗೆ ಮನ ಪರಿವರ್ತನೆ ಜಾಗೃತಿಯೇ ಅವಶಕವಾಗಿದೆ.
ಮಹಿಳೆಯರು ಧಾರವಾಹಿ ಹಾಗೂ ಮೊಬೈಲ್ ಬಳಕೆ ಬಿಡಬೇಕು. 10ನೇ 12ನೇ ತರಗತಿಗೆ ಬಂದ ಹೆಣ್ಣು ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡದೆ ಹೋದರೆ ಮತ್ತೂಬ್ಬರು ಗಮನ ಕೊಡುತ್ತಾರೆ. ಇದರಿಂದ ನ್ಯಾಯಕ್ಕಾಗಿ ಕೋರ್ಟ್ ಕಚೇರಿ ಅಲೆದರೆ ಕುಟುಂಬದ ಮರ್ಯಾದೆ ಹಾಳಾಗುತ್ತದೆ. ನಿಜವಾಗಿಯೂ ಅನ್ಯಾಯ, ಅತ್ಯಾಚಾರವಾಗಿದ್ದರೆ ಕೋರ್ಟ್‌ಗೆ ಬಂದು ಕಾನೂನು ಸೇವೆ ಮೂಲಕ ನ್ಯಾಯ ಪಡೆಯಬೇಕು ಎಂದು ಹೇಳಿದರು.
ನ್ಯಾಯವಾದಿ ದೇವಾನಂದ ಹೋದಲೂಕರ್, ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಹಾಗೂ ನ್ಯಾಯವಾದಿ ಜೋತಿ ಹಂಚಾಟೆ, ಹೆಣ್ಣು ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಗುರುಪ್ರಸಾದ ಸಿ., ನ್ಯಾಯವಾದಿ ಸಂಘದ ಅಧ್ಯಕ್ಷ ಬಾಬಾಸಾಹೇಬ ವಿ. ಪಾಟೀಲ, ಸರ್ಕಾರಿ ವಕೀಲ ಮುಕುಂದ ದೇಶಪಾಂಡೆ, ಸಂಘದ ಕಾರ್ಯದರ್ಶಿ ಬಿ.ಎಸ್. ನಿಂಬರಗಿ, ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ, ಬಿ.ಎ. ದೇಶಪಾಂಡೆ, ಡಿ.ಎಸ್. ನಾಡಕರ್, ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಹಿರೇಮಠ, ಸೇವಾ ಸಮಿತಿಯ ಬಸವಣ್ಣಪ್ಪ ಬಿ. ಗುಡ್ಡೆವಾಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಿಡಿಪಿಒ ಶ್ರೀಕಾಂತ ಮೇಂಗಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾದೇವಿ ವಚ್ಛೆ ಪ್ರಾರ್ಥನೆ ಹಾಡಿದರು. ಶಿವಶಂಕರ ಮುನ್ನಳ್ಳಿ ನಿರೂಪಿಸಿದರು. ಮುದ್ದಸರ್ ಮುಲ್ಲಾ ವಂದಿಸಿದರು.