Advertisement

ಒಂದೆರಡು ವರ್ಷಗಳಲ್ಲಿ ವನಿತಾ ಐಪಿಎಲ್‌: ಶಿಖಾ ವಿಶ್ವಾಸ

10:12 PM Aug 01, 2020 | sudhir |

ಹೊಸದಿಲ್ಲಿ: ಇನ್ನು ಒಂದೆರಡು ವರ್ಷಗಳಲ್ಲಿ ಪೂರ್ಣ ಪ್ರಮಾಣದ ವನಿತಾ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದೆ ಎಂಬುದಾಗಿ ಭಾರತ ತಂಡದ ಪ್ರಧಾನ ವೇಗಿ ಶಿಖಾ ಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

“ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳ ಭಾರೀ ಸವಾಲುಗಳನ್ನು ನಿಭಾಯಿಸಬೇಕಾದರೆ ವನಿತೆಯರಿಗೂ ಐಪಿಎಲ್‌ ಏರ್ಪಡಿಸುವುದು ಅಗತ್ಯ. ರೋಚಕ ಐಪಿಎಲ್‌ನಲ್ಲಿ ಜಿದ್ದಾಜಿದ್ದಿ ಹೋರಾಟ ಕಾಣಬಹುದು. ಇದು ಪಂದ್ಯದ ಒತ್ತಡವನ್ನು ಹೇಗೆ ನಿಭಾಯಿಸಬಹುದೆಂಬುದನ್ನು ಕಲಿಸಿ ಕೊಡುತ್ತದೆ.

ಇನ್ನು ಒಂದೆರಡು ವರ್ಷಗಳಲ್ಲಿ ಬಿಸಿಸಿಐ ಪೂರ್ಣ ಪ್ರಮಾಣದಲ್ಲಿ ವನಿತಾ ಐಪಿಎಲ್‌ ಕೂಟವನ್ನು ಆಯೋಜಿಸಬಹುದೆಂಬ ವಿಶ್ವಾಸವಿದೆ’ ಎಂದು ಶಿಖಾ ಪಾಂಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next